ತಿರುವನಂತಪುರಂ: ಮೂರು ವಿಸಿಟಿಂಗ್ ಕಾರ್ಡ್ ಗೃಹಿಣಿಯ ಸಾವಿಗೆ ಕಾರಣವಾಗಿದೆ ಎಂಬುದನ್ನು ಕೇರಳದ ನಿವ್ರುತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.
ತಿರುವನಂತಪುರಂ ಬಳಿ ಚಾಲ ಎಂಬಲ್ಲಿ ಈ ಘಟನೆ ನಡೆದಿತ್ತು. ಅಕಸ್ಮಾತ್ ಮೊದಲನೆಯ ಆರೋಪಿಗೆ ಒಬ್ಬನ ಜೊತೆಗೆ ಪರಿಚಯ ಆಗುತ್ತದೆ. ಆತನ ಪತ್ನಿ ಚೆಲುವೆ ಎಂಬುದಕ್ಕಾಗಿ ಆಕೆಯನ್ನು ಕಂಡು ಮೋಹಗೊಳ್ಳುತ್ತಾನೆ, ವಿಸಿಟಿಂಗ್ ಕಾರ್ಡ್ ನೀಡಿ ಅನೈತಿಕ ಸಂಬಂಧ ಶುರು ಹಚ್ಕೋತಾನೆ.
ತನ್ನ ರಾಸಲೀಲೆಯ ಕಥೆಯನ್ನ ಇನ್ನೊಬ್ಬ ಸ್ನೇಹಿತನಿಗೆ ಹೇಳಿಕೋತಾನೆ, ಆ ಮೂರನೆಯ ವ್ಯಕ್ತಿಗೂ ಆಕೆಯ ಮೇಲೆ ಮನಸ್ಸಾಗುತ್ತದೆ, ಸ್ನೇಹಿತನ ಸ್ನೇಹಿತ ಮೊದಲನೆಯ ಆರೋಪಿಯ ಶೇನಿತನ ಪರಿಚಯ ಮಾಡಿಕೊಡುತ್ತಾನೆ, ಮನೆಗೂ ಭೇಟಿ ನೀದುತ್ತಾನೆ, ಗೃಹಿಣಿಗೆ ತನ್ನ ವಿಸಿಟಿಂಗ್ ಕಾರ್ಡ್ ನೀಡಿ, ತನ್ನ ಸ್ನೇಹಿತನೊಂದಿಗೆ ಅನೈತಿಕ ಸಂಬಂಧ ಕುದುರಿರುವುದು ಗೊತ್ತೆಂದು ಬೆದರಿಕೆ ಒಡ್ಡಿ, ತನ್ನ ಕಾಮದಾಸೆಗೆ ಆಕೆಯನ್ನು ಬಳಸಿಕೊಳ್ಳುತ್ತಾನೆ.
ಎರಡನೆಯ ಆರೋಪಿ ಮತ್ತೊಬ್ಬ ಸ್ನೇಹಿತ (ಮೂರನೇ ಆರೋಪಿ)ನಿಗೆ ಈ ವಿಷಯವನ್ನು ಹೇಳಿದಾಗ, ಆತನೂ ಬಂದು ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ಹೋಗಿರ್ತಾನೆ. ಇದರಿಂದ ಭಯಗೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಮೂರನೇ ಆರೋಪಿ ವಿಸಿಟಿಂಗ್ ಕಾರ್ಡ್ ಕೊಟ್ಟು ಹೋಗಿರುತ್ತಾನೆ, ಆದರೆ ಇನ್ನೂ ದೈಹಿಕ ಸಂಬಂಧ ಬೆಳೆಸಿರುವುದಿಲ್ಲ.
ತನಿಖೆ ನಡೆಸಿದ ಪೊಲೀಸರು ಘಟನೆಯ ಪುರ್ವಾಪರ ಬಯಲಿಗೆಳೆದಿದ್ದಾರೆ. ಇದೇ ಸಂದರ್ಭ ಮಹಿಳೆ ತನ್ನ ಪತಿಗೆ ಕ್ಷಮೆ ಪತ್ರ ಬರೆದಿಟ್ಟಿದ್ದು, ಒಂದು ತಪ್ಪನ್ನು ಮುಚ್ಚಲು ಹೋಗಿ ಮಾನಸಿಕವಾಗಿ ನೊಂದುಹೋಗಿದ್ದನ್ನು ವಿವರಿಸಿದ್ದಾಳೆ ಎನ್ನಲಾಗಿದೆ.

























Discussion about this post