Fairy Tales: ದೇವ್. ವೃತ್ತಿಯಲ್ಲಿ ಇಂಜಿನಿಯರ್. ಬುದ್ಧಿವಂತನಾಗಿದ್ದ ದೇವ್‌ಗೆ ಆಸ್ಟ್ರೇಲಿಯಾದಲ್ಲಿ ಲಕ್ಷ ಲಕ್ಷ ಸಂಬಳಕ್ಕೆ ಒಳ್ಳೆಯ ಕೆಲಸವಿತ್ತು. ಈ ಕೆಲಸ ಸಿಕ್ಕಿದ ಮೇಲೆ, ಸುಂದರವಾದ, ವಿದ್ಯಾವಂತೆಯೂ ಆಗಿದ್ದ ನಿಧಿ ಜೊತೆ ದೇವ್ ಮದುವೆಯೂ ಆಯ್ತು. ಇಬ್ಬರೂ ಆಸ್ಟ್ರೇಲಿಯಾದಲ್ಲಿ ಸಂಸಾರ ಶುರು ಮಾಡಿದ್ರು, 5 ವರ್ಷದಲ್ಲೇ ಎರಡು ಮಕ್ಕಳೂ ಆದ್ರು.
ಹೀಗೆ ರಿಟೈರ್‌ಮೆಂಟ್ ಆಗುವಷ್ಟು ವರ್ಷ ದೇವ್ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿ, ಕೊನೆಗೆ ಭಾರತಕ್ಕೆ ಬಂದು ಸೆಟಲ್ ಆಗುವ ನಿರ್ಧಾರ ಮಾಡಿದ್ದ. ರಿಟೈರ್‌ಮೆಂಟ್ ಆಯಿತು. ದೇವ್ ಕೂಡ ತನ್ನ ಕುಟುಂಬದೊಂದಿಗೆ ಭಾರತಕ್ಕೆ ಬಂದಿಳಿದ.
ಬೆಂಗಳೂರಿಗೆ ಬಂದು ಒಂದು ಚೆಂದದ ಮನೆ ಖರೀದಿಸಿ, ಆ ಮನೆಯಲ್ಲೇ ಅವನ ಕುಟುಂಬ ವಾಸವಿತ್ತು. ಮೊದಲ ಮಗನಿಗೆ ಮದುವೆಯಾಗಿ ಒಂದು ಮಗುವೂ ಆಗಿತ್ತು. ಪತಿ ಪತ್ನಿ ಇಬ್ಬರೂ ಬೆಂಗಳೂರಿನಲ್ಲೇ ಕೆಲಸಕ್ಕೆ ಸೇರಿದ್ದರು. ಮಗಳು ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದ್ದಳು. ಮಗ-ಸೊಸೆ, ಮಗಳು- ಅಳಿಯ ಎಲ್ಲರೂ ಬೆಂಗಳೂರಿನಲ್ಲೇ ಇದ್ದ ಕಾರಣ, ದೇವ್ ಮತ್ತು ನಿಧಿ ತಮ್ಮ ಇಬ್ಬರೂ ಮಕ್ಕಳು, ಮೊಮ್ಮಕ್ಕಳ ಜೊತೆ ಆಗಾಗ ಸಮಯ ಕಳೆಯುತ್ತಿದ್ದರು.
Web News: ವಿಚಿತ್ರ ರೀತಿಯಲ್ಲಿ ವಿಚಿತ್ರ ವಸ್ತುವಿನೊಂದಿಗೆ ವಿವಾಹವಾದ ವಿದೇಶಿಗರು
ಒಮ್ಮೆ ಎಲ್ಲರೂ ಸೇರಿ ವಿಕೇಂಡ್‌ನಲ್ಲಿ ಸಂಬಂಧಿಕರ ಫಾರ್ಮ್ ಹೌಸ್‌ಗೆ ಹೋಗಬೇಕು ಎಂದು ನಿರ್ಧರಿಸಿದ್ದರು. ಅಲ್ಲಿ, ಉಳಿದ ಸಂಬಂಧಿಕರು ಬರಲಿದ್ದರು. ಮತ್ತು ಅವರೆಲ್ಲ ಸೇರಿ, ನಾಲ್ಕೈದು ದಿನ ಫಾರ್ಮ್ ಹೌಸ್‌ನಲ್ಲಿ ಇದ್ದು, ಎಂಜಾಯ್ ಮಾಡಬೇಕು ಅಂತಾ ನಿರ್ಧಾರವೂ ಮಾಡಿದ್ದರು. ಎಲ್ಲರೂ ಸೇರಿ, ಮಂಗಳೂರು ಬಳಿ ಇದ್ದ ಒಂದು ಫಾರ್ಮ್‌ಹೌಸ್‌ಗೆ ಹೋದರು.
