ಮಧ್ಯಪ್ರದೇಶ: ೬೪ ವರ್ಷದ ವಯೋವೃದ್ಧನೊರ್ವ ತನ್ನ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ, ಆಕೆಯ ಮರ್ಮಾಂಗವನ್ನು ಹೊಲೆದಿರುವ ಅಮಾನುಷ ಘಟನೆ ವರದಿಯಾಗಿದೆ.
ವಯೋವೃದ್ಧನ ಪತ್ನಿ ೫೫ ವರ್ಷದವರಾಗಿದ್ದು, ಆಕೆಯ ದೇಹದ ಖಾಸಗಿ ಭಾಗಗಳಿಗೆ ವಿಕೃತ ಪತಿ ಹೊಲಿಗೆ ಹಾಕಿದ್ದ.
ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ತೆಗೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮಹಿಳೆಯ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಆರೋಪಿ ಪತಿ ವಿರುದ್ಧ ದೈಹಿಕ, ಮಾನಸಿಕ ಕಿರುಕುಳಕ್ಕೆ ಸೇರಿದ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತನ್ನ ವಯೋವೃದ್ಧ ಪತಿಗೆ ಕಠಿಣ ಶಿಕ್ಷೆ ನೀಡಬಾರದು ಎಂದು ಪತ್ನಿ ಕೇಳಿಕೊಂಡಿದ್ದಾರೆ, ಆಕೆ ಒತ್ತಡಕ್ಕೆ ಒಳಗಾಗಿದ್ದಾರಾ? ಎಂಬುದರ ಬಗ್ಗೆ ಸಂಶಯ ಉಂಟಾಗಿದೆ. ತಲೆಮರೆಸಿಕೊಂಡಿರುವ ಪತಿಯನ್ನು ಪೊಲೀಸರು ಹುಡುಕುತ್ತಿದ್ದು, ನಿತ್ಯವೂ ಆತ ತನ್ನ ಪತ್ನಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಥಳಿಸುತ್ತಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ.

























Discussion about this post