ಉತ್ತರ ಪ್ರದೇಶ: ಮಕ್ಕಳು ಮಾತ್ರ ಮನೆಯಲ್ಲೇ ಇರುವಾಗ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದ್ದು ಬೆಂಕಿ ಹೊತ್ತುಕೊಂಡು ಉರಿದಿದೆ. ಇದರಿಂದ ಮನೆಯಲ್ಲಿದ್ದ ಮಕ್ಕಳು ದುರಂತ ಸಾವಿಗೆ ಈಡಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಅಜಂಗಡದ ಅಹ್ರೌಲಾದ ಇಮಾಮ್ ಗಡದಲ್ಲಿ ನಡೆದಿದೆ.
ದೀಪಾಂಜಲಿ, (೧೧ ವರ್ಷ), ಶಿವಾಂಶಿ (೬ವರ್ಷ), ಶ್ರೇಜಲ್ (೪ ವರ್ಷ) ಎಂಬ ಮುದ್ದಾದ ಹೆಣ್ಣುಮಕ್ಕಳು ದುರಂತ ಸಾವಿಗೀಡಾಗಿದ್ದಾರೆ. ಮಕ್ಕಳು ಅಡುಗೆ ಮನೆಯಲ್ಲಿ ಇದ್ದ ಕಾರಣ ಮೂವರಿಗೂ ಬೆಂಕಿ ತಗಲಿದೆ. ತಾಯಿ ನೀರು ತರಲು ಮನೆ ಬಿಟ್ಟು ಹೋಗಿದ್ದರು.
ಸ್ಥಳೀಯರು ಹರಸಾಹಸ ಮಾಡಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಿದ್ದಾರೆ, ದಾರಿ ಮದ್ಯ ಇಬ್ಬರು ಕೊನೆಯುಸಿರೆಳೆದರು. ಶ್ರೇಜಲ್ ಚಿಕಿತ್ಸೆ ಗೆ ಸ್ಪಂದಿಸದೆ ಸಾವನ್ನಪ್ಪಿದರು. ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

























Discussion about this post