ಎಲ್ಲ ಸಂಬಂಧಿಕರು ಒಟ್ಟಾಗಿ, ಆ ದಿನವನ್ನು ಖುಷಿ ಖುಷಿಯಾಗಿ ಕಳೆದರು. ಮಂಗಳೂರಿನಲ್ಲಿ ಸೆಖೆ ಹೆಚ್ಚಾಗಿರುವ ಕಾರಣಕ್ಕೆ, ದೇವ್ ಅಂದು ಫಾರ್ಮ್‌ಹೌಸ್‌ನ ಟೆರೆಸ್ ಮೇಲೆ ಹೋಗಿ ನಿದ್ದೆ ಮಾಡಬೇಕು ಅಂತಾ ಅಂದುಕೊಂಡು, ಟೆರೆಸ್‌ಗೆ ಹೋದ. ಅಲ್ಲೇ ಇದ್ದ ಕೆಲಸದಾಳು ಸೊಂಟ ಹಿಡಿದು, ನಡೆಯಲು ಕಷ್ಟಪಡುವ ರೀತಿ ಬಂದು, ನೀವು ಈ ಫಾರ್ಮ್‌ಹೌಸ್‌ನ ಯಾವ ಕೋಣೆಯಲ್ಲಾದರೂ ಮಲಗಿ. ಆದರೆ ಫಾರ್ಮ್‌ಹೌಸ್ ಹೊರಗೆ ಬರಬೇಡಿ. ಈ ಟೆರೆಸ್ ಮೇಲಂತೂ ಮಲಗಲೇಬೇಡಿ ಅಂತಾ ಹೇಳಿದ.
ಯಾಕೆ ನಾನಿಲ್ಲಿ ಮಲಗಬಾರದು ಅಂತಾ ದೇವ್ ಪ್ರಶ್ನಿಸಿದ. ಅದಕ್ಕೆ ಉತ್ತರಿಸಿದ ಆಳು, ಇಲ್ಲಿ ಮಲಗಿದವರಿಗೆ ಕೆಟ್ಟ ಅನುಭವವಾಗಿದೆ. ಮತ್ತು ಆ ಅನುಭವವನ್ನು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ. ಬೇರೆಯವರ್ಯಾಕೆ.. ಸ್ವತಃ ನಾನೇ ಇಲ್ಲಿ ಮಲಗಿ ಕೆಟ್ಟ ಅನುಭವ ಪಡೆದಿದ್ದೇನೆ. ನನ್ನನ್ನು ಇಲ್ಲಿಂದ ಯಾರೋ, ಎತ್ತಿ ಬಿಸಾಕಿದ ಹಾಗೆ ಆಗಿತ್ತು. ಅಂದಿನಿಂದ ನಾನು ಈ ರೀತಿ ಸೊಂಟ ಹಿಡಿದು, ಡೊಂಕು ಡೊಂಕಾಗಿ ನಡೆಯುವಂತಾಗಿದೆ. ಇಲ್ಲದಿದ್ದರೆ ನಾನು ಎಲ್ಲರ ಹಾಗೆ, ಚೆನ್ನಾಗಿ ನಡೆದಾಡಿಕೊಂಡಿದ್ದೆ. ನನ್ನ ಹಾಗೆ ಬೇರೆ ಯಾರಿಗೂ ಆಗಬಾರದು ಅಂತಾ ನಾನು ಎಲ್ಲರಿಗೂ ಎಚ್ಚರಿಕೆ ಕೊಡುತ್ತೇನೆ ಎನ್ನುತ್ತಾನೆ.
Tech News: ಸ್ಕ್ಯಾಮ್‌ಗೆ ಬಲಿಯಾಗಿ ದುಡ್ಡು ಕಳೆದುಕೊಳ್ಳುವ ಮುನ್ನ ಈ ವಿಚಾರ ತಿಳಿದುಕೊಳ್ಳಿ
ದೇವ್‌ಗೆ ಅವನ ಮಾತಿನಿಂದ ಯಾವ ವ್ಯತ್ಯಾಸವೂ ಆಗಲಿಲ್ಲ. ಎಲ್ಲಿ ದುಡ್ಡು ಹೊಡೆಯಲು ಅವಕಾಶ ಸಿಗುತ್ತೋ ಅಂತಾ ನೋಡ್ತಿರ್ತಾರೆ. ಕುಡಿಯಲು ಹಣ ಬೇಕಾದಾಗ, ಈ ರೀತಿ ಹೆದರಿಸೋದೆ ಇಂಥವರ ಕೆಲಸ ಎಂದು, ಋಣಾತ್ಮಕವಾಗಿ ಯೋಚಿಸಿ, ನಾನು ಮಲಗಿದರೆ ಇಲ್ಲೇ ಮಲಗುವುದು. ಅದೇನಾಗತ್ತೋ ನೋಡೇ ಬಿಡೋಣ ಅಂತಾ ಅಂದು ರಾತ್ರಿ ದೇವ್ ಟೆರೆಸ್ ಮೇಲೆ ಮಲಗಿದ್ದ.
