ಬೆಂಗಳೂರು: ಡ್ರಗ್ ಜಾಲದಲ್ಲಿ ಪೆಡ್ಲರ್ ಆಗಿದ್ದು ವಿರೇನ್ ಖನ್ನಾಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಆರೋಪಿ ಮೆಸ್ಸಿಯನ್ನು CCB POLICE ಅರೆಸ್ಟ್ ಮಾಡಿದ್ದಾರೆ.
ಮಾದಕ ವಸ್ತು ಮಾರಾಟ ಜಾಲಕ್ಕೆ ಬ್ರೇಕ್ ಹಾಕುತ್ತಿರೋ ಪೊಲೀಸರಿಗೆ ಈಗ ಒಬ್ಬಬ್ಬರಾಗಿ ಸತ್ಯವನ್ನು ಹೇಳ್ತಾ ಇದ್ದಾರೆ. ತನಿಖೆ ಬೆನ್ನತ್ತಿರುವ ಪೊಲೀಸರಿಗೆ ಡ್ರಗ್ ಪೆಡ್ಲರ್ ಮೆಸ್ಸಿ ಸಿಕ್ಕಿಬಿದ್ದಿದ್ದಾನೆ.
ಕೆಲವು ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವರ ಮನೆಗೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಮಾಡೆಲ್ ಸೋನಿಯಾ, ಉದ್ಯಮಿ ಭರತ್, ಡಿಜೆ ವಚನ್ ಚಿನ್ನಪ್ಪ ಮನೆ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಭರತ್ ಹಾಗೂ ವಚನ್ ಚಿನ್ನಪ್ಪ ಇವರನ್ನು ಅಂದರ್ ಮಾಡಲಾಗಿತ್ತು.
ಬಂಧನಕ್ಕೆ ಒಳಗಾಗದೆ ಮಾಡೆಲ್ ಸೊನಿಯಾ ಸ್ವಲ್ಪ ಹಿಂದೆ ಸರಿದಿದ್ದರು. ಆಕೆಯ ನಿವಾಸದಲ್ಲೂ ೪೦ ಗ್ರಾಂ ಗಾಂಜಾ ಪತ್ತೆ ಮಾಡಿದ್ದರು. ಆದರೆ ರಾಜಾಜಿನಗರದ ಮನೆ ಮೇಲೆ ದಾಳಿ ಮಾಡಿದಾಗ ಅಕೆ ಮನೆಯಲಿರಲಿಲ್ಲ, ಅವರಿಗಾಗಿ ಪೊಲೀಸರು ಹುಡುಕುತ್ತಲೇ ಇದ್ದರೂ ಸಹ, ಆಕೆ ಬಾಯ್ ಫ್ರೆಂಡ್ ಜೊತೆಗೆ ಎಸ್ಕೇಪ್ ಪ್ಲಾನ್ ಮಾಡಿದ್ದರು.
ಖಾಸಗಿ ಹೋಟೇಲ್ ನಲ್ಲಿ ಕಣ್ಮರೆಯಾಗಲು ನೋಡಿದ್ದ ಸೊನಿಯಾಗೆ ಕರ್ನಾಟಕ ಪೊಲೀಸ್ ಕಣ್ಣಿಟ್ಟಿತ್ತು. ಕಡೆಗೂ ಲೇಡಿ ಪೊಲೀಸ್ ಜಂಟ್ಸ್ ಟಾಯ್ಲೆಟ್ ನಲ್ಲಿ ಅವಿತಿದ್ದ ಸೊನಿಯಾ ಅವರನ್ನು ಅರೆಸ್ಟ್ ಮಾಡಲಾಯ್ತು.

























Discussion about this post