ಉತ್ತರ ಪ್ರದೇಶ: ಗರ್ಭಿಣಿ ಸ್ತ್ರೀ ಮೇಲೆ ಸಾಮೂಹಿಕ ಅತ್ಯಾಚಾರ: ಅಧಿಕ ರಕ್ತಸ್ತ್ರಾವದಿಂದ ಮರಣ ಹೊಂದಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನ ಆರು ತಿಂಗಳ ಹಿಂದೆ ಅತ್ಯಾಚಾರಕ್ಕೆ ಗುರಿಯಾಗಿದ್ದ ದಲಿತ ಮಹಿಳೆ (೨೦) ಗರ್ಭಪಾತ ನಡೆಸುವ ವೇಳೆ ಮೃತಪಟ್ಟಿದ್ದು, ಆರೋಪಿ, ಆತನ ತಂದೆ, ಚಿಕ್ಕಪ್ಪ, ಖಾಸಗಿ ಆಸ್ಪತ್ರೆಯ ವೈದ್ಯನನ್ನು ಪೊಲೀಸರು ಬಲೆಗೆ ಹಾಕಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಆಕೆಗೆ ಅತ್ಯಾಚಾರ ಮಾಡಲಾಗಿದ್ದು, ಈ ಬಗ್ಗೆ ದೂರು ನೀಡದಂತೆ ಬಹುಶಃ ಬೆದರಿಕೆ ಒಡ್ಡಿರಬಹುದು. ಆಕೆಗೆ ರಕ್ತಸ್ರಾವವಾದ ಕಾರಣ ಸೆ. ೨೫ರಂದು ಆಸ್ಪತ್ರೆಗೆ ಕರೆತಂದಾಗ ಆಕೆ ಗರ್ಭವತಿ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಗರ್ಭಪಾತ ಮಾಡಿಸಲು ಹೋಗಿದ್ದು, ಇನ್ನಷ್ಟು ಸ್ರಾವ ಹೆಚ್ಚಾಗಿ ಅತ್ಯಾಚಾರ ಸಂತ್ರಸ್ತೆ ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಅತ್ಯಾಚಾರ ಆರೋಪಿ ಶೈಲೇಂದ್ರ ಸಿಂಗ್ ಮೇಲೆ FIR ದಾಖಲಿಸಲಾಗಿದ್ದು. ಗರ್ಭಪಾತಕ್ಕೆ ಒತ್ತಡ ಹೇರಿದ್ದ ಆತನ ತಂದೆ, ಚಿಕ್ಕಪ್ಪನ ವಿರುದ್ಧ, ಗರ್ಭಪಾತ ಚಿಕಿತ್ಸೆ ಆರೋಪದಡಿ ವೈದ್ಯವಿರುದ್ಧ ಸಹ ಪ್ರಕರಣ ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿದೆ.

























Discussion about this post