ಅಂದು ರಾತ್ರಿ ಯಾವುದರ ಪರಿವೇ ಇಲ್ಲದಂತೆ ದೇವ್ ಟೆರೆಸ್ ಮೇಲೆ ಗಡದ್ದಾಗಿ ನಿದ್ದೆ ಮಾಡಿದ್ದ. ಕಣ್ಣು ಬಿಡುವಾಗ ಬೆಳಗಾಗಿತ್ತು. ಗಾರ್ಡನ್‌ನಲ್ಲಿ ಮಕ್ಕಳು ಆಟವಾಡುವ ಸದ್ದು ಕೇಳಿತ್ತು. ನಿನ್ನೆ ರಾತ್ರಿ ಆಳು ಬಂದು ಇಲ್ಲಿ ಮಲಗಬೇಡಿ ಅಂತಾ ಹೇಳಿದ್ದು ನೆನಪಾಗಿ ನಗುವೂ ಬಂದಿತ್ತು. ಎಂಥ ಮೂಢರಿರುತ್ತಾರೆ. ಇಲ್ಲಿಗೆ ಬಂದವರಿಗೆಲ್ಲ ಕಟ್ಟು ಕಥೆಗಳನ್ನು ಹೇಳಿ, ಹೆದರಿಸುತ್ತಾರೆ. ಅವನು ಹೆದರಿಸಿದಂತೆ ಹೆದರೋಕ್ಕೆ ನಾನೇನು ಬೇರೆಯವರ ಹಾಗೆ ಪುಕ್ಕಲನಾ..? ಅಂತಾ ಮನಸ್ಸಲ್ಲೇ ಎಣಿಸುತ್ತಾನೆ ದೇವ್.
ಆದರೆ ಸಡನ್ನಾಗಿ ದಿಂಬಿನ ಬಳಿ ನೋಡಿದಾಗ, ಒಂದು ಚೀಟಿ ಕಾಣಿಸುತ್ತದೆ. ಆ ಚೀಟಿ ತೆಗೆದು ನೋಡಿದಾಗ, ಇದು ನನ್ನ ಜಾಗ. ಈ ಜಾಗ ಬಿಟ್ಟು ಹೋಗು. ಇದೆ ಕೊನೆ, ಇನ್ನು ನೀನಿಲ್ಲಿ ಮಲಗಿದರೆ, ನಿನ್ನನ್ನು ಎಳೆದು ಬಿಸಾಡಿ, ನಿನ್ನ ಸೊಂಟ ಮುರಿಯಬೇಕಾಗುತ್ತದೆ. ಇದು ನನ್ನ ಕೊನೆಯ ಎಚ್ಚರಿಕೆ ಎಂದು ಬರೆದಿರುತ್ತದೆ.
ಕೂದಲಿನ ಆರೈಕೆ ಈ ರೀತಿ ಮಾಡಿದ್ದಲ್ಲಿ ಖಂಡಿತವಾಗಿಯೂ ದಟ್ಟವಾದ ಕೂದಲು ನಿಮ್ಮದಾಗುತ್ತದೆ
ಆದರೆ ಚೀಟಿಯಲ್ಲಿ ಬರೆದಿದ್ದನ್ನು ನೋಡಿ ಹೆದರುವ ಬದಲು, ದೇವ್ ನಗಲು ಪ್ರಾರಂಭಿಸಿದ್ದ. ಈ ಆಳಿಗೆ ಬರೆಯಲೂ ಬರುತ್ತದೆ. ಈ ರೀತಿ ಬರೆದಿಟ್ಟು, ಹೊಸ ರೀತಿಯಾಗಿ ಬೆದರಿಸಲು ಪ್ರಯತ್ನಿಸುತ್ತಿದ್ದಾನೆ. ಪಾಪದ ಪ್ರಾಣಿ. ಇವತ್ತು ಅವನಿಗೆ ಒಂದಿಪ್ಪತ್ತು ರೂಪಾಯಿ ಕೊಟ್ಟು ಕಳುಹಿಸಬೇಕು. ಇಲ್ಲದಿದ್ದರೆ, ಕುಡಿಯಲು ದುಡ್ಡಿಲ್ಲದೇ, ಇನ್ನೇನೇನು ಕಥೆ ಕಟ್ಟುತ್ತಾನೋ ಎಂದು ಮನಸಲ್ಲೇ ಎಣಿಸಿ, ದೇವ್ ಮುಂದಿನ ಕೆಲಸಕ್ಕೆ ಹೋಗುತ್ತಾನೆ.
