- ಒಂದೇ ಕುಟುಂಬಕ್ಕೆ ಸೇರಿದ್ದ ಮೂವರು
- ಊರಿಗೆ ಊರೇ ಶೋಕ ಸಾಗರದಲ್ಲಿ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಮಕ್ಕಿಮನೆಯ ಗ್ರಾಮದ ಸುಧಕರ ಎಂಬುವರ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಹೊನ್ನವಳ್ಳಿಯಲ್ಲಿ ವೀಣಾ(೪೯) ಅಂಗನವಾಡಿ ಶಿಕ್ಷಕಿಯಾಗಿದ್ದವರು, ಮಗಳು ಶ್ರಾವ್ಯ (೧೫) ಹತ್ತನೇ ತರಗತಿ ಓದುತ್ತಿದ್ದಳು, ಶಾರದಮ್ಮ (೭೦) ಮೂವರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂಗನವಾಡಿಯ ಆಯಾ ಪೂರ್ಣಿಮಾ ಎಂಬುವರು ವೀಣಾ ಅವರ ಪೊನ್ ಸತತ ಪ್ರಯತ್ನಕ್ಕೆ ಸಿಗದೆ ಹೋದಾಗ, ಸ್ಥಳೀಯರು ಅನುಮಾನದಿಂದ ಹೆಂಚು ತೆಗೆದು ನೋಡಿದ್ದಾರೆ, ಆಗ ವಿಷಯ ಬೆಳಕಿಗೆ ಬಂದಿದೆ.
ಈ ದುರ್ಘಟನೆಗೆ ಕಾರಣ ಏನೆಂದು ಇದುವರೆಗೆ ಬಹಿರಂಗವಾಗಿಲ್ಲ. ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಲು ಕೊಪ್ಪ DYSP ರಾಜು ನಿರಾಕರಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

























Discussion about this post