• Home
  • About Us
  • Contact Us
  • Terms of Use
  • Privacy Policy
Monday, May 11, 2026
  • Login
Shri News
  •  
  • ರಾಜ್ಯ
    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಕ್ರೀಡೆ

ಭಾರತೀಯ ಮಹಿಳಾ ಕ್ರಿಕೆಟ್‌ ಬಾನಂಗಳದಲ್ಲಿ ಹೊಳೆಯುವ ತಾರೆಯಾಗಿ ಉದಯಿಸಿದ ಸ್ಮೃತಿ ಮಂಧಾನ

Shri News Desk by Shri News Desk
Oct 5, 2021, 10:41 am IST
in ಕ್ರೀಡೆ
Smriti Mandhana

ಸ್ಮೃತಿ ಮಂಧಾನ

Share on FacebookShare on TwitterTelegram

ಇತ್ತೀಚಿನ ಕೆಲ ವರ್ಷಗಳಿಂದ ಭಾರತೀಯ ಕ್ರೀಡಾರಂಗದ ಸುವರ್ಣಯುಗವೇ ಆರಂಭವಾಗಿದೆಯೇನೋ ಎಂದೆನಿಸುವಂಥ ಪ್ರದರ್ಶನಗಳನ್ನು ನಮ್ಮ ಕ್ರೀಡಾಪಟುಗಳು ಎಲ್ಲಾ ಕ್ರೀಡೆಗಳಲ್ಲೂ ನೀಡುತ್ತಾ ಬರುತ್ತಿದ್ದಾರೆ. ಮೊನ್ನೆ-ಮೊನ್ನೆ ನಡೆದ ಒಲಂಪಿಕ್ಸ್‌ ಕ್ರೀಡಾಕೂಟದಲ್ಲೂ ಸಹ ಭಾರತೀಯ ಕ್ರೀಡಾಪಟುಗಳು ಅನೇಕ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇಲ್ಲಿಯವರೆಗೂ “ಆಟಕ್ಕುಂಟು ಲೆಕ್ಕಕ್ಕಿಲ್ಲ” ಎಂಬಂತೆ ಪಂದ್ಯಾವಳಿಗಳಲ್ಲಿ ಭಾಗವಹಿಸಿ “ಹೋದ ಪುಟ್ಟ-ಬಂದ ಪುಟ್ಟ” ಎಂಬಂತೆ ಪದಕರಹಿತರಾಗಿಯೋ ಅಥವಾ ಒಂದೋ-ಎರಡೋ ಕಂಚಿನ ಪದಕಗಳನ್ನು ಪಡೆದು ಬರುತ್ತಿದ್ದ ನಮ್ಮ ಕ್ರೀಡಾಪಟುಗಳು ಚಿನ್ನ-ಬೆಳ್ಳಿ ಪದಕಗಳನ್ನು ಗೆದ್ದು ತರುತ್ತಾ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುತ್ತಿದ್ದಾರೆ.  ಈ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ, ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಸದಸ್ಯೆ, ಸ್ಮೃತಿ ಮಂಧಾನ.

ಸ್ಮೃತಿ ಮಂಧಾನ ೧೮ನೇ ಜುಲೈ ೧೯೯೬ ರಂದು ಮುಂಬೈನಲ್ಲಿ ಸ್ಮಿತಾ ಹಾಗೂ ಶ್ರೀನಿವಾಸ್‌ ಮಂಧಾನ ದಂಪತಿಗಳ ಮಗಳಾಗಿ ಜನಿಸಿದರು.  ತಮ್ಮ ಶಾಲಾದಿನಗಳಲ್ಲಿ ತಂದೆ ಶ್ರೀನಿವಾಸ್‌ ಹಾಗೂ ಅಣ್ಣ ಶ್ರವಣ್‌ (ಜಿಲ್ಲಾ ಮಟ್ಟದ ಕ್ರಿಕೆಟ್‌ ಆಟಗಾರ) ಕ್ರಿಕೆಟ್‌ ಆಡುತ್ತಿದ್ದುದನ್ನು ನೋಡುತ್ತಿದ್ದ ಸ್ಮೃತಿಗೂ ಕ್ರಮೇಣ ಕ್ರಿಕೆಟ್‌ ಆಟದಲ್ಲಿ ಆಸಕ್ತಿ ಮೂಡಿ ತಾವೂ ಆಡಲು ಪ್ರಾರಂಭಿಸಿದರು.  ತಮ್ಮ ೯ನೆಯ ವಯಸ್ಸಿನಲ್ಲಿ ಮಹಾರಾಷ್ಟ್ರದ ೧೫ ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದ ಸ್ಮೃತಿ ೨ ವರ್ಷಗಳ ನಂತರ ೧೯ ವರ್ಷದೊಳಗಿನವರ ತಂಡಕ್ಕೂ ಆಯ್ಕೆಯಾದರು.

