ಭೂಪಾಲ್: ಉದ್ಯೋಗವಿಲ್ಲದೆ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಸಿವಿನ್ ಎಂಜಿನಿಯರ್ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳ ಕುತ್ತಿಗೆ ಸೀಳಿ, ತಾನೂ ಪತ್ನಿಯೊಂದಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ.
ನಗರದ ಮಿಸ್ ರೋಡ್ ಠಾಣೆ ವ್ಯಪ್ತಿಯ ಅಪಾರ್ಟ್ ಮೆಂಟ್ ನಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ. ೧೬ ವರ್ಷದ ಮಗ ಸತ್ತುಹೋಗಿದ್ದಾನೆ, ೧೪ ವರ್ಷದ ಮಗಳು ಬದುಕಿಗಾಗಿ ಸೆಣಸುತ್ತಿದ್ದಾಳೆ. ತಾಯಿ ಕೂಡಾ ಬುದುಕುಳಿದಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
೫೫ ವರ್ಷದ ಸಿವಿಲ್ ಎಂಜಿನಿಯರ್ ತನ್ನ ಪತ್ನಿಯೊಂದಿಗೆ ಆತ್ಮಹತ್ಯೆಗೆ ನಿರ್ಧರಿಸಿದ್ದರು, ಎರಡು ಮೂರು ದಿವಸ ಪ್ಲಾನ್ ಕೂಡಾ ಮಾಡಿದ್ದರು. ಕೋವಿಡ್ ಸಮಸ್ಯೆಯಿಂದಾಗಿ ಉದ್ಯೋಗವಿಲ್ಲದ ಆತ ಆರ್ಥಿಕ ಸಂಕಷ್ಟದಿಂದ ಕುಟುಂಬ ನಡೆಸಲು ಅಸಮರ್ಥನಾಗಿದ್ದ.
ಡೆತ್ ನೋಟ್ ಬರೆದಿರುವ ಈತ, ಮನೆಯ ತಿಂಗಳ ಕಂತಿಗೂ ಪರದಾಟ, ಮಕ್ಕಳ ಶಾಲೆ ಖರ್ಚಿಗೂ ಹಣವಿಲ್ಲ, ನಾವು ಸತ್ತರೆ ಮಕ್ಕಳ ಭವಿಷ್ಯಕ್ಕೂ ಕತ್ತಲೆ, ಹೀಗಾಗಿ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಉಲ್ಲೇಖಿಸಿದ್ದಾರೆ. ತಂದೆ, ಮಗ ತೀರಿಹೋಗಿದ್ದು, ತಾಯಿ ಬದುಕಿದ್ದಾರೆ, ಮಗಳು ಇನ್ನೂ ಜೀವನ್ಮರಣ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

























Discussion about this post