• Home
  • About Us
  • Contact Us
  • Terms of Use
  • Privacy Policy
Thursday, June 25, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Uttar Pradesh: ತೀರ್ಥಕ್ಷೇತ್ರವೆಂದು ಮೈಮರೆತರೆ, ನಿಮಗೂ ಆಗಬಹುದು ಇದೇ ಗತಿ.. ಎಚ್ಚರಿಕೆ..!

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

    Delhi News: ದೆಹಲಿಯ ಸರೋಜ್ನಿ ಮಾರ್ಕೇಟ್‌ನಲ್ಲಿ ಖರೀದಿಸಿದ ವಸ್ತ್ರಗಳ ಹಿಂದಿನ 4 ಹಾರರ್ ಸ್ಟೋರಿ

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಕ್ರೈಂ

ಬಾಲಕಿಗೆ ಅಶ್ಲೀಲ ನಿಂದನೆ ಆರೋಪ ಪೋಕ್ಸೋ ಕಾಯ್ದೆಯಡಿ 7 ಮಂದಿ ಬಂಧನ

Shri News Desk by Shri News Desk
Sep 3, 2021, 09:24 pm IST
in ಕ್ರೈಂ, ಚಿಕ್ಕಮಗಳೂರು
Share on FacebookShare on TwitterTelegram

ಚಿಕ್ಕಮಗಳೂರು: ಪರಿಸರವಾದಿ ಡಿ.ವಿ.ಗಿರೀಶ್ ಮೇಲಿನ ಹಲ್ಲೆ ಜತೆಗೆ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿ ಕೈಹಿಡಿದು ಎಳೆದಾಡಿದ ಆರೋಪದ ಮೇಲೆ ಭಾರತೀಯ ದಂಡಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯಡಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್ ಅಕ್ಷಯ್ ತಿಳಿಸಿದರು.

ಈ ಸಂಬಂಧ ಶುಕ್ರವಾರ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ಚಿಕ್ಕಮಗಳೂರು ತಾಲ್ಲೂಕಿನ ಕಂಬಿಹಳ್ಳಿ ಬಳಿ ಪರಿಸರವಾದಿ ಡಿ.ವಿ ಗಿರೀಶ್ ಹಾಗೂ ಸ್ನೇಹಿತರುಗಳು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೆಲವು ಯುವಕರು ಮದ್ಯದ ಅಮಲಿನಲ್ಲಿ ಜೀಪಿನಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಅಶ್ಲೀಲ ಪದಗಳಿಂದ ಚುಡಾಯಿಸಿ ಅವಾಚ್ಯವಾಗಿ ನಿಂದಿಸಿದಾಗ ಇದನ್ನು ಪ್ರಶ್ನಿಸಿದ್ದಕ್ಕೆ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದರು ಅಲ್ಲದೇ ಬಾಲಕಿಯ ಕೈಹಿಡಿದು ಎಳೆದಾಡಲು ಮುಂದಾಗಿದ್ದರು ಎಂಬ ಆರೋಪದ ಮೇಲೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳೆಲ್ಲರೂ ಟಿಂಬರ್, ಗಣಿ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಇದ್ದವರು. ಆ.30 ರಸಂಜೆ ವೇಳೆಯಲ್ಲಿ ಗಿರೀಶ್ ತನ್ನ ಸ್ನೇಹಿತರೊಂದಿಗೆ ಜೀಪಿನಲ್ಲಿ ತೆರಳಿದ್ದಾಗ ಘಟನೆ ನಡೆದಿದೆ. ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರ ಗುಂಪು ಬೈಕ್ ಮೂಲಕ ಹಿಂಬಾಲಿಸಿಕೊಂಡು ಬಂದು ಜೀಪನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.

ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡು ರಾಜ್ಯದ ವಿವಿದೆಡೆ ಸಂಚರಿಸುತ್ತಿದ್ದ ಕಾರಣ ಅವರನ್ನು ಪತ್ತೇಹಚ್ಚಲು ಪಿಐ ಸ್ವರ್ಣ ಜಿ.ಎಸ್, ಗ್ರಾಮಾಂತರ ಠಾಣೆ ಪಿಎಸ್‍ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್‍ಐ ಅನಿಲ್‍ಕುಮಾರ್‍ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್‍ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್‍ಪಿ ಜಿ.ತಲಕಟ್ಟಿಯವರ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಬಳ್ಳಾರಿಯಲ್ಲಿ 2 ಮಂದಿಯನ್ನು, ಬೆಂಗಳೂರಿನಲ್ಲಿ 3, ಹಾಗೂ ಸಂತವೇರಿಯಲ್ಲಿ ಓರ್ವನನ್ನು ಸೇರಿ ಒಟ್ಟು 7 ಮಂದಿ ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸಲಾಗಿದೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಲ್ಲೆನಡೆಸಿ ಆರೋಪಿಗಳು ಹೊಸಪೇಟೆ, ಸಂತವೇರಿ, ಹಾಗೂ ಕಂಬಿಹಳ್ಳಿಯವರಾಗಿದ್ದು, ಪ್ರವಾಸಿಗರಿಗೆ, ದಾರಿಹೋಕರಿಗೆ, ಆಗಾಗ ಸಣ್ಣಪುಟ್ಟ ಕಿರಿಕಿರಿ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಅಪ್ರಾಪ್ತ ಬಾಲಕಿಯನ್ನು ನಿಂದಿಸಿ ಕೈಹಿಡಿದು ಎಳೆದಾಡಲು ಮುಂದಾದ ಕಾರಣಕ್ಕೆ ಪೋಕ್ಸೋ ಕಾಯ್ದೆಯಡಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯು ಭೌಗೋಳಿಕವಾಗಿ, ಪ್ರಾಕೃತಿಕವಾಗಿ ಸೌಂದರ್ಯ ಹೊಂದಿದ್ದು ಇಲ್ಲಿಗೆ ವಿವಿದೆಡೆಯಿಂದ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಸೌಜನ್ಯಯುತವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಧರ್ಮ ಆದರೆ ಸ್ಥಳೀಯರು ಈ ರೀತಿಯ ದುರ್ವತನೆ ತೋರುವುದು ಜಿಲ್ಲೆಗೆ ಕಪ್ಪುಚುಕ್ಕೆಯಿದ್ದಂತೆ ಇಂತಹ ಹಲ್ಲೆ, ದೌರ್ಜನ್ಯಗಳಿಗೆ ಕಾನೂನು ಕ್ರಮದ ಮೂಲಕ ಕಡಿವಾಣ ಹಾಕಲಾಗುವುದು ಎಂದು ಎಚ್ಚರಿಸಿದರು.

ಆನ್‍ಲೈನ್ ಮೂಲಕ ಜನರಿಂದ ಹಣವಂಚನೆಗೆ ಘಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಲ್ಲಿ ಅದಕ್ಕೆ ಸ್ಪಂದಿಸಬೇಡಿ, ಓಟಿಪಿ ಅಕೌಂಟ್‍ಸಂಖ್ಯೆ ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಬೇಡಿ. ಈ ರೀತಿಯಾಗಿ ಅಪರಿಚಿತ ಕರೆಗಳು ಬಂದಲ್ಲಿ ಕೂಡಲೇ ಸೈಬರ್‍ಕ್ರೈಮ್‍ಗೆ ದೂರು ನೀಡುವಂತೆ ಸಲಹೆ ನೀಡಿದರು. ಬ್ಯಾಂಕ್ ಹೆಸರೇಳಿಕೊಂಡು ವಂಚನೆ ಮಾಡುತ್ತಿರುವ ಬಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದರು.

