ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿ ಹಾಗೂ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ವ್ಯಾಯಾಮ ಮಾಡುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಮೈಕ್ರೊ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಕೊಹ್ಲಿ, ಅಮೆರಿಕದ ನಟ ಹಾಗೂ ನಿರ್ದೇಶಕ ಡೆನ್ಜೆಲ್ ವಾಷಿಂಗ್ಟನ್ ಅವರ, ‘ಆರಾಮವಾಗಿ ಇರುವುದು ಪ್ರಗತಿಗೆ ಮಾರಕ’ ಎಂಬ ಸಾಲುಗಳನ್ನೂ ಉಲ್ಲೇಖಿಸಿದ್ದಾರೆ.
“Ease is a greater threat to progress than hardship” – denzel Washington pic.twitter.com/QvYgfSSmO7
— Virat Kohli (@imVkohli) November 27, 2021
ವಿರಾಟ್ ಕೊಹ್ಲಿ ಸದಾ ಫಿಟ್ನೆಸ್ ಬಗ್ಗೆ ಗಮನಹರಿಸುತ್ತಾರೆ. ದೇಶದ ಫಿಟ್ನೆಸ್ ಐಕಾನ್ಗಳಲ್ಲಿ ಪ್ರಮುಖರಾಗಿರುವ ಕೊಹ್ಲಿ, ಅಭಿಮಾನಿಗಳಿಗೂ ಫಿಟ್ ಆಗಿರುವಂತೆ ಪ್ರೇರಣೆ ನೀಡುತ್ತಿರುತ್ತಾರೆ.
ಟ್ವೆಂಟಿ–20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ನಾಯಕತ್ವಕ್ಕೆ (ಟ್ವೆಂಟಿ–20 ಮಾದರಿಯ ಕ್ರಿಕೆಟ್ನಲ್ಲಿ ಮಾತ್ರ) ವಿದಾಯ ಹೇಳಿರುವ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ಕುಟುಂಬದವರ ಜತೆ ಕಾಲ ಕಳೆಯುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ಅಕ್ಷರ್ ಪಟೇಲ್ ಮಾಂತ್ರಿಕ ಬೌಲಿಂಗ್ ದಾಳಿಗೆ ಮಂಕಾದ ನ್ಯೂಜಿಲ್ಯಾಂಡ್
Discussion about this post