Sandalwood News: ಬೆಂಗಳೂರಿನ ಇಂದಿರಾನಗರದಲ್ಲಿ ಸ್ಪಾ ಓನರ್‌ಗೆ ಹಣ ನೀಡಬೇಕೆಂದು ಬೆದರಿಕೆ ಹಾಕಿದ ಕೇಸ್‌ನಲ್ಲಿ ದಿವ್ಯಾ ವಸಂತಾ ಆರೋಪಿಯಾಗಿದ್ದು, ಈಕೆಗಾಗಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರು. ಇದೀಗ ದಿವ್ಯಾ ವಸಂತಾ ಸಿಕ್ಕಿಬಿದ್ದಿದ್ದು, ಕೇರಳದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇಂದಿರಾ ನಗರದಲ್ಲಿರುವ ಸ್ಪಾ ಒನರ್‌ಗೆ 15 ಲಕ್ಷ ನೀಡಬೇಕು, ಇಲ್ಲದಿದ್ದಲ್ಲಿ ಸ್ಪಾನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಹೇಳಿ, ನ್ಯೂಸ್ ಮಾಡಿ, ಮರ್ಯಾದೆ ತೆಗೆಯುವುದಾಗಿ, ದಿವ್ಯಾ ವಸಂತಾ, ರಾಜಾನುಕುಂಟೆ ವೆಂಕಟೇಶ್, ಮತ್ತು ದಿವ್ಯ ಸಹೋದರ ಸಂದೇಶ್, ಇನ್ನೋರ್ವ ಆರೋಪಿ ಆಕಾಶ್ ಬೆದರಿಕೆ ಹಾಕಿದ್ದರು.
ಅದಕ್ಕೂ ಮುನ್ನ ದಿವ್ಯಾ, ವೆಂಕಟೇಶ್, ಸಂದೇಶ್ ಸೇರಿ, ವಾಟ್ಸಾಪ್ ಗ್ರೂಪ್ ಮಾಡಿ, ಯಾರ್ಯಾರಿಗೆ ಯಾವ ರೀತಿ ಹನಿ ಟ್ರ್ಯಾಪ್ ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಹೀಗೆ ಮಾಡಿ 100ಕ್ಕೂ ಹೆಚ್ಚು ಮಂದಿಗೆ ದಿವ್ಯಾ ಗ್ಯಾಂಗ್ ಹಣ ಸುಲಿಗೆ ಮಾಡಿತ್ತು. ಹನಿ ಟ್ರ್ಯಾಪ್ ಮಾಡುವುದು, ಸಿಕ್ಕಿ ಬಿದ್ದವರನ್ನು ಹೆದರಿಸಿ, ತಮ್ಮ ಅಕೌಂಟ್‌ಗೆ ಲಕ್ಷ ಲಕ್ಷ ಟ್ರಾನ್ಸಫರ್ ಮಾಡಿಸಿಕೊಳ್ಳುವುದು ದಿವ್ಯಾ ಗ್ಯಾಂಗ್ ಕೆಲಸವಾಗಿತ್ತು.
ಆದರೆ ದಿವ್ಯಾ ಗ್ಯಾಂಗ್ ನಸೀಬು ಹಾಳಾಗಿತ್ತು. ಹೀಗಾಗಿ ದಿವ್ಯಾ ಗ್ಯಾಂಗ್ ಓರ್ವ ಉತ್ತರಭಾರತದ ಹುಡುಗಿಯನ್ನು ಇಂದಿರಾನಗರದಲ್ಲಿರುವ ಸ್ಪಾ ಒಂದಕ್ಕೆ ಕೆಲಸ ಕೇಳಿಕೊಂಡು ಹೋಗೆಂದು ಕಳಿಸಿದ್ದಾರೆ. ಬಳಿಕ ಆ ಹುಡುಗಿ ಅಲ್ಲಿ ಕೆಲಸಕ್ಕೆ ಸೇರಿದ ಬಳಿಕ, ತನ್ನ ತಮ್ಮ ಸಂದೇಶ್‌ನನ್ನು ಸ್ಪಾಗೆ ಕಳಿಸಲಾಗಿದೆ. ಸಂದೇಶ್, ಆ ಯುವತಿಯೊಂದಿಗೆ ಕೆಟ್ಟ ಕೆಟ್ಟ ಭಂಗಿಯಲ್ಲಿ ಪೋಸ್ ಕೊಟ್ಟು, ಫೋಟೋ, ವೀಡಿಯೋ ಮಾಡಿಕೊಂಡಿದ್ದಾನೆ. ಬಳಿಕ ಆಕೆಗೆ ದುಡ್ಡು ಕೊಟ್ಟು, ಕೆಲಸ ಬಿಡಲು ಹೇಳಿದ್ದಾರೆ.
Special Story: ಈ ದೇಶದಲ್ಲಿ ಬೆಕ್ಕುಗಳಿಗೂ ಕೊಡುತ್ತಾರೆ ಸರ್ಕಾರಿ ನೌಕರಿ
ಆ ಯುವತಿ ಕೆಲಸ ಬಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿದ್ದಾಳೆ. ಬಳಿಕ ಅಶ್ಲೀಲ ವೀಡಿಯೋ, ಫೋಟೋ ಇಟ್ಟುಕೊಂಡು ದಿವ್ಯಾ ಗ್ಯಾಂಗ್ ಸ್ಪಾ ಓನರ್‌ಗೆ ಧಮ್ಕಿ ಹಾಕಿದೆ. ಹಣಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ ಸ್ಪಾ ಮಾಲೀಕ ತಾನು ನಿಯತ್ತಾಗಿದ್ದೇನೆ. ತಾನೇಕೆ ಹೆದರಬೇಕೆಂದು, ಪೊಲೀಸರಿಗೆ ದೂರು ನೀಡಿದ್ದಾರೆ.
ಹನುಮಾನ್ ಚಾಲೀಸಾ ರಚಿಸಿದ್ದು ಯಾವ ಪರಿಸ್ಥಿತಿಯಲ್ಲಿ? ತುಳಸಿದಾಸರು ಜೈಲಿಗೆ ಹೋಗಲು ಕಾರಣವೇನು?
ಈ ಮೊದಲು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸಂದೇಶ್, ವೆಂಕಟೇಶ್‌ನನ್ನು ಅರೆಸ್ಟ್ ಮಾಡಿ, ಮೂರು ಮೊಬೈಲ್ ಜಪ್ತಿ ಮಾಡಲಾಗಿತ್ತು. ಇದೀಗ ಕೇರಳದಲ್ಲಿ ಜಾಲಿ ಮಾಡುತ್ತಿದ್ದ ದಿವ್ಯಾ ವಸಂತಾಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Discussion about this post