Recipe: 3ರಿಂದ 4 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, 2ರಿಂದ 3 ಸ್ಪೂನ್ ಎಣ್ಣೆ, ಒಂದು ಸ್ಪೂನ್ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರಿಬೇವು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ ಅರಿಷಿನ, ಕೊಂಚ ಗರಂ ಮಸಾಲೆ, ಚಿಟಿಕೆ ಇಂಗು, ಅರ್ಧ ಚಮಚ ಮೆಣಸಿನ ಪುಡಿ, ಅರ್ಧ ಕಪ್ ಕಡಲೆ ಹಿಟ್ಟು, ಎರಡು ಸ್ಪೂನ್ ಅಕ್ಕಿ ಹಿಟ್ಟು.
ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರಾ..? ಸಣ್ಣ ಆಗ್ತಾರಾ..? ಇಲ್ಲಿದೆ ನೋಡಿ ಸರಿಯಾದ ಉತ್ತರ.
ಬೋಂಡಾ ಹೂರಣಕ್ಕೆ ಹಾಕಲು ಒಂದು ಸ್ಪೂನ್ ಮಸಾಲೆ ತಯಾರಿಸಿಕೊಳ್ಳಬೇಕು. ಈ ಮಸಾಲೆಗೆ ಒಂದು ಸ್ಪೂನ್ ಜೀರಿಗೆ, 5ರಿಂದ 6 ಎಸಳು ಬೆಳ್ಳುಳ್ಳಿ, ಒಂದರಿಂದ ಎರಡು ಹಸಿ ಮೆಣಸಿನಕಾಯಿ, ಒಂದು ಸ್ಪೂನ್ ಸೋಂಪು ಬೇಕು. ಇದನ್ನೆಲ್ಲ ಮಿಕ್ಸಿ ಮಾಡಿದ್ರೆ ಬೋಂಡಾ ಹೂರಣಕ್ಕೆ ಬೇಕಾಗುವ ಮಸಾಲೆ ರೆಡಿ.
Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಮಿಸಳ್ ಪಾವ್
ಒಂದು ಪಾತ್ರೆಗೆ ಅರ್ಧ ಕಪ್ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಕರಗಿಸಿ. ನಂತರ ಜರಡಿ ಮಾಡಿದ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಜೀರಿಗೆ, ಹಿಂಗು, ಅರ್ಧ ಸ್ಪೂನ್ ಎಣ್ಣೆ ಹಾಕಿ ಹಿಟ್ಟು ಕಲೆಸಿ. ನೆನಪಿರಲಿ, ಬೋಂಡಾ ಹಿಟ್ಟು ಕಲೆಸುವಾಗ ವ್ಹಿಸ್ಕ್ ಅಥವಾ ಸೌಟ್‌ನಿಂದ ಕಲೆಸುವ ಬದಲು, ಕೈಯಿಂದಲೇ ಕಲೆಸಿ. ಈ ರೀತಿ ಮಾಡುವುದರಿಂದ ಬ್ಯಾಟರ್ ನೀಟ್ ಆಗಿ ಬರತ್ತೆ. ಈಗ ದೋಸೆ ಹಿಟ್ಟಿಗಿಂತ ಕೊಂಚ ತೆಳ್ಳಗಿರುವ ಬ್ಯಾಟರ್ ರೆಡಿ ಮಾಡಿ ಪಕ್ಕಕ್ಕಿರಿಸಿ.
ಬೋಂಡಾ ಹೂರಣ ಮಾಡಿಕೊಳ್ಳಲು ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು ಅದಕ್ಕೆ 2ರಿಂದ 3 ಟೇಬಲ್ ಸ್ಪೂನ್ ಎಣ್ಣೆ, ಚಿಟಿಕೆ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರೀಬೇವು ಹಾಕಿ ಹುರಿಯಿರಿ.
