Horoscope: ನಾವಿವತ್ತು ಮೇ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ. ಮೊದಲನೇಯದಾಗಿ ಮೇನಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..
ಮೇ ತಿಂಗಳಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಅದರಲ್ಲಿ ಕೆಲವರು ಪ್ರಸಿದ್ಧರೂ ಆಗಿರುತ್ತಾರೆ. ಅಷ್ಟೇ ಅಲ್ಲದೇ ಇವರು ಬಿಂದಾಸ್ ಸ್ವಭಾವದವರಾಗಿರುತ್ತಾರೆ. ಹೆಚ್ಚು ಟೆನ್ಶನ್ ಮಾಡಿಕೊಳ್ಳದ ಇವರು, ಯಾವಾಗಲೂ ನಗು ನಗುತ್ತ ಇರಲು ಬಯಸುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸದ ಇವರು ವರ್ತಮಾನದಲ್ಲಿ ಖುಷಿಯಾಗಿ ಜೀವಿಸಲು ಇಚ್ಛಿಸುತ್ತಾರೆ.
Health Tips: ನೆನೆಸಿಟ್ಟ ಶೇಂಗಾ ಸೇವನೆಯಿಂದಾಗುವ 10 ಆರೋಗ್ಯಕರ ಲಾಭಗಳು
ಇವರೆಷ್ಟು ಸ್ನೇಹ ಜೀವಿಗಳಾಗಿರುತ್ತಾರೋ, ಎಷ್ಟು ಬಿಂದಾಸ್ ಆಗಿರುತ್ತಾರೋ, ಅಷ್ಟೇ ಎಮೋಷನಲ್ ಆಗಿರುತ್ತಾರೆ. ಆದ್ರೆ ತಮ್ಮ ಭಾವನೆಗಳನ್ನ ಎಲ್ಲೂ ತೋರ್ಪಡಿಸುವುದಿಲ್ಲ. ನೋಡಲು ಇವರು ಜೋರಾಗಿರುವವರ ಥರ ಕಂಡರೂ, ಇವರು ಮೃದು ಮನಸ್ಸಿನವರಾಗಿರುತ್ತಾರೆ.
ರಾಯಲ್ ಲೈಫ್ ಲೀಡ್ ಮಾಡಲು ಬಯಸುವ ಇವರು, ತಾನು ರಾಜ ಅಥವಾ ರಾಣಿಯಂತಿರಲು ಬಯಸುತ್ತಾರೆ. ಒಳ್ಳೆಯ ಊಟ, ಕಾಸ್ಟ್ಲಿ ಬಟ್ಟೆ, ವಾಸಕ್ಕೆ ಅತ್ಯುತ್ತಮವಾದ ಮನೆಯನ್ನೇ ಇವರು ಬಯಸುತ್ತಾರೆ. ಅದೇ ರೀತಿ ಕೆಲಸ ಮಾಡುತ್ತಾರೆ ಮತ್ತು ಸಂಪಾದಿಸುತ್ತಾರೆ.
ಈ ರೆಮಿಡಿಯನ್ನು ನೀವು ಪ್ರಯೋಗಿಸಿದರೆ, ನಿಮ್ಮ ತ್ವಚೆ ಕ್ಲೀನ್, ಸಾಫ್ಟ್ ಆಗೋದು ಗ್ಯಾರಂಟಿ
ಅಂದವಾಗಿ, ಸ್ಟೈಲಿಶ್ ಆಗಿ ಕಾಣಲು ಬಯಸುವ ಇವರು ಶಿಸ್ತಿನಿಂದಿರುವುದನ್ನು ಬಯಸುತ್ತಾರೆ. ತಾವು ವಾಸವಿರುವ ಮನೆ, ತಾವು ಕೆಲಸ ಮಾಡುವ ಜಾಗವೆಲ್ಲ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಮತ್ತು ತಮ್ಮ ವಸ್ತುಗಳನ್ನ ಜೋಪಾನವಾಗಿ, ವ್ಯವಸ್ಥಿತವಾಗಿ ಇಟ್ಟುಕೊಳ್ಳುತ್ತಾರೆ.