ಇಲ್ಲಿಂದ ಹಿಂತಿರುಗಿ ನೋಡದ ಸ್ಮೃತಿಯ ಮೊದಲ ಅದ್ಭುತ ಪ್ರದರ್ಶನವೆಂದರೆ ಅಕ್ಟೋಬರ್‌ ೨೦೧೩ರಲ್ಲಿ ವಡೋದರಾದಲ್ಲಿ ಮಹಾರಾಷ್ಟ್ರದ ಪರ ಹಾಗೂ ಗುಜರಾತ್‌ ವಿರುದ್ಧ ಆಡಿದ ೧೯ ವರ್ಷ ವಯಸ್ಸಿನೊಳಗಿನವರ ಪಂದ್ಯಾವಳಿಯಲ್ಲಿ ಕೇವಲ ೧೫೦ ಚೆಂಡುಗಳಲ್ಲಿ ಭರ್ಜರಿ ೨೨೪ ರನ್‌ಗಳ ದ್ವಿಶತಕ ಸಿಡಿಸಿದ್ದು.  ಇಂತಹ ಅನೇಕ ಪ್ರದರ್ಶನಗಳನ್ನು ನೀಡಿರುವ ಕೀರ್ತಿ ಸ್ಮೃತಿ ಅವರದ್ದು.

ನ್ಯೂಜಿಲೆಂಡ್‌ ತಂಡದ ವಿರುದ್ಧ ೨೦೧೯ರ ಫೆಬ್ರವರಿಯಲ್ಲಿ ಕೇವಲ ೨೪ ಎಸೆತಗಳಲ್ಲಿ ಗಳಿಸಿದ ಅತಿವೇಗದ ಅರ್ಧಶತಕ, ೨೦೧೭ರ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರದ್ಧ ಕೇವಲ ೩೦ ಎಸೆತಗಳಲ್ಲಿ ಗಳಿಸಿದ ಅರ್ಧಶತಕ, ಹಾಗೂ ಆಗಸ್ಟ್‌ ೩, ೨೦೧೮ರ ಮಹಿಳಾ ಕ್ರಿಕೆಟ್‌ ಸೂಪರ್‌ಲೀಗ್‌ನಲ್ಲಿ ಗಳಿಸಿದ ಮೊದಲನೆಯ ಶತಕ ಅವರ ಗಮನಾರ್ಹ ಸಾಧನೆಗಳಾಗಿವೆ.

ಕೆಲವೇ ದಿನಗಳ ಹಿಂದೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧದ ಗುಲಾಬಿ ಚೆಂಡಿನ ಹಗಲು-ರಾತ್ರಿ ಪಂದ್ಯವನ್ನು ಭಾರತ ಗೆಲ್ಲಲು ಸ್ಮೃತಿ ಮಂಧಾನರ ಆದ್ಭುತ ದಾಖಲೆಯ ಶತಕ ಕಾರಣವಾಯಿತು.  ಮಳೆಯಿಂದ ಪ್ರಭಾವಿತವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯ ಭಾರತವನ್ನು ಮೊದಲು ಬ್ಯಾಟ್‌ ಮಾಡಲು ಆಹ್ವಾನಿಸಿತು.  ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಸ್ಮೃತಿ ಇತರ ಆಟಗಾರ್ತಿಯರೊಡನೆ ಉತ್ತಮ ಜತೆಯಾಟಗಳನ್ನಾಡಿ ಭರ್ಜರಿ ಶತಕವನ್ನೂ ಸಿಡಿಸುವ ಮೂಲಕ ಭಾರತಕ್ಕೆ ಜಯ ತಂದಿತ್ತರು.

