ಚಿಕ್ಕಮಗಳೂರು : ಖ್ಯಾತ ಪರಿಸರವಾದಿ ಡಿ.ವಿ ಗಿರೀಶ್ ಮೇಲೆ ಈ ಹಿಂದೆ 7 ಮಂದಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ, ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಏಳು ಜನ ಯುವಕರನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಂಬಿಹಳ್ಳಿ ಗ್ರಾಮದಲ್ಲಿ ಆಗಸ್ಟ್ 30 ರಂದು ಗಿರೀಶ್ ಜೊತೆಗೆ ಇದ್ದ ಅವರ ಸ್ನೇಹಿತರ ಮೇಲೆ ಸಹ ಹಲ್ಲೆ ಮಾಡಿದ್ದರು.
ವಾಹನದಲ್ಲಿ ಬರುವಾಗ ಗಿರೀಶ್ ಜೊತೆಯಿದ್ದ ಸ್ನೇಹಿತರ ಮಗಳನ್ನು ಕಿಡಿಗೇಡಿಗಳು ಚುಡಾಯಿಸಿದ್ದು, ಅದನ್ನು ಪ್ರಶ್ನಿಸಿದಾಗ ಪಾನಮತ್ತರಾಗಿದ್ದ ಯುವಕರು ಕೋಪಗೊಂಡು ಪರಿಸರವಾದಿ ಗಿರೀಶ್ ಹಾಗೂ ಅವರ ಜೊತೆಗಿದ್ದ ಸ್ನೇಹಿತರ ಮೇಲೆ ಸಹ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ
ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು. ಗಿರೀಶ್ ಅವರು ನೀಡಿದ ದೂರಿನ ಮೇರೆಗೆ ಈಗ ಪೊಲೀಸರು ೭ ಜನರನ್ನು ಬಂಧಿಸಿ ತನಿಖೆ ಶುರುಮಾಡಿದ್ದಾರೆ.

























Discussion about this post