ಹಲ್ಲೆ ನಡೆಸಿದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಎ.ಎಸ್‍ಐ ಸುರೇಶ್, ಸಿಬ್ಬಂದಿಳಾದ ಹಾಲಪ್ಪ, ರಮೇಶ್, ಭರತ್, ಭೂಷಣ್, ಸಿದ್ದೇಶ, ಗಿರೀಶ್, ಮಂಜುನಾಥ, ನಾಗರತ್ನಮ ಬಸವರಾಜ್ ಉಪಸ್ಥಿತರಿದ್ದರು. ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪ್ರಶಂಸ ಪತ್ರ ನೀಡುವ ಮೂಲಕ ವೈಯಕ್ತಿಕವಾಗಿ ಬಹುಮಾನ ನೀಡಿದರು.
ಮೋಟಾರ್ ಬೈಕ್ ಮನೆಗಳ್ಳತನ ಮತ್ತಿತರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪ್ರತಿ ವಾರ್ಡ್‍ಗಳಲ್ಲಿ 25 ರಿಂದ 30 ಮನೆಗಳಿಗೆ ಒಂದರಂತೆ ಸಿ.ಸಿ.ಟಿ.ವಿ ಅಳವಡಿಸಿಕೊಳ್ಳುವುದು ಒಳಿತು ಇದಕ್ಕಾಗಿ ಪೊಲೀಸ್ ಇಲಾಖೆಯೂ ಸಹಕಾರ ನೀಡಲಿದೆ, ನಗರಾಭಿವೃದ್ಧಿ ಪ್ರಾಧಿಕಾರವು ನಗರದ ಪ್ರಮುಖ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಅಳವಡಿಕೆ ಸಂಬಂಧ ನೆರವು ನೀಡಿದೆ ಎಂದು ತಿಳಿಸಿದರು.

ಹಲ್ಲೆ ಸಂಬಂಧ ಪರಿಸರವಾದಿ ಗಿರೀಶ್ ಮಾತನಾಡಿ ಸಂತವೇರಿ ತಿರುವಿನಲ್ಲಿ ನಾನು ನನ್ನ 6 ಮಂದಿ ಸ್ನೇಹಿತರು ಜೀಪಿನಲ್ಲಿ ಬರುವ ವೇಳೆ ನನ್ನ ಸ್ನೇಹಿತನ ಮಗಳಿಗೆ ಯುವಕರ ಗುಂಪು ಅವಾಚ್ಯವಾಗಿ ನಿಂದಿಸಿ ಚೂಡಾಯಿಸಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಥಳಿಸಿ ಹಲ್ಲೆ ನಡೆಸಲಾಗಿದೆ. ಅಲ್ಲದೇ ಜೀಪಿಗೂ ಕಲ್ಲು ತೂರಾಟ ಮಾಡಿ ದಾಂದಲೆ ನಡೆಸಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಐ ಸ್ವರ್ಣ ಜಿ.ಎಸ್, ಗ್ರಾಮಾಂತರ ಠಾಣೆ ಪಿಎಸ್‍ಐ ಎನ್.ಎಸ್. ರವಿ, ಲಿಂಗದಹಳ್ಳಿ ಠಾಣೆಯ ಪಿಎಸ್‍ಐ ಅನಿಲ್‍ಕುಮಾರ್‍ನಾಯಕ್, ಗ್ರಾಮಾಂತರ ಠಾಣೆಯ ಸೆನ್ ವಿಭಾಗ ಪಿಎಸ್‍ಐ ರಫೀಕ್, ಮತ್ತು ಪ್ರೋಬೆಷನರಿ ಡಿವೈಎಸ್‍ಪಿ ಜಿ. ತಲಕಟ್ಟಿ ಸೇರಿದಂತೆ ಮತ್ತಿತರರು ಇದ್ದರು

Tags: 7 arrested
ShareSendTweetShare
Join us on:

Related Posts

Uttar Pradesh News: ತಾಳಿ ಕಟ್ಟುವಾಗ ವರನ ಎಡವಟ್ಟು, ಮಂಟಪದಲ್ಲೇ ಮಾರಾಮಾರಿ ಶುರು

Vijayapura News: ಕ್ರೈಂಗಳಿಗೆ ಬ್ರೇಕ್ ಹಾಕಬೇಕಿರುವ ಪೋಲೀಸರಿಂದಲೇ ನಾಚಿಕೆಗೇಡಿನ ಕೆಲಸ

ಮಲಗಿದ್ದ ವ್ಯಕ್ತಿಯ ಮಾಲೆ ಗೋಡೆ ಕುಸಿದು ವ್ಯಕ್ತಿ ಸಾವು

ರಾಮನಗರದಲ್ಲಿ ಬಾಲಕಿ ಹ*ತ್ಯೆ ಕೇಸ್‌ಗೆ ಬಿಗ್ Twist: ಹಾಗಾದ್ರೆ ಆ ಸ್ಥಳದಲ್ಲಿ ನಡೆದಿದ್ದಾದರೂ ಏನು..?