ಎಲ್ಲರೂ ಸ್ನಾನ ಮುಗಿಸಿ, ಮಂಗಳೂರಿನಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಾರೆ. ಸಂಜೆ ಸುಸ್ತಾಗಿ ಬಂದ ಬಳಿಕ, ಫ್ರೆಶಪ್ ಆಗಿ, ಸ್ನ್ಯಾಕ್ಸ್ ತಿಂದು, ಮ್ಯೂಸಿಕ್ ಹಾಕಿ ಒಂದಿಷ್ಟು ಡಾನ್ಸ್ ಮಾಡುತ್ತಾರೆ. ಎಲ್ಲರೂ ಟ್ರಿಪ್, ಡಾನ್ಸ್ ಅಂತಾ ಸಮಯ ಕಳೆದು ಸುಸ್ತಾಗಿ, ರಾತ್ರಿ ಊಟ ಮಾಡಿ, ತಮ್ಮ ತಮ್ಮ ಜಾಗಕ್ಕೆ ಹೋಗಿ ಮಲಗುತ್ತಾರೆ. ದೇವ್ ಮತ್ತೆ ಮರುದಿನ ಟೆರೆಸ್‌ಗೆ ಬಂದು ಮಲಗುತ್ತಾನೆ.
ಆಗಲೂ ಕೂಡ ಆಳು ಬಂದು, ನಿನ್ನೆನೇ ಹೇಳಿದ್ನಲ್ವಾ ಸರ್, ಇಲ್ಲಿ ಮಲಗಬೇಡಿ ಅಂತಾ. ಮತ್ತೆ ಇಲ್ಲೇ ಬಂದು ಮಲಗುತ್ತಿದ್ದೀರಲ್ಲಾ.. ಒಳಗೆ ಹೋಗಿ ಮಲಗಿ ಹೋಗಿ ಅಂತಾ ಹೇಳುತ್ತಾನೆ. ಓಹ್ ನೀನು ಮತ್ತೆ ಬಂದ್ಯಾ. ನಿನ್ನ ಹತ್ರಾ ಕುಡಿಯೋಕ್ಕೆ ದುಡ್ಡಿಲ್ಲಾ ಅಂದ್ರೆ ಹೇಳು, ಇಲ್ಲಿಂದ ಹೋಗೋ ತನಕಾನೂ ನಿನಗೆ ದುಡ್ಡು ಕೊಡ್ತೀನಿ. ಆದರೆ ರಾತ್ರಿ ಹೊತ್ತು ಬಂದು, ಈ ರೀತಿ ಕಥೆ ಕಟ್ಟಿ, ನನ್ನನ್ನು ಹೆದರಿಸುವ ಪ್ರಯತ್ನ ಮಾತ್ರ ಮಾಡಬೇಡ. ಯಾಕಂದ್ರೆ ಇಂಥ ಕಥೆಗಳಿಗೆಲ್ಲ ಹೆದರುವ ಮಗನೇ ಅಲ್ಲ ನಾನು ಅಂತಾ ಹೇಳ್ತಾನೆ ದೇವ್.
ಓಹ್ ಇದ್ದದ್ದನ್ನು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ರಂತೆ ಅಂದಂಗಾಯ್ತು ಸ್ವಾಮಿ ನಿಮ್ಮ ಮಾತು. ದುಡ್ಡಿನ ಮದ ನಿಮ್ಮ ನೆತ್ತಿಗೆ ಏರಿರೋ ಹಾಗಿದೆ. ಏನೋ.. ನನಗೆ ಬಂದ ಪರಿಸ್ಥಿತಿ ನಿಮಗೆ ಬರದೇ ಇರಲಿ ಅಂತಾ ಎಚ್ಚರಿಕೆ ಕೊಟ್ಟೆ ಅಷ್ಟೇ. ಉಳಿದಿದ್ದು ನಿಮ್ಮಿಷ್ಟ. ಹಾ ಇನ್ನೊಂದು ವಿಷಯ. ನಾನು ಇಡೀ ಜನ್ಮದಲ್ಲೇ ಯಾವತ್ತೂ ಕುಡಿದವನಲ್ಲ ಅಂತಾ ಹೇಳಿ ಆಳು ಅಲ್ಲಿಂದ ಹೊರಡುತ್ತಾನೆ.
