ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆಡದೇ ಇರುವುದಕ್ಕೆ ಕ್ರಿಕೆಟ್ ವಲಯದಲ್ಲಿ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಮೊದಲ ಟೆಸ್ಟ್ ಪಂದ್ಯವನ್ನು 113 ರನ್ಗಳಿಂದ ಗೆದ್ದು ಹುಮ್ಮಸ್ಸಿನಲ್ಲಿರುವ ಭಾರತ ತಂಡ ಸೋಮವಾರ ಆರಂಭಗೊಂಡ ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ, ಬೆನ್ನು ನೋವಿನ ಕಾರಣ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಕನ್ನಡಿಗ ಕೆ.ಎಲ್.ರಾಹುಲ್ ನಾಯಕನ ಹೊಣೆ ಹೊತ್ತುಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಸಮೀಪಿಸುತ್ತಿದ್ದಾಗ ಟ್ವೆಂಟಿ–20 ನಾಯಕತ್ವ ತೊರೆಯಬೇಡಿ ಎಂದು ವಿರಾಟ್ ಕೊಹ್ಲಿಗೆ ಹೇಳಿದ್ದೆವು: ಚೇತನ್ ಶರ್ಮಾ
‘ವಿರಾಟ್ ಕೊಹ್ಲಿ ಅವರ ಪ್ರಸ್ತು ಫಾರ್ಮ್ ವಿಚಾರವನ್ನು ಬದಿಗಿಟ್ಟು ನೋಡಿದರೆ ಅವರು ಆಡದಿರುವುದು ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಲಾಭವಾಗಿ ಪರಿಣಮಿಸಲಿದೆ. ಒಬ್ಬ ಆಟಗಾರ ಮಾತ್ರವಲ್ಲ, ಆಕ್ರಮಣಕಾರಿ ನಾಯಕನನ್ನೂ ಎದುರಿಸುವ ಭಾರದಿಂದ ದಕ್ಷಿಣ ಆಫ್ರಿಕಾ ನಿರಾಳವಾದಂತಾಗಿದೆ’ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
Regardless of current form Virat Kohli not playing is a huge boost for South Africa not just as a player but the aggressive leader!
— Irfan Pathan (@IrfanPathan) January 3, 2022
‘ವಿರಾಟ್ ಕೊಹ್ಲಿ ಪಂದ್ಯದಿಂದ ಹೊರಗುಳಿದಿದ್ದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರು ತಮ್ಮ ಅತ್ಯುತ್ತಮ ಫಾರ್ಮ್ನಲ್ಲಿ ಇಲ್ಲದಿರಬಹುದು. ಆದರೆ ಕೊಹ್ಲಿ ಅನುಪಸ್ಥಿತಿಯು ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಮಾನಸಿಕ ಗೆಲುವು ತಂದುಕೊಡಲಿದೆ. ರಾಹುಲ್, ವಿಶೇಷವಾಗಿ ಪೂಜಾರ ಮತ್ತು ರಹಾನೆ ಮೇಲೆ ಹೆಚ್ಚು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾದ ಜವಾಬ್ದಾರಿ ಇದೆ’ ಎಂದು ಕ್ರಿಕೆಟ್ವಾಲಾ ಎಂಬ ಟ್ವಿಟರ್ಹ್ಯಾಂಡಲ್ನಿಂದ ಟ್ವೀಟ್ ಮಾಡಲಾಗಿದೆ.
#ViratKohli missing Test is big setback for India. He may be below his best, but Kohli’s absence will be huge psychological relief for SA. Greater onus on Rahul and particularly Pujara and Rahane to make best use of batting first.
— Cricketwallah (@cricketwallah) January 3, 2022
‘ವಿರಾಟ್ ಕೊಹ್ಲಿಯ ಇದ್ದರೆ ಅವರ ಪ್ರಭಾವವೇ ತಂಡಕ್ಕೆ ಸಾಕು. ಅವರನ್ನು ತಂಡ ಮಿಸ್ ಮಾಡಿಕೊಳ್ಳಲಿದೆ’ ಎಂದು ನೀಮ್ ಹದಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
Impact of Virat Kohli’s presence is enough for the team!💪❤️
He’ll be missed!😔@imVkohli | #SAvIND | #WTC23
— Naeem Hadi (@NaeemHadiPTI) January 3, 2022
ಕೊಹ್ಲಿ ತಂಡದಲ್ಲಿ ಇಲ್ಲದಿರುವುದು ಭಾರಿ ದೊಡ್ಡ ಹಿನ್ನಡೆ ಎಂದು ಇನ್ನೂ ಅನೇಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಋತುರಾಜ್ ಗಾಯಕ್ವಾಡ್ರನ್ನು ಕೊಂಡಾಡಿದ ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ: ಕಾರಣವೇನು?
ಉಪ ನಾಯಕ ರೋಹಿತ್ ಶರ್ಮಾ ಅವರು ಮಂಡಿರಜ್ಜು ನೋವಿನ ಕಾರಣ ಟೆಸ್ಟ್ ಸರಣಿಗೆ ತಂಡದಿಂದ ಹೊರಗುಳಿದಿದ್ದಾರೆ. ಅದೇ ರೀತಿ ಮುಂಬರುವ ಏಕದಿನ ಕ್ರಿಕಟ್ ಸರಣಿಗೂ ಅವರು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಹೀಗಾಗಿ ಏಕದಿನ ನಾಯಕತ್ವವನ್ನೂ ರಾಹುಲ್ ಅವರಿಗೆ ವಹಿಸಲಾಗಿದೆ. ಇದೀಗ ಹಠಾತ್ತಾಗಿ ಕೊಹ್ಲಿ ತಂಡದಿಂದ ಹೊರಗುಳಿಯಬೇಕಾಗಿ ಬಂದಿರುವುದರಿಂದ ಟೆಸ್ಟ್ ತಂಡದ ನಾಯಕತ್ವದ ಹೊಣೆಯೂ ರಾಹುಲ್ ಹೆಗಲೇರಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Miss you Virat bhai in today’s match @imVkohli #Kingkohli pic.twitter.com/cuJmFdA0eu
— Fit Chandu (@MouliRamKrishn1) January 3, 2022
Will miss the intensity of #ViratKohli in test match for sure. He is surely the man to look after the test cricket.#SAvIND #SAvsIND #WTC23 #FreedomSeries #BetwayTestSeries
— Saurabh Garewal 🇮🇳 (@garewal_saurabh) January 3, 2022
Big blow for india @imVkohli miss out for second test @klrahul11 to lead and @Jaspritbumrah93 as his deputy and #india batting first. #INDvsSA
— Prashanth Duggyala (@duggyala) January 3, 2022
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ರೋಹಿತ್ ಅಲಭ್ಯ: ಕನ್ನಡಿಗ ರಾಹುಲ್ ನಾಯಕ
Discussion about this post