ಬೆಂಗಳೂರು : ಕನ್ನಡದ ಸಿನಿಮಾಗಳಿಂದ ಪ್ರಭಾವಿತನಾಗಿದ್ದ ವ್ಯಕ್ತಿಯೋರ್ವ ಸಿನಿಮಾ ಶೈಲಿಯಲ್ಲಿಯೇ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ರಾಜದಾನಿಯಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅನ್ನಪೂರ್ಣೇಶ್ವರಿ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಾಂತರಾಜ್ ಪತ್ನಿ ರೂಪಾ (೩೪ ವರ್ಷ) ಕತ್ತನ್ನ ಚಾಕುವಿನಿಂದ ಇರಿದು ಕೊಲೆ ನಡೆದಿತ್ತು.
ಕೊಲೆಯಾದ ನಂತರದಲ್ಲಿ ಪತಿ ಕಾಂತರಾಜು ಮನೆಯಿಂದ ನಾಪತ್ತೆಯಾಗಿದ್ದ. ಹೀಗಾಗಿ ಪತಿಯೇ ಕೊಲೆ ಮಾಡಿರೋ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು. ಕಾಂತರಾಜು ತನ್ನ ಪತ್ನಿ ರೂಪಾ ಅನೈತಿಕ ಸಂಬಂಧವಿರುವ ಕುರಿತು ಅನುಮಾನ ಹೊಂದಿದ್ದ. ಇದೇ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದ. ಪತ್ನಿಯನ್ನು ಕೊಲೆ ಮಾಡಿದ ನಂತರದಲ್ಲಿ ಕಾಂತರಾಜು ರೂಪಾ ಜೊತೆಗೆ ಸಂಪರ್ಕದಲ್ಲಿದ್ದ ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಬೆದರಿಕೆಯನ್ನು ಒಡ್ಡಿದ್ದಾನೆ. ಅವರಿಬ್ಬರೂ ಕೂಡ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರು ಪಡೆದ ಪೊಲೀಸರು ಕಾಂತರಾಜುವನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆಯಲ್ಲಿ ತಾನೇ ಕೊಲೆ ಮಾಡಿರುವುದನ್ನೂ ಒಪ್ಪಿಕೊಂಡಿದ್ದಾನೆ. ಬಾನಲ್ಲೇ ..ಬಾನಲ್ಲೇ ಮಧುಚಂದ್ರಕೆ ಸಿನಿಮಾ ಶೈಲಿಯಲ್ಲಿ ಕೊಲೆ ಮಾಡುವ ಸಲುವಾಗಿ ಜೋಗ ಫಾಲ್ಸ್‌ಗೆ ಪತ್ನಿಯನ್ನು ಕರೆತಂದಿದ್ದ. ಆದರೆ ಈ ಇಲ್ಲಿ ಕೊಲೆ ಮಾಡಿದ್ರೆ ತಾನೇ ಕೊಲೆ ಮಾಡಿರೋದು ಗೊತ್ತಾಗುತ್ತೆ ಅಂತಾ ಸುಮ್ಮನಾಗಿದ್ದ. ನಂತರ ಯುಗಪುರಷ ಸಿನಿಮಾದ ಶೈಲಿಯಲ್ಲಿ ಕಾರಿನಿಂದ ಗುದ್ದಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಅದೂ ಕೂಡ ಆಗಿರಲಿಲ್ಲ.
ಅಂತಿಮವಾಗಿ ಮನೆಯಲ್ಲಿಯೇ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

























Discussion about this post