ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಆತಂಕಕಾರಿ ವಿಷಯಗಳನ್ನು ಬಯಲಿಗೆಳೆದಿದ್ದಾರೆ. ಅತ್ಯಾಚಾರಿಗಳು ಯುವತಿಗೆ ಬೆದರಿಕೆ ಹಾಕಿದ್ದು, ಆಕೆಯ ವಿಡಿಯೋ ತೆಗೆದುಕೊಂಡು ೩ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಜೊತೆಗೆ ಪೊಲೀಸರಿಗೆ ದೂರು ನೀಡದಂತೆ ಸಹ ಎಚ್ಚರಿಕೆ ನೀಡಿದ್ರು ಎಂದು ಯುವತಿ ಹೇಳಿಕೆ ನೀಡಿದ್ದಾಳೆ.
ಯುವತಿಯ ಅತ್ಯಾಚಾರ ನಡೆಸಿ, ಅಕೆಯಿಂದ ೩ ಲಕ್ಷ ಬೇಡಿಕೆ ಇಟ್ಟು, ಹಣ ಕೊಡದೇ ಇದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುವುದಾಗಿ ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನುವ ವಿಚಾರಗಳು ಈಗ ಪೊಲೀಸರ ವಿಚಾರಣೆಯ ವೇಳೆ ಬಹಿರಂಗಗೊಂಡಿವೆ.
ಘಟನೆ ಕುರಿತಂತೆ ಪೊಲೀಸರು ಬಾಧಿತ ಯುವತಿ ಮತ್ತು ಥಳಿತಕ್ಕೊಳಗಾದ ಆಕೆಯ ಬಾಯ್ ಫ್ರೆಂಡ್ ನಿಂದ ಸಮರ್ಪಕ ಮಾಹಿತಿ ಕಲೆಹಾಕುತ್ತಿದ್ದಾರೆ. ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ, ಅಲ್ಲದೆ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಗ್ಯಾಂಗ್ ರೇಪ್ ನಡೆದ ಸ್ಥಳ ನಿರ್ಜನ ಪ್ರದೇಶವಾಗಿದ್ದು, ಮೊಬೈಲ್ ಲೊಕೇಶನ್ ಆಧರಿಸಿ ಯಾವೆಲ್ಲಾ ಮೊಬೈಲ್ ಕಾರ್ಯನಿರ್ವಹಿಸಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಘಟನೆಯ ಸ್ಥಳದಲ್ಲಿ ಮಧ್ಯದ ಬಾಟಲಿಗಳು ಸಿಕ್ಕಿರುವುದರಿಂದ, ಅಲ್ಲಿ ಹೆಂಡದ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

























Discussion about this post