ಚಿಕ್ಕಬಳ್ಳಾಪುರ: ಹೈದ್ರಾಬಾದ್ ರೂಟ್ ನಿಂದ ಬರುತ್ತಿದ್ದ ಬೃಹತ್ ಕಂಟೈನರ್ ಟ್ರಕ್ ಗಳನ್ನು ತಪಾಸಣೆ ನಡೆಸಿದಾಗ ಟನ್ ಗಟ್ಟಲೆ ಜಾನುವಾರುಗಳ ಕೊಂಬು, ಮೂಳೆ ಇರುವುದು ಕಂಡುಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೋತೇಪಲ್ಲಿ ಕ್ರಾಸ್ ನಲ್ಲಿ ತಪಾಸಣೆ ನಡೆಸಲಾಗಿತ್ತು.
ಕಂಟೈನರ್ ಟ್ರಕ್ ಗಳು ಉತ್ತರ ಪ್ರದೇಶದ ನೊಂದಣಿಯ ನಂಬರ್ ಹೊಂದಿದೆ. ಅಶೋಕ್ ಲೈ ಲ್ಯಾಂಡ್ ನ ಮೂರು ವಾಹನಗಳಲ್ಲಿ ಜಾನುವಾರುಗಳ ಕೊಂಬು ಮೂಳೆಗಳನ್ನು ಹೊತ್ತು ತರಲಾಗಿತ್ತು. ಇದನ್ನು ಬಾಗೇಪಲ್ಲಿಯಿಂದ ಇತರೆ ಚಿಕ್ಕವಾಹನಗಳಿಗೆ ರವಾನೆ ಮಾಡಿ, ಯಾರಿಗೂ ಕಾಡದಂತೆ ರವಾನೆ ನಡೆಸಲು ಯೋಜಿಸಲಾಗಿತ್ತು.
ಖಚಿತ ಮಾಹಿತಿ ಪಡೆದು ಬಾಗೇಪಲ್ಲಿ ಸಿಪಿಐ ನಾಗರಾಜು ಹಾಗೂ ಪಿಎಸ್ ಐ ಗೋಪಾಲ್ ರೆಡ್ಡಿ ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಮೂಳೆ, ಕೊಂಬು ೩೦ ಟನ್ ಇರಬಹುದು ಎಂದು ಅಂದಾಜಿಸಲಾಗಿದೆ. ಲಾರಿ ಚಾಲಕ ಸದಾಖತ್ ಆಲಿ, ತೌಸಿಫ್, ಮಹಮ್ಮದ್ ಬಷೀರ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಬಾಗೆಪಲ್ಲಿಯ ವ್ಯಕ್ತಿಯೇ ಈ ಮೂಳೆ, ಕೊಂಬು ರಫ್ತು ಮಾಡಿಕೊಂಡಿರುವುದಾಗಿ ಮಾಹಿತಿ ಸಿಕ್ಕಿದೆ. ಕೊಂಬು, ಮೂಳೆ ಪುಡಿ ಮಾಡಿ ಬೇರೆ ಕಡೆ ರವಾನೆ ಮಾಡಲು ಯೋಜನೆ ನಡೆಸಿದ್ದರು ಆದರೆ ಪೊಲೀಸರ ತಪಾಸಣೆಯಿಂದ ಖೇಲ್ ಕತಂ ಆಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

























Discussion about this post