Chanakya Neeti: ಇಂಥ ತಂದೆ ತಾಯಂದಿರೇ ಮಕ್ಕಳ ಶತ್ರುಗಳಾಗುತ್ತಾರೆ. ಕಥೆ ಸಮೇತ ಚಾಣಕ್ಯ ನೀತಿ ಸಾರಾಂಶ
ದೇವ್ ಅವನ ಮಾತನ್ನು ಕಡೆಗಣಿಸಿ, ಟೆರೆಸ್ ಮೇಲೆ ಚಂದ್ರ,, ನಕ್ಷತ್ರಗಳನ್ನು ನೋಡುತ್ತ ನಿದ್ರೆಗೆ ಜಾರುತ್ತಾನೆ. ಮಧ್ಯರಾತ್ರಿಯ ಹೊತ್ತಿಗೆ ಯಾರೋ ಬಂದು, ದೇವ್ ಮಲಗಿದ್ದ ಜಾಗವನ್ನೇ ಅಲುಗಾಡಿಸಿದಂತಾಯಿತು. ಭೂಕಂಪನದ ಅನುಭವವಾಗಿ ದೇವ್‌ಗೆ ಎಚ್ಚರಾಯಿತು. ಅಕ್ಕ ಪಕ್ಕ ನೋಡಿದರೆ ಯಾರೂ ಇರಲಿಲ್ಲ. ಆ ಆಳಿನ ಮಾತಿನಿಂದ ನನಗೆ ಭ್ರಮೆ ಉಂಟಾಗಿರಬೇಕು ಎಂದು, ಮತ್ತೆ ಎಲ್ಲವನ್ನೂ ಮರೆತು ದೇವ್ ನಿದ್ದೆ ಮಾಡುತ್ತಾನೆ.
ಆದರೆ ನಿದ್ದೆ ಬರಬೇಕು ಎನ್ನುವಷ್ಟರಲ್ಲಿ, ನಿನ್ನೆ ತನಗೆ ದಿಂಬಿನ ಕೆಳಗೆ ಚೀಟಿಯೊಂದು ಸಿಕ್ಕಿತ್ತು. ಇವತ್ತು ಯಾವುದಾದರೂ ಚೀಟಿ ಇದೆಯಾ ಅಂತಾ ದಿಂಬಿನ ಕೆಳಗೆ ನೋಡಿದರೆ, ಇವತ್ತೂ ಒಂದು ಚೀಟಿ ಇದೆ. ಆ ಚೀಟಿಯಲ್ಲಿ ಕೆಂಪು ಬಣ್ಣದಲ್ಲಿ ನಿನ್ನೆಯ ಎಚ್ಚರಿಕೆಯನ್ನೇ ಪುನಃ ಬರೆಯಲಾಗಿತ್ತು. ಇದನ್ನು ನೋಡಿದ ದೇವ್, ಖಂಡಿತ ಇದು ಆ ಆಳಿನ ಕೆಲಸವೇ. ನಾಳೆ ಅವನಿಗೊಂದು ಗತಿ ಕಾಣಿಸುತ್ತೇನೆ ಎಂದು ಹೇಳಿ, ನಿದ್ದೆ ಮಾಡುತ್ತಾನೆ.
ಆದರೆ ದೇವ್‌ಗೆ ನಿದ್ದೆ ತಾಕಿದ ಅರ್ಧಗಂಟೆಯೊಳಗೆ, ಹಾಸಿಗೆ ಸಮೇತ ಆ ಸ್ಥಳದಿಂದ ಯಾರೋ, ಅವರನ್ನು ಎಸೆದಂತಾಯಿತು. ಕಣ್ಣು ಬಿಟ್ಟು ನೋಡಿದಾಗ, ದೇವ್ ಆಸ್ಪತ್ರೆಯ ಬೆಡ್‌ನಲ್ಲಿ ಸೊಂಟ ಮುರಿದುಕೊಂಡು ಬಿದ್ದಿದ್ದ. ಅಕ್ಕ ಪಕ್ಕದಲ್ಲಿ ನಿಧಿ ಮತ್ತು ಮಕ್ಕಳು, ಮೊಮ್ಮಕ್ಕಳು ಅಳುತ್ತ ನಿಂತಿದ್ದರು. ಇದನ್ನು ಕಂಡು ದಂಗಾಗಿದ್ದ ದೇವ್, ಇದೇನಾಯಿತು. ನಾನೇಕೆ ಆಸ್ಪತ್ರೆಯಲ್ಲಿದ್ದೇನೆ. ಹೀಗೆ ಹಲವು ಪ್ರಶ್ನೆಗಳನ್ನೇ ಕೇಳಿದ್ದ.
