ಚಾಮರಾಜನಗರ: ಅಜ್ಜಿ-ಮೊಮ್ಮಗಳು ವಾಸಿಸುತ್ತಿದ್ದ ಮನೆಯೊಂದರಲ್ಲಿ ಅಜ್ಜಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲೇ ಸಿಲಿಂಡರ್ ಸ್ಫೋಟವಾಗುವ ಘಟನೆ ನಡೆದಿದೆ. ಅಡುಗೆ ಮಾಡುತ್ತಿದ್ದ ಗ್ಯಾಸ್ ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡು ಸಿಲಿಂಡರ್ ಸ್ಫೋಟಗೊಂಡು ಮನೆಯು ಧಗದಗನೇ ಉರಿದರೂ, ಮೊಮ್ಮಗಳ ಸಮಯಪ್ರಜ್ಞೆಯಿಂದಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದ ನಿವಾಸಿ ಲಕ್ಷ್ಮಮ್ಮ(75) ಎಂಬುವರು ಅಡುಗೆ ಮಾಡುತ್ತಿದ್ದ ವೇಳೆ, LPG ಸಿಲಿಂಡರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏನಾದರೂ ಅಪಾಯ ಆಗಬಹುದು ಎಂದು ಊಹಿಸಿದ ಮೊಮ್ಮಗಳು ಮೇಘನಾ, ಅಜ್ಜಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾಳೆ.
ಅಜ್ಜಿ, ಮೊಮ್ಮಗಳು ಹೊರಬರುತ್ತಿದ್ದಂತೆಯೇ ಸಿಲಿಂಡರ್ ಸ್ಪೋಟಗೊಂಡಿದೆ. ಧಗ ಧನೆ ಮನೆ ಹೊತ್ತಿ ಉರಿದಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿದೆ.

























Discussion about this post