ಧಾರವಾಡ: ಭಿಕ್ಷೆ ಕೇಳುತ್ತಿದ್ದ ೧೪ ವರ್ಷ ಬಾಲಕಿಗೆ ತಿಂಡಿ ಕೊಡುವುದಾಗಿ ಆಸೆ ತೋರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆಯು ಮಕ್ಕಳ ಹಕ್ಕುಗಳ ಆಯೋಗದಿಂದ ಬೆಳಕಿಗೆ ಬಂದಿದೆ. ಮಕ್ಕಳ ಹಕ್ಕುಗಳ ಆಯೋಗ ಬಾಲಕಿಯನ್ನು ಕರೆತಂದು ಕೌನ್ಸಲಿಂಗ್ ನಡೆಸಿದ್ದು, ಭಿಕ್ಷೆ ಬೇಡುವಾಗ ಆಕೆಯ ಮೇಲೆ ಅತ್ಯಾಚಾರ ಆದ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ.
ಎಗ್‍ರೈಸ್ ಹಾಗೂ ಗೋಬಿ ತಿನ್ನಿಸುವ ಆಸೆ ತೊರಿಸಿ ಅತ್ಯಾಚಾರ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಬಾಲಕಿಯು ಖಚಿತ ಮಾಹಿತಿ ನೀಡಿರುತ್ತಾಳೆ. ಈಗ ಬಾಲಕಿಯನ್ನು ನಿರ್ಭಯಾ ಕೇಂದ್ರದಲ್ಲಿ ಇಡಲಾಗಿದ್ದು, ಅತ್ಯಾಚಾರ ನಡೆಸಿದವರು ಯಾರು ಎಂದು ಬಾಲಕಿಗೆ ಗೊತ್ತಿಲ್ಲ. ಆದರೆ ಅವರನ್ನು ನೋಡಿದರೆ ಗುರುತು ಹಿಡಿಯುವದಾಗಿ ತಿಳಿಸಿದ್ದಾಳೆ.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಮಲಾ ಈ ಮಾಹಿತಿಗಳ ಆಧಾರದ ಮೇಲೆ ಅವರು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೇ ಬಾಲಕಿಯ ಜೊತೆ ಈ ಹಿಂದೆ ಓರ್ವ ಯುವಕ ಅಸಭ್ಯ ವರ್ತನೆ ಮಾಡುವಾಗ ಸಾರ್ವಜನಿಕರು ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಈ ಬಗ್ಗೆ ಕೂಡಾ ಪೊಲೀಸರಿಗೆ ಮಾಹಿತಿ ನೀಡಿ, ಯುವಕನನ್ನು ಸಹ ವಿಚಾರಣೆಗೆ ಒಳಪಡಿಸಲು ಸೂಚಿಸಲಾಗಿದೆ.

























Discussion about this post