ಬೆಂಗಳೂರು: ಟೀಂ ಇಂಡಿಯಾ ಬ್ಯಾಟ್ಸ್ಮನ್, ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಸುನಿಲ್ ಶೆಟ್ಟಿ ಪುತ್ರಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಹಲವು ಬಾರಿ ಸುದ್ದಿಯಾಗಿದೆ. ಆದರೆ, ಇದೀಗ ರಾಹುಲ್ ಅವರು ಆಥಿಯಾ ಶೆಟ್ಟಿಯನ್ನು ಪ್ರೀತಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಮೂಲಕ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
ಆಥಿಯಾ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ರಾಹುಲ್ ಪ್ರಕಟಿಸಿರುವ ಇನ್ಸ್ಟಾಗ್ರಾಂ ಸಂದೇಶವೀಗ ವೈರಲ್ ಆಗಿದೆ.
View this post on Instagram
‘ಹ್ಯಾಪಿ ಬರ್ತ್ಡೇ ಮೈ ಲವ್ ಆಥಿಯಾ ಶೆಟ್ಟಿ’ ಎಂದು ಪೋಸ್ಟ್ ಮಾಡಿರುವ ರಾಹುಲ್, ತಾವು ಹಾಗೂ ಆಥಿಯಾ ಜತೆಗಿರುವ ಫೋಟೊವನ್ನೂ ಲಗತ್ತಿಸಿದ್ದಾರೆ. ಈ ಪೋಸ್ಟ್ಗೆ 20 ಲಕ್ಷಕ್ಕೂ ಹೆಚ್ಚು ಲೈಕ್ಸ್ ದೊರೆತಿವೆ. 13 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ದುಬೈಯಲ್ಲಿ ಶುಕ್ರವಾರ ರಾತ್ರಿ ನಡೆದ ಐಸಿಸಿ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸ್ಕಾಟ್ಲೆಂಡ್ ವಿರುದ್ಧದ ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಅಂತರದ ಭರ್ಜರಿ ಗೆಲವುದು ದಾಖಲಿಸಿತ್ತು. ಈ ಪಂದ್ಯದಲ್ಲಿ ರಾಹುಲ್ ವೇಗದ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಈ ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದು ವೀಕ್ಷಿಸುವ ಮೂಲಕ ರಾಹುಲ್ ಅವರನ್ನು ಆಥಿಯಾ ಹುರಿದುಂಬಿಸಿದ್ದ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ICC T20 WC: ಸ್ಕಾಟ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, ಸೆಮಿ ಫೈನಲ್ ಆಸೆ ಜೀವಂತ
Discussion about this post