ಚಿಕ್ಕಮಗಳೂರು: ಬಾಗಿನ ಕೊಟ್ಟು ವಾಪಸಾಗುತ್ತಿದ್ದ ವೇಳೆ ಟಿವಿಎಸ್ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ತಂದೆ ಮಗಳು, ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೆ ಬೋರನಹಳ್ಳಿ ಬಳಿ ನಡೆದಿದೆ.
ಮುಗುಳುವಳ್ಳಿ ಗ್ರಾಮದ ಜಯಣ್ಣ(58) ರಕ್ಷಿತ(19) ಮೃತ ದುರ್ದೈವಿಗಳು. ಪಿಳ್ಳೆ ನಲ್ಲಿಯ ದೊಡ್ಡ ಮಗಳ ಮನೆಗೆ ಬಾಗಿನ ಕೊಟ್ಟು, ಚಿಕ್ಕ ಮಗಳ ಜೊತೆ ವಾಪಸ್ ಬರುವಾಗ ಗ್ಯಾಸ್ ಸಿಲೆಂಡರ್ ತುಂಬಿದ್ದ ಲಾರಿ, ಹಾಗೂ ಟಿವಿಎಸ್ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ತಂದೆ ಮಗಳು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























Discussion about this post