Horoscope: ನಾವಿವತ್ತು ಮೇಷ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
- ಮೇಷರಾಶಿಯ ಅಧಿಪತಿ ಮಂಗಳನಾಗಿದ್ದಾನೆ. ಇವರು ಯಾವುದಾದರೂ ಕೆಲಸ ಮಾಡುವುದಾದರೆ, ಆ ಬಗ್ಗೆ ಮೊದಲೇ ಯೋಚಿಸುವುದು ಕಡಿಮೆ. ಯಾವುದಾದರೂ ಕೆಲಸ ಮಾಡಬೇಕೆನ್ನಿಸಿದರೆ, ಥಟ್ಟನೆ ಆ ಕೆಲಸವನ್ನು ಮಾಡುತ್ತಾರೆ. ಆ ಕೆಲಸದ ಪರಿಣಾಮ ಲಾಭವಾದರೂ ಸರಿ ನಷ್ಟವಾದರೂ ಸರಿ.
ಕಿಚ್ಚನ ಮುಂದೆ ಯಕ್ಷಗಾನ ಪ್ರಸ್ತುತಿ, ಕಣ್ಣು ಮಿಟುಕಿಸದೇ ದಿಗಿಣ ಕಂಡ ನಟ ಸುದೀಪ್
- ಇವರಿಗೆ ಚಾಲೆಂಜ್ ಮಾಡುವುದು ಮತ್ತು ಚಾಲೆಂಜ್ ಸ್ವೀಕರಿಸುವುದೆಂದರೆ ಬಲು ಇಷ್ಟ. ಇವರು ಚಾಲೆಂಜ್ ಮಾಡುವುದಕ್ಕಿಂತ ಹೆಚ್ಚಾಗಿ ಚಾಲೆಂಜ್‌ಗಳನ್ನ ಸ್ವೀಕರಿಸುತ್ತಾರೆ. ಮತ್ತು ಸ್ವೀಕರಿಸಿದ ಚಾಲೆಂಜ್‌ನ್ನ ಪೂರ್ತಿ ಮಾಡಿ ಗೆಲ್ಲುವುದರಲ್ಲಿ ಇವರಿಗೆ ಖುಷಿ ಸಿಗುತ್ತದೆ. ಆ ಗೆಲುವಿಗಾಗಿ ಸಾಕಷ್ಟು ಕಷ್ಟವನ್ನೂ ಪಡುತ್ತಾರೆ.
- ನಾಯಕತ್ವದ ಗುಣ ಹೊಂದಿರುವ ಮೇಷ ರಾಶಿಯವರು, ಕೊಟ್ಟ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಇವರು ನೋಡಲು ಸುಂದರವಾಗಿದ್ದು, ಆಕರ್ಷಕ ಗುಣಗಳನ್ನು ಹೊಂದಿರುತ್ತಾರೆ. ಅಲ್ಲದೇ ಇವರಿಗೆ ಆತ್ಮವಿಶ್ವಾಸವೂ ಹೆಚ್ಚಾಗಿರುತ್ತದೆ.
ತುಳುನಾಡಿನ ಬಗ್ಗೆ ನಟ ಸುದೀಪ್ ಮಾತು
- ಯಾರ ಮೇಲೂ ಅವಲಂಬಿತರಾಗಿರದೇ, ಸ್ವಾತಂತ್ರ್ಯರಾಗಿರಲು ಇಷ್ಟಪಡುವ ರಾಶಿಯವರು ಈ ಮೇಷ ರಾಶಿಯವರು. ಇನ್ನು ಮೇಷ ರಾಶಿಯ ಮೊದಲ ತತ್ವ ಅಗ್ನಿಯಾಗಿದೆ. ಇವರಿಗೆ ಸಾಮಾನ್ಯವಾಗಿ ಸಿಟ್ಟು ಬರುವುದಿಲ್ಲ. ಆದ್ರೆ ಸಿಟ್ಟು ಬಂದರೆ ಮಾತ್ರ ಇವರ ಆರ್ಭಟವನ್ನು ತಡೆಯುವುದು ಕಷ್ಟ.
- ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಉಳ್ಳ ಮೇಷ ರಾಶಿಯವರು, ದೇವರಲ್ಲಿ ಹೆಚ್ಚಿನ ಭಕ್ತಿ ಮಾಡುತ್ತಾರೆ. ಮತ್ತು ಹೀಗೆ ಹೆಚ್ಚಿನ ಭಕ್ತಿ ಮತ್ತು ತಾಳ್ಮೆಯಿಂದಲೇ ಇವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ.
ದೇವರಂತೆ ಬಂದು ಪ್ರಯಾಣಿಕನನ್ನು ರಕ್ಷಿಸಿದ ಕಂಡಕ್ಟರ್
- ಮೊದಲೇ ಹೇಳಿದಂತೆ ಇವರಿಗೆ ನಾಯಕತ್ವ ಗುಣ ಇದ್ದು, ಇವರು ಬೇರೆಯವರ ಕೈ ಕೆಳಗೆ ಕೆಲಸ ಮಾಡಿ ಸಂಬಳ ಗಿಟ್ಟಿಸಿಕೊಳ್ಳಲು ಬಯಸುವುದಿಲ್ಲ. ಬದಲಾಗಿ ಬೇರೆಯವರಿಗೆ ಕೆಲಸ ನೀಡುವ ಯೋಗ್ಯತೆ ಬರಲಿ ಎಂದು ಬಯಸುತ್ತಾರೆ. ಮನಸ್ಸು ಮಾಡಿದ್ದಲ್ಲಿ ಈ ಕಾರ್ಯವೂ ಪೂರ್ಣಗೊಳ್ಳುತ್ತದೆ.
- ನಿಮ್ಮ ಜಾತಕದಲ್ಲಿ ಮಂಗಲನ ಸ್ಥಾನ ಶುಭವಾಗಿದ್ದರೆ, ನಿಮಗೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲ. ಆದರೆ ನಿಮ್ಮ ಜಾತಕದಲ್ಲಿ ಕುಜ ಅಂದರೆ ಮಂಗಲ ಅಶುಭ ಸ್ಥಾನದಲ್ಲಿದ್ದರೆ, ನಿಮಗೆ ಮೈಗ್ರೇನ್ ಸಮಸ್ಯೆ ನಿದ್ರಾ ಹೀನತೆ ಸಮಸ್ಯೆ ಉಂಟಾಗುತ್ತದೆ.
ಮುಸ್ಲಿಂಮರ ವೇಷ ಧರಿಸಿ, 124 ಮೇಕೆ ಖರೀದಿಸಿದ ಜೈನರು: ಇದರ ಹಿಂದಿದೆ ರೋಚಕ ಕಥೆ
- ಕೆಂಪು, ಹಳದಿ ಮತ್ತು ಬಿಳಿ ಮೇಷ ರಾಶಿಯವರ ಅದೃಷ್ಟದ ಬಣ್ಣಗಳಾಗಿದೆ. ಸೋಮವಾರ, ಮಂಗಳವಾರ ಮತ್ತು ಗುರುವಾರ ಶುಭ ದಿನಗಳಾಗಿದೆ. 9 ನಿಮ್ಮ ಲಕ್ಕಿ ನಂಬರ್ ಆಗಿದೆ.
Discussion about this post