ಮಣಿಪುರ: ಇಂಪಾಲದ ಪೊಲೀಸ್ ಸಿಬ್ಬಂದಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಷಾಕ್ ಹೊಡೆದಿದ್ದು, ಬರೋಬ್ಬರಿ ೯೦ ಕೋಟಿ ಬೆಲೆಯ ಡ್ರಗ್ಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಯಾಯ್ ರಿಕ್ ಪೋಕ್ ತುಳಿಹಾಳ್ ಅವಂಗ್ ಲೆಕೈ ಎಂಬ ಪ್ರದೇಶದಲ್ಲಿ ಪೊಲೀಸ್ ಮುಖ್ಯ ಪೇದೆಯ ಮನೆ ಇದ್ದು, ಅಲ್ಲಿ ಇದ್ದ ಡ್ರಗ್ಸ್ ಕಾರ್ಖಾನೆಯನ್ನು ಪೊಲೀಸರೇ ಬಯಲಿಗೆಳೆದಿದ್ದಾರೆ.
ಖಚಿತ ಮಾಹಿತಿ ಪಡೆದಿದ್ದ ಪೊಲೀಸರಿಗೆ ದಾಳಿ ನಡೆಸಿದಾಗ ಷಾಕ್ ಹೊಡಿದಿದ್ದಂತು ನಿಜ. ಹೆಡ್ ಕಾನ್ಸ್ ಟೇಬಲ್ ಸೇರಿ ಮೂವರನ್ನು ಬಂಧಿಸಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ೯೦ ಕೋಟಿಗೂ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

























Discussion about this post