Recipe: ಬೇಗ ಬೇಗ ಮಾಡಬಹುದಾದ ಪಾಲಕ್ ದೋಸೆ ರೆಸಿಪಿ
ಆಗ ಅಳುತ್ತ ನಿಧಿ ಉತ್ತರಿಸಿದ್ದಳು. ನಾವು ಒಂದು ವಾರದ ಹಿಂದೆ ಮಂಗಳೂರಿನ ಫಾರ್ಮ್‌ಹೌಸ್‌ಗೆ ಹೋಗಿದ್ದೆವು. ಅಲ್ಲಿ ನೀವು ಟೆರೆಸ್ ಮೇಲೆ ಮಲಗ್ಗಿದ್ದೀರಿ. ಆದರೆ ಮಧ್ಯರಾತ್ರಿಯ ಹೊತ್ತು. ಟೆರೆಸ್‌ನಿಂದ ಏನೋ ಬಿದ್ದಂಥ ಸದ್ದು ಬಂತು. ಏನೆಂದು ನೋಡಿದಾಗ, ನೀವು ಟೆರೆಸ್‌ನಿಂದ ಹಾರಿ, ಕೆಳಗೆ ಬಿದ್ದಿದ್ದಿರಿ. ಆ ತಕ್ಷಣವೇ ನಿಮ್ಮನ್ನು ಆಸ್ಪತ್ರೆ ಸೇರಿಸಲಾಯಿತು.
ಆದರೆ ಚಿಕಿತ್ಸೆ ಕೊಟ್ಟಿದ್ದ ವೈದ್ಯರು, ನೀವು ಇನ್ನೂ ಒಂದು ವಾರ ಕೋಮಾದಲ್ಲಿ ಇರಲಿದ್ದೀರಿ. ಅಲ್ಲದೇ, ಇನ್ನು ನೀವು ಕೂರಲು., ನಡೆದಾಡಲು ಕೂಡ ಸಾಧ್ಯವಿಲ್ಲ. ಇನ್ನು ನಿಮ್ಮ ಜೀವನ ಏನಿದ್ದರೂ, ಹಾಸಿಗೆ ಮೇಲೆಯೇ ಎಂದಿದ್ದಾರೆ. ಅಷ್ಟು ಖುಷಿಯಾಗಿದ್ದ ನೀವು ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆಯ ನಿರ್ಧಾರ ಮಾಡಿದ್ದೇಕೆ..? ನಿಮಗೇನು ಕಡಿಮೆಯಾಗಿತ್ತು ಎಂದು ಪ್ರಶ್ನಿಸಿದ್ದಳು ನಿಧಿ.
ಆಗ ತಾನೇ ಕೋಮಾಗೆ ಹೋಗಿ ಬಂದಿದ್ದ ದೇವ್‌ಗೆ ಅಂದು ಆಳು ಕೊಟ್ಟಿದ್ದ ಎಚ್ಚರಿಕೆ ನೆನಪಾಯಿತು. ಅವನು ಹೇಳಿದಂತೆ ನಾನು ಫಾರ್ಮ್‌ಹೌಸ್‌ನ ಒಳಗೆ ಹೋಗಿ ಮಲಗಿದ್ದರೆ, ನಾನು ಚೆನ್ನಾಗಿರುತ್ತಿದ್ದೆ. ದುರಹಂಕಾರ ತೋರಿಸಿ, ಬಾಯಿಗೆ ಬಂದ ಹಾಗೆ ಮಾತನಾಡಿ, ಈ ಪರಿಸ್ಥಿತಿ ತಂದುಕೊಂಡೆ ಎಂದು ಮನಸ್ಸಿನೊಳಗೆ ಮರುಗುತ್ತಾನೆ.
