Goa News: ಗೋವಾದಲ್ಲಿ ಓರ್ವ ತಂದೆ ತನ್ನ ಮಕ್ಕಳಿಗಾಗಿ 3 ಕೋಟಿ ರೂಪಾಯಿ ಕೂಡಿಟ್ಟಿದ್ದರು. ಆದರೆ ಅದು ಈಗ ಯಾರ ಉಪಯೋಗಕ್ಕೂ ಬಾರದೇ, ಬರೀ ಕಾಗದದ ಹಾಳೆಯಾಗಿ ಉಳಿದಿದೆ.
ಗೋವಾದ ಪಣಜಿಯ ಮಾಪುಸಾದಲ್ಲಿ ಈ ಘಟನೆ ನಡೆದಿದ್ದು, 12 ವರ್ಷದ ಹಿಂದೆ ತಂದೆ ತನ್ನ ಮಕ್ಕಳಿಗಾಗಿ 3 ಕೋಟಿ ರೂಪಾಯಿಯನ್ನು ಬ್ಯಾಂಕ್ ಲಾಕರ್ನಲ್ಲಿ ಇರಿಸಿದ್ದರು. ಬಳಿಕ ಆ ವಿಷಯವನ್ನು ಯಾರಿಗೂ ಹೇಳದೇ ತೀರಿಕೊಂಡರು. ತಮಗಾಗಿ ಅಪ್ಪ 3 ಕೋಟಿ ರೂಪಾಯಿ ಬ್ಯಾಂಕ್ ಲಾಕರ್ನಲ್ಲಿ ಇರಿಸಿದ್ದಾರೆಂಬ ವಿಷಯ ಗೊತ್ತಾಗದೇ, ಮಕ್ಕಳು ಜೀವನ ಸಾಗಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಕ್ಕಳಿಗೆ ಈ ವಿಷಯ ಗೊತ್ತಾಗಿದೆ. ಆದರೆ ಹಳೆಯ ನೋಟನ್ನು ಬದಲಿಸುವ ಎಲ್ಲ ಪ್ರಕ್ರಿಯೆ ಕೊನೆಗೊಂಡಿದೆ. ಹಾಗಾಗಿ ಲಾಕರ್ನಲ್ಲಿದ್ದ 3 ಕೋಟಿ ರೂಪಾಯಿ ಹಳೆಯ ನೋಟುಗಳು ಉಪಯೋಗಕ್ಕೆ ಬಾರದ ಕಾಗದದ ನೋಟುಗಳಾಗಿ ಉಳಿದಿದೆ. ಹಾಗಾಗಿ ಮಕ್ಕಳಿಗೆ ಆ ಮೂರು ಕೋಟಿ ರೂಪಾಯಿ ಕೈಗೆ ಸಿಕ್ಕರೂ, ಅದು ಉಪಯೋಗಕ್ಕೆ ಬಾರದೇ ಹೋಗಿದೆ.
ಇನ್ನು ಈ ಎಡವಟ್ಟಿಗೆ ಮುಖ್ಯವಾದ ಕಾರಣ ಅಂದ್ರೆ, ಮಕ್ಕಳು ವಿದೇಶದಲ್ಲಿ ನೆಲೆಸಿದ್ದು. ಈ ಮಕ್ಕಳ ತಾಯಿ ಮತ್ತು ತಂದೆ ಸೇರಿ ಬ್ಯಾಂಕ್ನಲ್ಲಿ ಲಾಕರ್ ಓಪನ್ ಮಾಡಿದ್ದರು. ತಾಯಿ ಮೊದಲೇ ತೀರಿ ಹೋಗಿದ್ದರಿಂದ , ತಂದೆ ಗೋವಾದಲ್ಲಿದ್ದುಕೊಂಡು ಇಬ್ಬರ ಲಾಕರ್ ಮೆಂಟೇನ್ ಮಾಡಿದ್ದಾರೆ. ಮಕ್ಕಳು ವಿದೇಶದಲ್ಲಿದ್ದ ಕಾರಣ, ಸಂಬಂಧ ಅಷ್ಟಕ್ಕಷ್ಟೇ ಇದ್ದಿರಬಹುದು. ಎಲ್ಲಿ ಬದುಕಿರುವಾಗಲೇ ದುಡ್ಡಿನ ವಿಷಯ ಹೇಳಿದರೆ, ಮಕ್ಕಳು ಆಸ್ತಿಯೆಲ್ಲ ಲಪಟಾಯಿಸಿ, ತನ್ನನ್ನು ಬೀದಿಗೆ ತಳ್ಳುತ್ತಾರೆಂಬ ಹೆದರಿಕೆ ಅಪ್ಪನಿಗೆ ಕಾಡಿರಬಹುದು. ಹಾಗಾಗಿ ಅಪ್ಪ ಮಕ್ಕಳಿಗೆ ತಾನು ಹಣ ಕೂಡಿಟ್ಟಿರುವ ವಿಷಯ ಹೇಳದೇ ಮುಚ್ಚಿಟ್ಟಿದ್ದಾರೆ.
ಬಳಿಕ 2012ರಲ್ಲಿ ಅಪ್ಪ ಹಠಾತ್ ನಿಧನ ಹೊಂದಿದ್ದು, ಮಕ್ಕಳು ಗೋವಾಗೆ ಬಂದು ಅಪ್ಪನ ಶವಸಂಸ್ಕಾರ ಮಾಡಿ, ಪುನಃ ವಿದೇಶಕ್ಕೆ ತೆರಳಿದ್ದಾರೆ. ಇದೀಗ ಹಳೆಯ ಮನೆಯನ್ನು ಮಾರಿ, ವಿದೇಶದಲ್ಲೇ ಸೆಟಲ್ ಆಗುವ ಯೋಚನೆ ಹೊಂದಿದ್ದ ಮಕ್ಕಳು ಭಾರತಕ್ಕೆ ಬಂದಿದ್ದರು. ಆಗ ಮನೆಯ ಪತ್ರದೊಂದಿಗೆ, ಕೆಲ ದಾಖಲಾತಿ ಪತ್ರಗಳು ಸಿಕ್ಕಿದೆ. ಆಗ ಅಪ್ಪ ಲಾಕರ್ನಲ್ಲಿ 3 ಕೋಟಿ ರೂಪಾಯಿ ಇಟ್ಟ ವಿಷಯ ಬೆಳಕಿಗೆ ಬಂದಿದೆ.
ಅಪ್ಪ ಕೂಡಿಟ್ಟ ಹಣ ಮಕ್ಕಳಿಗೆ ಸಿಗದೇ, ಹೋದರು ಅಮ್ಮನ ಲಕ್ಷ ಲಕ್ಷ ಬೆಲೆ ಬಾಳುವ ಚಿನ್ನ ಮಾತ್ರ ಮಕ್ಕಳ ಪಾಲಾಗಿದೆ. ಕೋಟಿ ಬದಲು ಲಕ್ಷ ಪಡೆದು ಮಕ್ಕಳು ಸಮಾಧಾನ ಪಟ್ಟಿದ್ದಾರೆ.
Sports News: ತಮ್ಮ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಹಾರ್ದಿಕ್ ಪತ್ನಿ ನತಾಶಾ
ಆನ್ಲೈನ್ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
ಅಸಭ್ಯ ವರ್ತನೆಯಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ
Discussion about this post