ಬೆಂಗಳೂರು: ನಿನ್ನೆಯಷ್ಟೇ ಕಿರುತೆರೆ ನಟಿ ಸೌಜನ್ಯ ಯಾನೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಕಿರುತೆರೆಯ ಓರ್ವ ನಟ ಹಾಗೂ ಸವಿ ಪಿ.ಎ ಮಹೇಶ್ ವಿರುದ್ಧ ಸವಿ ತಂದೆ ಮಾದಪ್ಪ, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬ ಮಗಳಿಗೆ ಪರಿಚಿತನಿದ್ದ. ಆತ ತನ್ನನ್ನು ಮದುವೆಯಾಗು ಎಂದು ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ಆತನೇ ಬೆಳಗ್ಗೆ ಮನೆ ಬಳಿ ಬಂದು ಕಿರುಕುಳ ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ನನ್ನ ಮಗಳು ಸಾಯುವ ನಿರ್ಧಾರ ಮಾಡಿರಬಹುದು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸವಿ ತಂದೆ ಉಲ್ಲೇಖಿಸಿದ್ದಾರೆ.
ಘಟನೆ ವಿವರ:
ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ(25) ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮನೆಗೆ ಬರಬೇಕಿದ್ದ ಮಗಳು ದಿಡೀರ್ ಆತ್ಮಹತ್ಯೆ:
ಮಗಳು ಹಾಗೂ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರಿಬ್ಬರೂ ಕೂಡ ಬೇರೆ, ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಕರೆ ಮಾಡಿ ಇಬ್ಬರು ಕೊಡಗಿಗೆ ಬರುವುದಾಗಿ ತಿಳಿಸಿದ್ದರು. ಇಂದು ಅವರು ಬರಬೇಕಿತ್ತು ಅದರೆ ಈ ರೀತಿಯಲ್ಲಿ ಅಗುತ್ತದೆ ಎಂದು ನಿರೀಕ್ಷೆ ಮಾಡಿರಲ್ಲಿಲ್ಲ. ನಿನ್ನೆ ಸಂಜೆ ಕರೆ ಮಾಡಿದಾಗ ತನ್ನ ಬಳಿ 6 ಲಕ್ಷ ರೂಪಾಯಿ ಹಣ ಇದೆ ಎಂದು ಸೌಜನ್ಯ ಹೇಳಿದ್ದಳು. ಅದರೆ ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದರೆ ಅನುಮಾನ ಮೂಡಿದೆ. ಅಲ್ಲಿಯ ಪೊಲೀಸರು ನಾವು ಹೋಗುವ ಮೊದಲೇ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಇದು ನಮಗೆ ಇನ್ನಷ್ಟು ಅನುಮಾನ ಮೂಡುವಂತೆ ಮಾಡಿದೆ ಎಂದು ತಂದೆ ಮಾದಪ್ಪ ತಿಳಿಸಿದ್ದಾರೆ.

























Discussion about this post