ಡಿಸ್ಚಾರ್ಜ್ ಆಗಿ ಮನೆಗೆ ಹೋಗಿ, ಹಲವು ತಿಂಗಳಾದ ಬಳಿಕ, ಮಗನ ಬಳಿ ಆ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆಳಿನ ನಂಬರ್ ಪಡೆಯಲು ಹೇಳಿದ್ದ ದೇವ್. ಅಪ್ಪನ ಮಾತಿನಂತೆ ಮಗ, ನಂಬರ್ ಪಡೆದು, ಅಪ್ಪನ ಮೊಬೈಲ್‌ನಲ್ಲಿ ನಂಬರ್ ಸೇವ್ ಮಾಡಿದ್ದ. ಕಾಲ್ ಮಾಡಿ, ಆ ಫಾರ್ಮ್‌ಹೌಸ್‌ನ ಟೆರೆಸ್ ಮೇಲೆ ಅಂಥದ್ದೇನಿದೆ..? ಏನು ವಿಷಯವೆಂದು ದೇವ್ ಕೇಳಿದಾಗ, ಆ ಆಳು ದಂಗಾಗುವ ವಿಷಯ ಹೇಳಿದ್ದ.
ಆ ಆಳಿನ ಹೆಸರು ವೆಂಕಪ್ಪ. ಡಿವೋರ್ಸಿಯಾಗಿದ್ದ ಯೋಗಿ ಫಾರ್ಮ್‌ಹೌಸ್ ಬಿಟ್ಟು ಹೋದಾಗಿನಿಂದ ಆ ಮನೆಯನ್ನು, ತೋಟವನ್ನು ನೋಡಿಕೊಳ್ಳುತ್ತಿದ್ದವನೇ ವೆಂಕಪ್ಪ. ವಾರಕ್ಕೊಮ್ಮೆ ಯೋಗಿ ಬಂದು, ಆ ಮನೆಯಲ್ಲಿ ಇದ್ದು, ವೆಂಕಪ್ಪನಿಗೆ ವಾರದ ಸಂಬಳ ಕೊಟ್ಟು ಹೋಗುತ್ತಿದ್ದ.
ಹಾಗೆ ವಾರಕ್ಕೊಮ್ಮೆ ಬರುತ್ತಿದ್ದ ಯೋಗಿ, ಬರುವಾಗ ವಾರಕ್ಕೊಂದು ಹೊಸ ಹೊಸ ಹೆಣ್ಣು ಮಕ್ಕಳನ್ನು ಫಾರ್ಮ್‌ಹೌಸ್‌ಗೆ ಕರೆದುಕೊಂಡು ಬರುತ್ತಿದ್ದ. ಅವರೊಂದಿಗೆ 2 ದಿನ ಕಳೆದು, ಹಣ ನೀಡಿ, ಕಳುಹಿಸುತ್ತಿದ್ದ. ಒಂದು ದಿನ ತನ್ನ ಗೆಳೆಯರೊಂದಿಗೆ ಫಾರ್ಮ್‌ಹೌಸ್‌ಗೆ ಬಂದಿದ್ದ ಯೋಗಿ, ಆ ರಾತ್ರಿ ಡ್ರಿಂಕ್ಸ್ ಪಾರ್ಟಿ ಮಾಡಿದ್ದ. ಕುಡಿದ ಮತ್ತಿನಲ್ಲಿದ್ದ ಯೋಗಿ ಮತ್ತವನ ಗೆಳೆಯರಿಗೆ ತಮ್ಮ ಲೈಂಗಿಕ ದಾಹ ತೀರಿಸಿಕೊಳ್ಳಲು ಹೆಣ್ಣೊಬ್ಬಳು ಬೇಕಾಗಿತ್ತು.
ಕಾಲ್ ಮಾಡಿ, ಫಾರ್ಮ್‌ಹೌಸ್‌ಗೆ ಕಾಲ್ ಗರ್ಲ್ ಕರೆಯಿಸಿಕೊಂಡಿದ್ದರು. ಫಾರ್ಮ್ ಹೌಸ್‌ನ ಟೆರೆಸ್ ಮೇಲೆ ಒಬ್ಬಳೇ ವೇಶ್ಯೆಯನ್ನು ನಾಲ್ಕೈದು ಮಂದಿ ಹರಿದು ತಿಂದಿದ್ದರು. ಕೊನೆಗೆ ಆಕೆಯನ್ನು ಕೊಂದು ಮುಗಿಸಿದ್ದರು. ಈಕೆಯ ಹೆಣವನ್ನು ಎಲ್ಲಾದರೂ ಬಿಸಾಕಬೇಕು ಎಂದು, ತಮ್ಮ ಕಾರಿನಲ್ಲೇ ಹೆಣವನ್ನು ಸಾಗಿಸಿ, ನದಿಗೆ ಎಸೆದಿದ್ದರು. ನಾಲ್ಕು ತಿಂಗಳ ಬಳಿಕ, ಈ ಕೇಸ್ ಬಗ್ಗೆ ಗೊತ್ತಾಗಿ, ವೇಶ್ಯೆ ಕೊಲೆ ಕೇಸ್‌ನಲ್ಲಿ ಯೋಗಿ ಮತ್ತವನ ಗೆಳೆಯರು ಜೈಲು ಸೇರಿದ್ದರು. ಕೊನೆಗೆ ಯೋಗಿ ಸಂಬಂಧಿಕರ ಮೂಲಕ ಈ ಫಾರ್ಮ್‌ಹೌಸ್‌ನ್ನು ಸೇಲ್ ಮಾಡಿಬಿಟ್ಟ. ಹಾಗೆ ಸೇಲ್ ಆದ ಫಾರ್ಮ್‌ಹೌಸ್‌ನ್ನು ಖರೀದಿಸಿದ್ದು, ದೇವ್ ಭಾವನ ಮಗ ಪವನ್.
