ಮಹಾರಾಷ್ಟ್ರ: ಹೊಲ ಮೇಯ್ದು ಹೋದ ಮೇಲೆ ಬೇಲಿ ಹಾಕಿದರು ಎನ್ನುವ ಹಾಗೆನೇ ಪಶುವಿನಂತೆ ಟೆಂಪೊ ಒಂದರ ಹಿಂಬದಿಯಲ್ಲಿ ಅತ್ಯಾಚಾರಕ್ಕೊಳಗಾಗಿ, ರಾಡ್ ನಿಂದ ಗುಪ್ತಾಂಗಗಳಲ್ಲಿ ಇರಿತಕ್ಕೊಳಗಾದ ಗಾಯಗಳೊಂದಿಗೆ ಮಡಿದ ೩೪ ವರ್ಷದ ಸಂತ್ರಸ್ತೆಗೆ ಇದೀಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ೨೦ ಲಕ್ಷ ಪರಿಹಾರ ಘೋಷಣೆಯಾಗಿದೆ.
ಇದರ ಬಗ್ಗೆ ಅಧಿಕೃತ ಮಾಹಿತಿಯನ್ನು ಪೊಲೀಸ್ ಆಯುಕ್ತ ಹೇಮಂತ್ ನಗ್ರಾಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪರಿಹಾರವನ್ನು ಮುಖ್ಯಮಂತ್ರಿ ಪರಿಹಾರ ನಿಧಿ, ಸರ್ಕಾರಿ ಯೋಜನೆಗಳಿಂದ ಭರಿಸಲು ಸರ್ಕಾರ ಶಕ್ತವಾಗಿದೆ ಎಂದು ಘೋಷಿಸಿದೆ.
ಇದು ಸಾಮೂಹಿಕ ಅತ್ಯಾಚಾರ, ವಿಕೃತ ಕಾಮಿಗಳ ಅಟ್ಟಹಾಸವಾಗಿತ್ತೇ? ಎಂಬುದು ಇನ್ನೂ ತನಿಖೆಯಿಂದ ಬಯಲಾಗಿಲ್ಲ. ಓರ್ವ ಅಪರಾಧಿ ತಾನೇ ಈ ಘಟನೆಗೆ ಕಾರಣ ಎಂದು ಒಪ್ಪಿಕೊಂಡಿರುತ್ತಾನಾದರೂ, ಅಸಲಿ ವಿಷಯ ಸಾರ್ವಜನಿಕವಾಗಿ ಜಾಹಿರಾಗಬೇಕಾದ ಹಿನ್ನೇಲೆ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆದಾಗಲೇ ಸಂತ್ರಸ್ತೆಯ ನೋವಿಗೆ ನಿಜವಾದ ನ್ಯಾಯ ಸಿಕ್ಕಂತೆ ಎಂದು ಹೆಸರು ಹೇಳದ ಮಹಿಳಾ ಹೋರಾಟಗಾರ್ತಿಯೊಬ್ಬರು ಕನ್ನಡನಾಡಿಗೆ ಪ್ರತಿಕ್ರಿಯಿಸಿದ್ದಾರೆ.

























Discussion about this post