ಉತ್ತಮ ಹೊಡೆತಗಳ ಬಿರುಸಿನ ಆಟದ ಪ್ರದರ್ಶನ ನೀಡಿದ ಸ್ಮೃತಿ ದಾಖಲೆಯ ೧೨೭ ರನ್‌ಗಳನ್ನು ಬಾರಿಸಿ ಭಾರತ ತಂಡ ಉತ್ತಮ ಮೊತ್ತವಾದ ೩೭೭ ರನ್‌ ಗಳಿಸಲು ಕಾರಣರಾದರು.  ಆಫ್‌ಸೈಡ್‌ನಲ್ಲಿ ಆಕರ್ಷಕ ಹೊಡೆತಗಳನ್ನು ಬಾರಿಸುವಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರುವ ಅವರ ಆಟ ಹೆಚ್ಚಿನ ಪ್ರಶಂಸೆ ಪಡೆದಿದ್ದು, ಭಾರತದ ಮಾಜಿ ಆಟಗಾರ ವಾಸಿಮ್‌ ಜಾಫರ್‌ ತಮ್ಮ ಟ್ವೀಟ್‌ನಲ್ಲಿ ಸ್ಮೃತಿಯವರನ್ನು “ಆಫ್‌ಸೈಡ್‌ನ ದೇವತೆ” ಎಂದು ಹೊಗಳಿದ್ದರು.

ಅತ್ಯದ್ಭುತ ಸಾಧನೆಯ ಮೂಲಕ ಮಹಿಳಾ ಕ್ರಿಕೆಟ್‌ ಲೋಕದಲ್ಲಿ ಭಾರತಕ್ಕೆ ಹೆಮ್ಮೆ ತರುತ್ತಿರುವ ಸ್ಮೃತಿ ಮಂಧಾನ ಇನ್ನೂ ಹೆಚ್ಚಿನ ಕೀರ್ತಿಯನ್ನು ಗಳಿಸಲಿ ಎಂದು ಹಾರೈಸೋಣ.

Tags: Smriti Mandhana
ShareSendTweetShare
Join us on:

Related Posts

ಚರಿತ್ರೆ ನಿರ್ಮಿಸಿದ ಆರ್‌ಸಿಬಿ: ಈ ಸಲಾ ಕಪ್ ನಮ್ದೇ ಎಂದ ಸಿಎಂ ಸಿದ್ದರಾಯ್ಯ, ವಿಶ್ ಮಾಡಿದ ಕುಮಾರಣ್ಣ

T20 World Cup 2024: ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಇನ್ನೊಂದು ಜಾಕ್‌ಪಾಟ್

Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ

Cricket News: ಪಾಪರಾಜಿಗಳಿಗೆ ಗಿಫ್ಟ್ ಕೊಟ್ಟ ಅನುಷ್ಕಾ ಮತ್ತು ವಿರಾಟ್: ಕಾರಣವೇನು..?

RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್‌ಸಿಬಿ ಫ್ಯಾನ್ಸ್

Virat-Kohli-against-England

ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಕನಸನ್ನು ನನಸಾಗಿಸುವ ವೇದಿಕೆಯಾಗಲಿದೆಯೇ ಬೆಂಗಳೂರು?

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ಈ ಅಭ್ಯಾಸ ನಿಮ್ಮಲ್ಲಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವೇ ಇಲ್ಲ

ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Spiritual: ಈ 5 ಜನರು ಬೇಗ ಬಡವರಾಗುತ್ತಾರೆ ಎನ್ನುತ್ತದೆ ಗರುಡ ಪುರಾಣ..ನೀವು ಹೀಗೆ ಮಾಡಬೇಡಿ..

Spiritual: ಶನಿದೇವ 1 ರಾಶಿಯಿಂದ ಇನ್ನೊಂದು ರಾಶಿಗೆ ಏಕೆ ನಿಧಾನವಾಗಿ ಚಲಿಸುತ್ತಾನೆ..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

Special Story: ಭಾರತಕ್ಕೆ ಚಹಾ ಬಂದಿದ್ದು ಹೇಗೆ.? ಇದನ್ನು ನಮ್ಮ ಪೂರ್ವಜರು ಹೇಗೆ ಸೇವಿಸುತ್ತಿದ್ದರು..?

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In