ಭಾರತ ಕ್ರಿಕೆಟ್ ತಂಡ ಸೆಂಚುರಿಯನ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿತು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯಗಳಿಸುವ ಮೂಲಕ ಭಾರತ ವಿಜಯದ ಕೇಕೆ ಹಾಕಿತು. ಟೆಸ್ಟ್ ಪಂದ್ಯದ ಕೊನೆಯ ಮತ್ತು ಐದನೇ ದಿನವಾಗಿದ್ದ (IND vs SA 1st Test Day 5) ಇಂದು ಭಾರತ ಗೆಲ್ಲಲು ದಕ್ಷಿಣ ಆಫ್ರಿಕಾದ 6 ವಿಕೆಟ್ಗಳನ್ನು ಪಟಪಟನೆ ಕೆಡವಬೇಕಿತ್ತು. ಆದರೆ ದಕ್ಷಿಣ ಆಫ್ರಿಕನ್ನರ ಬ್ಯಾಟಿಂಗ್ ಪಡೆಯನ್ನು ಅಷ್ಟು ಸುಲಭಕ್ಕೆ ಬಗ್ಗು ಬಡಿಯುವುದು ಸುಲಭಧ ಮಾತಂತೂ ಆಗಿರಲಿಲ್ಲ. ಆದರೆ ಭಾರತದ ಬೌಲರ್ಗಳು ಈ ಟಾಸ್ಕ್ ಪೂರ್ಣಗೊಳಿಸಿ ಭಾರತಕ್ಕೆ ಗೆಲುವಿನ ಸಂತಸ ಮೂಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಸೆಂಚುರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊನೆಯ ದಿನ ದಕ್ಷಿಣ ಆಫ್ರಿಕಾ ಗೆಲುವಿಗೆ 305 ರನ್ಗಳ ಅಗತ್ಯವಿತ್ತು. ಪಿಚ್ ಬೌಲರ್ಗಳಿಗೆ ನೆರವು ನೀಡುತ್ತಿದ್ದದ್ದು ಭಾರತಕ್ಕೆ ವರದಾನವಾಯಿತು. ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಕೆಡಗಿ ಅಶ್ವಿನ್ ದಕ್ಷಿಣ ಆಫ್ರಿಕಾ ತಂಡವನ್ನು 191 ರನ್ಗಳಿಗೆ ಆಲೌಟ್ ಮಾಡಿದರು.
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗಿಳಿದ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಹಾಗೂ ಟೆಂಬಾ ಬವುಮಾ ಅವರು ದಕ್ಷಿಣ ಆಫ್ರಿಕಾವನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ದಾಳಿ ಈ ಉತ್ಸಾಹಕ್ಕೆ ತಣ್ಣೀರು ಎರಚಿತು. 51ನೇ ಓವರ್ನ ಐದನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ ಪಡೆದರು. ವಿಕೆಟ್ಕೀಪರ್ ಡಿ ಕಾಕ್ ಸಿರಾಜ್ ಅವರ ಎಸೆತಕ್ಕೆ 21 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ವಿಯಾನ್ ಮುಲ್ಡರ್ ಕೂಡ ಕೇವಲ 3 ಎಸೆತಗಳಲ್ಲಿ ಮೊಹಮ್ಮದ್ ಶಮಿ ಅವರ ಎಸೆತಕ್ಕೆ ಶರಣಾದರು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿ: ಕನ್ನಡಿಗ ರಾಹುಲ್ಗೆ ನಾಯಕತ್ವ ಸಾಧ್ಯತೆ
Discussion about this post