ವಾಸ್ಕೊ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ (ಐಎಸ್ಎಲ್) ಟೂರ್ನಿಯಲ್ಲಿ ಮಂಗಳವಾರ ರಾತ್ರಿ ಕೇರಳ ಮತ್ತು ಈಸ್ಟ್ ಬೆಂಗಾಲ್ ನಡುವೆ ನಡೆದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.
ವಾಸ್ಕೊದ ತಿಲಕ್ ಮೈದಾನ್ನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ತಲಾ ಒಂದೊಂದು ಗೋಲು ದಾಖಲಾದವು. ಹೀಗಾಗಿ ಪಂದ್ಯವು 1–1ರಲ್ಲಿ ಸಮಗೊಂಡಿತು.
ತೊಮಿಸ್ಲೊವ್ ಮಾರ್ಸೆಲಾ ಅವರು 37ನೇ ನಿಮಿಷದಲ್ಲಿ ಗೋಲು ಗಳಿಸಿದ್ದರಿಂದ ಒಂದು ಹಂತದಲ್ಲಿ ಈಸ್ಟ್ ಬೆಂಗಾಲ್ ಮುನ್ನಡೆ ಸಾಧಿಸಿತ್ತು. ಆದರೆ, 44ನೇ ನಿಮಿಷದಲ್ಲಿ ತಿರುಗೇಟು ನೀಡಿದ ಕೇರಳವೂ ಒಂದು ಗೋಲು ಗಳಿಸಿತ್ತು. ಕೇರಳ ಪರ ಅಲ್ವಾರೊ ವಾಕ್ವೆಜ್ಗೆ ಸುಲಭವಾಗಿ ಗೋಲು ಗಳಿಸಿ ಪಂದ್ಯ ಡ್ರಾ ಆಗಲು ಕಾರಣರಾದರು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗಿಲ್ಲ ರೋಹಿತ್: ಪ್ರಿಯಾಂಕ್ ಪಾಂಚಾಲ್ ತಂಡಕ್ಕೆ
ಇಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಸೆಣಸಲಿವೆ. ರಾತ್ರಿ 7.30ಕ್ಕೆ ಬ್ಯಾಂಬೊಲಿಮ್ನಲ್ಲಿ ಪಂದ್ಯ ನಡೆಯಲಿದ್ದು, ಸ್ಟಾರ್ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.
Discussion about this post