Spiritual : ಮಹಾಭಾರತದ ಕಥೆ ಶುರುವಾಗುವುದೇ ಶಂತನು ಎಂಬ ರಾಜನಿಂದ. ಈತ ಭರತಕುಲದ ಪ್ರಸಿದ್ಧ ರಾಜ. ಕುರುವಂಶಸ್ಥ. ಇಂದ್ರನಿಗೆ ಸಮನಾಗಿದ್ದ ಶಂತನು, ಒಮ್ಮೆ ಬೇಟೆ ಆಡಲೆಂದು ಕಾಡಿಗೆ ಹೋದನು. ಗಂಗಾ ನದಿ ತೀರದಲ್ಲಿ ಶಂತನು ಸಂಚರಿಸುತ್ತಿದ್ದಾಗ, ಪರಮಸುಂದರಿಯಾದ ಸ್ತ್ರೀಯೋರ್ವಳನ್ನು ಕಂಡು ಮನಸೋಲುತ್ತಾನೆ. ಆಕೆಯೂ ಕೂಡ ಶಂತನುವನ್ನು ನೋಡಿ ಮನಸೋಲುತ್ತಾಳೆ.
Exclusive News: ಹನಿಟ್ರ್ಯಾಪ್ ಹಗರಣದಲ್ಲಿ ಸಿಕ್ಕಿಬಿದ್ದ ಕನ್ನಡದ ನಿರೂಪಕಿ..?
ಶಂತನು ಆ ಸುಂದರಿಯನ್ನು ಕುರಿತು ತನ್ನನ್ನು ವಿವಾಹವಾಗುವಂತೆ ಕೇಳುತ್ತಾಳೆ. ಅದಕ್ಕೆ ಆ ಸುಂದರಿ, ನಾನು ನಿನ್ನನ್ನು ವಿವಾಹವಾಗುವೆ. ಆದ್ರೆ ನಾನು ಯಾವುದೇ ಕೆಟ್ಟ ಅಥವಾ ಒಳ್ಳೆಯ ಕೆಲಸಗಳನ್ನು ಮಾಡುವಾಗ ನೀನು ತಡೆಯಬಾರದು, ಆಕ್ಷೇಪಿಸಬಾರದು. ನೀನೇನಾದರೂ ನನ್ನ ಕೆಲಸವನ್ನು ವಿರೋಧಿಸಿದ್ದಲ್ಲಿ, ನಾನು ಆ ಕ್ಷಣವೇ ನಿನ್ನನ್ನು ಬಿಟ್ಟು ಹೋಗುವೆ ಎನ್ನುತ್ತಾಳೆ. ಸುಂದರಿಯ ಮಾತಿಗೆ ಒಪ್ಪಿದ ಶಂತನು, ಆಕೆಯನ್ನು ವಿವಾಹವಾಗುತ್ತಾನೆ. ಶಂತನುವನ್ನು ವಿವಾಹವಾದ ಆ ಸುಂದರಿಯೇ ಗಂಗಾದೇವಿ.

ಮುಂದೆ ಗಂಗಾದೇವಿ ಪರಮ ಸುಖಗಳನ್ನು ಅನುಭವಿಸುತ್ತಾ, ಆನಂದದಿಂದ ಶಂತನುವಿನ ಜೊತೆ ಕಾಲ ಕಳೆಯುತ್ತಾಳೆ. ಆಕೆ ತಾಯಿಯಾಗುತ್ತಾಳೆ. ತಾನು ತಂದೆಯಾಗುತ್ತಿದ್ದೇನೆಂಬ ಖುಷಿ ಶಂತನುವಿಗೆ ಇರುತ್ತದೆ. ಗಂಗಾ ದೇವಿಯನ್ನು ಸದಾ ಕಾಳಜಿಯಿಂದ ಕಾಣುತ್ತಾನೆ. ಇನ್ನೇನು ಮಗು ಜನಿಸಿತು, ಅದನ್ನು ಹಿಡಿದು ಮುದ್ದಾಡಬೇಕು ಎನ್ನುವಷ್ಟರಲ್ಲಿ, ಗಂಗಾದೇವಿ ಆ ಮಗುವನ್ನು ತೆಗೆದುಕೊಂಡು ಹೋಗಿ, ನದಿಗೆ ಎಸೆಯುತ್ತಾಳೆ. ಇದನ್ನು ನೋಡಿ ಶಂತನುವಿಗೆ ಬೇಸರವಾಗುತ್ತದೆ. ಆದರೆ ಆಕೆ ಹೇಳಿದಂತೆ, ಆಕೆಗೆ ಏನನ್ನೂ ಪ್ರಶ್ನಿಸಬಾರದೆಂದು ಸುಮ್ಮನಾಗುತ್ತಾನೆ.
ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ
ಹೀಗೆ ಶಂತನು ಮತ್ತು ಗಂಗೆಗೆ 8 ಮಕ್ಕಳು ಜನಿಸುತ್ತಾರೆ. ಆದರೆ ಮಗು ಹುಟ್ಟುತ್ತಿದ್ದಂತೆ ಗಂಗಾ ದೇವಿ, ಆ ಮಗುವನ್ನು ತೆಗೆದು ಗಂಗಾನದಿಗೆ ಎಸೆದು ಬಿಡುತ್ತಾಳೆ. ಹೀಗೆ ಹುಟ್ಟಿದ 7 ಮಕ್ಕಳನ್ನ ಗಂಗಾದೇವಿ ಗಂಗಾನದಿಗೆ ಎಸೆದುಬಿಡುತ್ತಾಳೆ. ಆದ್ರೆ ಎಂಟನೇ ಮಗು ಹುಟ್ಟಿದಾಗ ಅದನ್ನು ನದಿಗೆ ಎಸೆಯಲು ಹೋದ ಗಂಗೆಯನ್ನು ಶಂತನು ತಡೆಯುತ್ತಾನೆ. ಅವನಿಗೆ ಕೋಪ ಬರುತ್ತದೆ. ದುಃಖವಾಗುತ್ತದೆ. ಮಕ್ಕಳನ್ನೇಕೆ ಕೊಲ್ಲುತ್ತಿರುವೆ ಇದರಿಂದ ನಿನಗೇನು ಸಿಗುತ್ತದೆ..? ಆ ಪುಟ್ಟ ಮಕ್ಕಳು ಮಾಡಿದ ಪಾಪವಾದರೂ ಏನು..? ಎಂದು ಕೇಳುತ್ತಾನೆ.

ಆಗ ಗಂಗೆ, ನಾನು ನಿಮ್ಮ ಈ ಮಗುವನ್ನು ಕೊಲ್ಲುವುದಿಲ್ಲ. ಆದರೆ ನನ್ನ ನಿಮ್ಮ ಒಪ್ಪಂದದಂತೆ ನಾನು ಇಂದು ನಿಮ್ಮನ್ನು ತೊರೆದು ಹೋಗುತ್ತಿದ್ದೇನೆ. ಇಷ್ಟು ವರ್ಷ ನಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಶಾಪಗ್ರಸ್ತರಾಗಿದ್ದ ಅಷ್ಟ ವಸುಗಳು. ಇಂಥ ಮಕ್ಕಳನ್ನು ಪಡೆಯಲು ನಾನು ಮತ್ತು ನೀವು ಅರ್ಹರಾಗಿದ್ದೇವು. ಆದರೆ ಈ ಎಂಟನೇ ಪುತ್ರ ದೇವವೃತ, ಗಂಗಾದತ್ತ. ಮುಂದೆ ನಿನಗೆ ಸಿಗುವ ಈತನನ್ನು ಸಂರಕ್ಷಿಸು. ಈಗ ಇವನನ್ನು ನಾನು ಕರೆದುಕೊಂಡು ಹೋಗಿ, ಸಾಕಿ ಸಲುಹಿ, ಮುಂದೊಂದು ದಿನ ನಿನಗೆ ಒಪ್ಪಿಸುತ್ತೇನೆ ಎಂದು ಹೇಳಿ ಮಗುವಿನ ಜೊತೆ ಗಂಗೆ ಅದೃಷ್ಯಳಾಗುತ್ತಾಳೆ.