ಮಾರ್ಚ್‌ನಲ್ಲೇ ನಡೆದಿತ್ತಾ ಹಿಂದೂ ಕಾರ್ಯಕರ್ತನ ಹ*ತ್ಯೆಗೆ ಪ್ಲಾನ್..?  Troll ಪೇಜ್ Post ಹೇಳುತ್ತಿದೆ ಕಹಿ ಸತ್ಯ

ಮಾರ್ಚ್‌ನಲ್ಲೇ ನಡೆದಿತ್ತಾ ಹಿಂದೂ ಕಾರ್ಯಕರ್ತನ ಹ*ತ್ಯೆಗೆ ಪ್ಲಾನ್..? Troll ಪೇಜ್ Post ಹೇಳುತ್ತಿದೆ ಕಹಿ ಸತ್ಯ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹ*ತ್ಯೆ: ಫಾಜಿಲ್‌ ಹ*ತ್ಯೆಗೈದವ ನಡುರಸ್ತೆಯಲ್ಲೇ ಫಿನಿಶ್

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹ*ತ್ಯೆ: ಫಾಜಿಲ್‌ ಹ*ತ್ಯೆಗೈದವ ನಡುರಸ್ತೆಯಲ್ಲೇ ಫಿನಿಶ್

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಯಿಯನ್ನು ಭೇಟಿಯಾದ ಮಕ್ಕಳು

ಮಹಿಳೆಯರ ವಿರುದ್ಧ ದ್ವೇಷ ಪ್ರಸರಣ: ಬುಲ್ಲಿ ಬಾಯ್ಸ್​ ಆ್ಯಪ್​ನ ಗಿಟ್​ಹಬ್​ ನಿಷೇಧ

ಮಹಿಳೆಯರ ವಿರುದ್ಧ ದ್ವೇಷ ಪ್ರಸರಣ: ಬುಲ್ಲಿ ಬಾಯ್ಸ್​ ಆ್ಯಪ್​ನ ಗಿಟ್​ಹಬ್​ ನಿಷೇಧ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಹಳೆಯ ವಸ್ತ್ರ ಬಳಸಿ ಮನೆ ಕ್ಲೀನ್ ಮಾಡಬಾರದಂತೆ.. ಯಾಕೆ..?

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ಸಂದರ್ಶನ ಅಥವಾ ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವಾಗ ಈ 5 ಕೆಲಸ ಮಾಡಿ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ರವಿವಾರದಂದು ಈ ಕೆಲಸ ಮಾಡುವುದನ್ನು ತಪ್ಪಿಸಿ: ಇದರ ಹಿಂದೆ ಇದೆ ವೈಜ್ಞಾನಿಕ ಕಾರಣ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ಪಿತೃಗಳು ಮುನಿಸಿಕೊಂಡಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ: ಶ್ರಾದ್ಧ ಕಾರ್ಯದ ಬಗ್ಗೆ ಮಾಹಿತಿ

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Spiritual: ತಾಯಿ ದುರ್ಗೆಯ ಕೈಯಲ್ಲಿ ಏಕಿದೆ ಅಷ್ಟೆಲ್ಲ ಆಯುಧ..? ಸಿಂಹ ವಾಹಿನಿಗೆ ಇದೆಲ್ಲ ನೀಡಿದವರ್ಯಾರು..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Temple: ವೃಂದಾವನ ಮಂದಿರದಲ್ಲೇಕೆ ಆರತಿ ಮಾಡುವುದಿಲ್ಲ..? ಇಲ್ಲೇಕೆ ಗಂಟೆ ಬಾರಿಸುವುದಿಲ್ಲ..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು..? ಹೇಗೆ ಬಳಸಬೇಕು..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

Spiritual: ದೇವಸ್ಥಾನದ ಮೇಲೆ ಭಗವಧ್ವಜ ಹಾರಿಸೋದು ಏಕೆ..?

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In