Recipe: ಅವಲಕ್ಕಿಯಿಂದ ತಯಾರಿಸಬಹುದಾದ ಸುಲಭ ಟೀ ಟೈಮ್ ಸ್ನ್ಯಾಕ್ಸ್
ಇದಕ್ಕೆ ಈರುಳ್ಳಿ ಹಾಕಿ 2ನಿಮಿಷ ಬಾಡಿಸಿ, ಬೋಂಡಾಗಾಗಿ ತಯಾರಿಸಿದ ಮಸಾಲೆ, ಚಿಟಿಕೆ ಉಪ್ಪು, ಚಿಟಿಕೆ ಅರಿಷಿನ, ಚಿಟಿಕೆ ಗರಂ ಮಸಾಲೆ ಸೇರಿಸಿ ಹುರಿಯಿರಿ. ನಿಮಗೆ ಖಾರ ಹೆಚ್ಚು ಬೇಕಾದ್ದಲ್ಲಿ ಬೋಂಡಾ ಮಸಾಲೆಯನ್ನು ಹೆಚ್ಚು ಸೇರಿಸಿ ಅಥವಾ ಖಾರದ ಪುಡಿ- ಗರಂ ಮಸಾಲೆ ಮಿಶ್ರಣವನ್ನ ಹೆಚ್ಚು ಉಪಯೋಗಿಸಿ.
ಈಗ ಬೇಯಿಸಿಟ್ಟುಕೊಂಡ ಆಲುವನ್ನ ಮ್ಯಾಶ್ ಮಾಡಿ ಪಲ್ಯಕ್ಕೆ ಬಳಸಿ. ನಾವಿಲ್ಲಿ ಆಲೂವನ್ನ ಕಟ್ ಮಾಡಿಕೊಂಡು ಪ್ಯಾನ್‌ನಲ್ಲೇ ಮ್ಯಾಶ್ ಮಾಡಿದ್ದೇವೆ. ಆಲೂ ಮ್ಯಾಶ್ ಮಾಡಲು ಮ್ಯಾಷರ್ ಇರದ ಕಾರಣ ಚಿಕ್ಕ ಟೀ ಕಪ್‌ನಿಂದಲೇ ಮ್ಯಾಶ್ ಮಾಡಿದ್ದೇವೆ.
ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video
ಮ್ಯಾಶ್ ಮಾಡಿದ ಆಲೂ ಮಿಕ್ಸ್ ಮಾಡುವಾಗ ಬೇಕಾದಲ್ಲಿ ಕೊಂಚ ನೀರು, ಎಣ್ಣೆ ಸೇರಿಸಬಹುದು. ಕೊನೆಯದಾಗಿ ಸಣ್ಣಗೆ ಕತ್ತರಿಸಿದ ಕೊತ್ತೋಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ, 2 ನಿಮಿಷ ಪ್ಯಾನ್‌ನಲ್ಲಿರಿಸಿ, ಗ್ಯಾಸ್ ಆಫ್ ಮಾಡಿ ಆರಲು ಬಿಡಿ.
10 ನಿಮಿಷದ ಬಳಿಕ ಪಲ್ಯದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ತಯಾರಿಸಿಕೊಳ್ಳಿ. ಉಂಡೆ ತಯಾರಿಸುವಾಗ ಕೈಗೆ ಕೊಂಚ ಎಣ್ಣೆ ಹಚ್ಚಿಕೊಂಡರೆ, ಪಲ್ಯದ ಉಂಡೆ ನೀಟಾಗಿರುತ್ತದೆ.
Health Tips: ಹಸುವಿನ ಶುದ್ಧ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುತ್ತದೆ ಆಶ್ಚರ್ಯಕರ ಲಾಭ
ಎಣ್ಣೆ ಕಾಯಲು ಇರಿಸಿ, ಪಲ್ಯದ ಉಂಡೆಯನ್ನ ಬ್ಯಾಟರ್‌ನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರೆಯಿರಿ. ಬೋಂಡಾ ಫಾಸ್ಟ್ ಆಗಿ ಆಗಲಿ ಎಂದು ಗ್ಯಾಸ್ ಫ್ಲೇಮ್ ಜಾಸ್ತಿ ಇಡಬೇಡಿ. ಮಂದ ಉರಿಯಲ್ಲಿ ಬೋಂಡಾ ಕರೆದರೆ ರುಚಿ ಉತ್ತಮವಾಗಿರುತ್ತೆ. ರೆಡಿಯಾದ ಬೋಂಡಾವನ್ನ ಸಾಸ್ ಜೊತೆ ಸರ್ವ್ ಮಾಡಿ.
Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ
Discussion about this post