ಕೊಟ್ಟ ಮಾತು ನಡೆಸಿಕೊಡುವ ಇವರು, ಸ್ನೇಹವನ್ನ ಪ್ರೀತಿಯನ್ನ ಕೊನೆತನಕ ನಿಭಾಯಿಸುತ್ತಾರೆ. ಭಾವುಕ ಹೃದಯದವರಾದ ಇವರು, ಎಲ್ಲರೊಂದಿಗೂ ಉತ್ತಮ ರೀತಿಯಲ್ಲಿರಲು ಬಯಸುತ್ತಾರೆ. ಆದ್ರೆ ಒಮ್ಮೆ ಇವರ ನಂಬಿಕೆ ಕಳೆದುಕೊಂಡರೆ, ಎಷ್ಟೇ ಪ್ರಯತ್ನಿಸಿದರೂ, ಇವರ ಪ್ರೀತಿ ಮತ್ತು ಸ್ನೇಹವನ್ನು ಪಡೆಯಲು ಸಾಧ್ಯವಿಲ್ಲ.
Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು
ಇವಿಷ್ಟು ಮೇ ತಿಂಗಳಲ್ಲಿ ಜನಿಸಿದವರ ಉತ್ತಮ ಸ್ವಭಾವ. ಇನ್ನು ಇವರ ಉತ್ತಮವಲ್ಲದ ಸ್ವಭಾವದ ಬಗ್ಗೆಯೂ ತಿಳಿಯೋಣ ಬನ್ನಿ..
ನಿರ್ಲಕ್ಷ್ಯ ಮಾಡುವ ಸ್ವಭಾವದವರಾದ ಇವರು, ಎದುರಿನವರಿಗೆ ಬೇಸರವಾಗುತ್ತದೆ ಎಂಬುದನ್ನೂ ಅರಿಯದೇ, ಕೆಲವೊಮ್ಮೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಆದ್ದರಿಂದಲೇ ಇವರಿಗೆ ಸ್ನೇಹಿತರಿಗಿಂತ ಹೆಚ್ಚಾಗಿ, ವಿರೋಧಿಗಳೇ ಇರುತ್ತಾರೆ.
ಇವ ರ ನಡುವಳಿಕೆ ನೋಡಿ ಬೇರೆಯವರು ಇವರಿಗೆ ಈಗೋ ಇದೆ ಎಂದು ತಿಳಿಯುತ್ತಾರೆ. ಆದ್ರೆ ಇವರು ಬಿಂದಾಸ್ ಸ್ವಭಾವದವರಾದ ಕಾರಣ, ಬೇರೆಯವರ ಜೀವನದಲ್ಲಿ ಏನು ನಡಿಯುತ್ತಿದೆ ಎನ್ನುವ ಬಗ್ಗೆ ಇಂಟ್ರೆಸ್ಟ್ ಇರುವುದಿಲ್ಲ. ಹಾಗಾಗಿ ಯಾರನ್ನೂ, ಯಾವುದನ್ನೂ ಇವರು ಕೇರ್ ಮಾಡುವುದಿಲ್ಲ. ಇದೇ ಕಾರಣಕ್ಕೆ ಇವರು ಕೆಲವರಿಗೆ ಅಹಂಕಾರಿಗಳು ಎನ್ನಿಸುತ್ತಾರೆ.
ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe
ಇನ್ನು ಇವರ ಕೆಲಸದ ಬಗ್ಗೆ ಮಾತನಾಡುವುದಾದರೆ, ವೈದ್ಯಕೀಯ ವೃತ್ತಿ, ಪತ್ರಕರ್ತ, ಲೇಖಕ, ಎಂಜಿನಿಯರ್, ಪೈಲಟ್ ಕೆಲಸವನ್ನು ಇವರು ಉತ್ತಮವಾಗಿ ನಿಭಾಯಿಸುತ್ತಾರೆ.
2,3,7,8 ಇವರ ಲಕ್ಕಿ ನಂಬರ್ ಆಗಿದ್ದು, ಬಿಳಿ ಬಣ್ಣ, ಕಿತ್ತಳೆ ಬಣ್ಣ, ತಿಳಿ ಹಸಿರು, ನೀಲಿ ಬಣ್ಣ ಅದೃಷ್ಟದ ಬಣ್ಣಗಳಾಗಿದೆ. ಶನಿವಾರ, ರವಿವಾರ ಮತ್ತು ಸೋಮವಾರ ಇವರ ಅದೃಷ್ಟದ ದಿನಗಳಾಗಿದೆ.
Discussion about this post