Sandalwood News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ, ಪೊಲೀಸರು ಅರೆಸ್ಟ್ ಮಾಡಿದ್ದು, ಇದೀಗ ಗೆಳತಿ ಪವಿತ್ರಾ ಗೌಡ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲ ದಿನಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರು ಸಾವನ್ನಪ್ಪಿದ್ದರು. ಅವರ ಮನೆಯವರು ಪೊಲೀಸರಿಗೆ ರೇಣುಕಾಸ್ವಾಮಿ ಕಾಣೆಯಾಗಿದ್ದಾರೆಂದು ಕಂಪ್ಲೆಂಟ್ ನೀಡಿದ್ದರು.
ರೇಣುಕಾಸ್ವಾಮಿ ಪವಿತ್ರ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಫೋಟೋಗಳನ್ನು ಕಳುಹಿಸುತ್ತಿದ್ದನೆಂದು ದರ್ಶನ್ ಆಪ್ತ, ರೇಣುಕಾಸ್ವಾಮಿಗೆ ಕಾಲ್ ಮಾಡಿ, ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ರಾಜರಾಜೇಶ್ವರಿ ನಗರದ ಶೆಡ್‌ವೊಂದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ವೇಳೆ ಮರ್ಮಾಂಗಕ್ಕೆ ಪೆಟ್ಟಾಗಿ, ರೇಣುಕಾಸ್ವಾಮಿ, ಸಾವನ್ನಪ್ಪುತ್ತಾನೆ. ಬಳಿಕ ಅವನ ಶವವನ್ನು ಕಾಮಾಕ್ಷಿ ಪಾಳ್ಯದಲ್ಲಿ ಎಸೆಯಲಾಗಿದೆ.
ನಾಯಿಗಳು ಶವವನ್ನು ತಂದು ರಸ್ತೆಗೆ ಬಿಸಾಕಿದಾಗ, ಅಲ್ಲೊಂದು ಕೊಲೆ ನಡೆದಿದೆ. ಶವವನ್ನು ಯಾರೋ ಎಸೆದುಹೋಗಿದ್ದಾರೆಂಬ ವಿಷಯ ಬೆಳಕಿಗೆ ಬರುತ್ತದೆ. ಈ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರು ತನಿಖೆ ನಡೆಸಿದಾಗ, ದರ್ಶನ್ ಮತ್ತು ಅವರ ಆಪ್ತರು ಈ ಕೆಲಸ ಮಾಡಿದ್ದಾಗಿ ಗೊತ್ತಾಗಿದೆ.
ನಿನ್ನೆ 10 ಜನ ದರ್ಶನ್ ಆಪ್ತರನ್ನು ಅರೆಸ್ಟ್ ಮಾಡಿ, ಪೊಲೀಸ್ ಸ್ಟೇಶನ್‌ನಲ್ಲಿ ಬೆಂಡೆತ್ತಲಾಗಿದೆ. ಆಗ ನಿಜ ಸಂಗತಿ ಬಯಲಾಗಿದ್ದು, ಕೊಲೆ ಮಾಡಿದ್ದನ್ನು ದರ್ಶನ್ ಆಪ್ತರು ಒಪ್ಪಿಕೊಂಡಿದ್ದಾರೆ. ಹಾಗಾಗಿ ಇಂದು ಬೆಳಿಗ್ಗೆ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ಪವಿತ್ರಾ ಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಇಲಿ ಮಾಡಿದ ಅವಾಂತರದಿಂದ ನಟನಿಗೆ ಲಕ್ಷಾಂತರ ರೂ. ನಷ್ಟ: ಗ್ಯಾರೇಜ್‌ಗೆ ಹೋದ ಕೋಟಿ ಬೆಲೆಯ ಕಾರು
ಯುವರಾಜ್ ಕುಮಾರ್ ಡಿವೋರ್ಸ್ ಪ್ರಕರಣ: ಶ್ರೀದೇವಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವಕೀಲರು
Discussion about this post