ಬೆಂಗಳೂರು: ಸಾಪ್ಟ್ ವೇರ್ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರಿಗೆ ಪಾನಮತ್ತಗೊಳಿಸಿ, ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಇಬ್ಬರು ನೈಜಿರಿಯಾ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಹೋದ್ಯೋಗಿಗಳಾಗಿದ್ದ ಟೋನಿ, ಉಬಾಕಾ ಎಂಬ ಇಬ್ಬರು ಈ ದುಷ್ಕೃತ್ಯ ಎಸಗಿದ್ದಾರೆ. ಟೆಕ್ಕಿಗಳಾದ ಇವರಿಬ್ಬರು ಸಹೋದ್ಯೋಗಿ ಯುವತಿಯನ್ನು ಭೇಟಿ ಮಾಡಲು ಹೋಗಿದ್ದರು. ಉಬಾಕಾಗೆ ಪರಿಚಯಿಸಲು ಟೊನಿ ಯುವತಿ ಬಳಿ ಕರೆದೊಯ್ದಿದ್ದ ಎನ್ನಲಾಗಿದೆ.
ಆಗ ಹೆಂಡದ ಪಾರ್ಟಿ ನಡೆದಿದ್ದು, ನಂತರ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರುದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























Discussion about this post