Beauty Tips: ಮನೆಯಲ್ಲಿ ತಯಾರಿಸಿ ನ್ಯಾಚುರಲ್ ಸ್ಕ್ರಬ್
ತದನಂತರ ಶಂತನು 36 ವರ್ಷಗಳ ಕಾಲ ಭೋಗ ಭಾಗ್ಯಗಳಿಲ್ಲದೇ, ಸಾಮಾನ್ಯನಂತೆ ಜೀವನ ಕಳೆಯುತ್ತಾನೆ. ಹಸ್ತಿನಾಪುರದಲ್ಲಿ ಉತ್ತಮ ಆಡಳಿತ ನಡೆಸುತ್ತಾನೆ. ಒಮ್ಮೆ ಅರಣ್ಯಕ್ಕೆ ಬಂದ ಶಂತನು ಜಿಂಕೆಯೊಂದನ್ನ ಬೇಟೆಯಾಡಬೇಕೆಂದು ಜಿಂಕೆಗೆ ಬಾಣ ಬಿಡುತ್ತಾನೆ. ಆಗ ಜಿಂಕೆ ಗಂಗಾ ನದಿ ತೀರಕ್ಕೆ ಬಂದು ಮಾಯವಾಗುತ್ತದೆ. ಆ ಜಿಂಕೆಯನ್ನು ಹುಡುಕುತ್ತ ಬಂದ ಶಂತನುವಿಗೆ ಗಂಗಾ ನದಿ ನೀರು ಬತ್ತಿರುವುದು ಗೊತ್ತಾಗುತ್ತದೆ. ಯಾಕೆಂದು ತಿಳಿಯಲು ಹಾಗೆ ಮುಂದೆ ಹೋದಾಗ, ಅಲ್ಲಿ ಬಾಲಕನೋರ್ವ ಧನುರ್ಬಾಣದಿಂದ ನದಿಯ ಹರಿವನ್ನು ತಡೆದಿದ್ದನ್ನು ನೋಡುತ್ತಾನೆ.
ಫೆಬ್ರವರಿಯಲ್ಲಿ ಹುಟ್ಟಿದವರು ಈ ಕೆಲಸ ಮಾಡದಿದ್ದಲ್ಲಿ, ಕಷ್ಟ ಕಟ್ಟಿಟ್ಟ ಬುತ್ತಿ
ಆ ಬಾಲಕನ ಬಳಿ ಹೋಗುವಾಗ, ಬಾಲಕನೂ ಅದ್ರಷ್ಯನಾಗುತ್ತಾನೆ. ಆಗ ಗಂಗಾದೇವಿ ಆ ಬಾಲಕನೊಂದಿಗೆ ಬಂದು, ರಾಜ, ಈ ಬಾಲಕ ನಿನ್ನ ಪುತ್ರ ದೇವವೃತ. ನಾನು ಗಂಗಾದೇವಿ. ಇನ್ನು ಮುಂದೆ ಈತ ನಿನ್ನ ಸ್ವತ್ತು, ಸಕಲ ವಿದ್ಯೆಗಳನ್ನು ಅರಿತ, ರಾಜವಂಶಸ್ಥನಾಗಲು ಅರ್ಹತೆ ಹೊಂದಿರುವ ದೇವವೃತನನ್ನು ಅರಮನೆಗೆ ಕರೆದೊಯ್ಯಿ ಎಂದು ಹೇಳಿ, ಗಂಗೆ ಹೊರಡುತ್ತಾಳೆ. ಪುತ್ರನನ್ನು ಕಂಡು ಸಂತಸಗೊಂಡ ಶಂತನು, ಆತನನ್ನು ತಬ್ಬಿ ಮುದ್ದಿಸಿ, ಅರಮನೆಗೆ ಕರೆದೊಯ್ಯುತ್ತಾನೆ.























Discussion about this post