ಪವನ್ ಫಾರ್ಮ್‌ಹೌಸ್‌ಗೆ ಬರುವ ಮುನ್ನ ಸಿಂಪಲ್ ಆಗಿ ತಾನೇ ಪೂಜೆ ಮಾಡಿದ್ದ. ಮನೆಯವರಷ್ಟೇ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಹೋಮ ಹವನವೇನೂ ಆಗಿರಲಿಲ್ಲ. ಕಾರಣ, ಅಲ್ಲಿದ್ದ ವೇಶ್ಯೆಯ ಆತ್ಮ, ಹೋಮ ಹವನ ಮಾಡಲು ಬಿಟ್ಟೇ ಇರಲಿಲ್ಲ. ಆ ಮನೆಯಲ್ಲಿ ಹೋಮ, ಹವನ, ದೊಡ್ಡ ಪೂಜೆ ನಡೆಸುವ ತಯಾರಿಯಾದಾಗೆಲ್ಲ, ಏನಾದರೂ ತೊಂದರೆಯಾಗಿ, ಪೂಜೆ ನಿಲ್ಲುವ ಹಾಗೆ ಮಾಡುತ್ತಿತ್ತು ಆ ವೇಶ್ಯೆಯ ಆತ್ಮ.
ಆ ಮನೆಗೆ ಯಾರೇ ಬಂದರೂ ಅವರಿಗೇನೂ ತೊಂದರೆಯಾಗಬಾರದು ಎಂದು ವೆಂಕಪ್ಪನೇ ಮಂತ್ರವಾದಿಯಿಂದ ಮಂತ್ರಿಸಿದ ವಸ್ತುವನ್ನು ತಂದು ಮನೆಯೊಳಗಿಟ್ಟಿದ್ದ. ಹಾಗಾಗಿ ಇದುವರೆಗೂ ಯಾರಿಗೂ ಆ ಮನೆಯಲ್ಲಿ ಯಾವುದೇ ಜೀವ ಹಾನಿಯಾಗಲಿಲ್ಲ. ಆದರೆ ಟೆರೆಸ್ ಮೇಲೆ ಮಾತ್ರ ರಾತ್ರಿ ಹೊತ್ತು ಯಾರೂ ಬರಲು ಆ ಆತ್ಮ ಬಿಡುತ್ತಿರಲಿಲ್ಲ. ವೆಂಕಪ್ಪನೇ ಭಂಡ ಧೈರ್ಯ ಮಾಡಿ, ಮಂತ್ರವಾದಿ ಹತ್ತಿರ ಹೋಗಿ ಬಂದೆನೆಂದು ಅಹಂಕಾರ ಮಾಡಿ, ಟೆರೆಸ್ ಮೇಲೆ ಮಲಗಲು ಹೋಗಿದ್ದ. ದೇವ್‌ಗೆ ಎಚ್ಚರಿಕೆ ಕೊಟ್ಟಂತೆ ಆ ಆತ್ಮ ವೆಂಕಪ್ಪಂಗೂ ಎಚ್ಚರಿಕೆ ಕೊಟ್ಟಿತ್ತು. ಆದರೂ ಭಂಡ ಧೈರ್ಯ ಮಾಡಿದ್ದಕ್ಕೆ, ವೆಂಕಪ್ಪನ ಸೊಂಟವನ್ನೇ ಮುರಿದು ಹಾಕಿತ್ತು. ಅಂದಿನಿಂದ ವೆಂಕಪ್ಪ ರಾತ್ರಿ ಹೊತ್ತು ಯಾರನ್ನೂ ಟೆರೆಸ್ ಬಳಿ ಹೋಗಲು ಬಿಡುತ್ತಿರಲಿಲ್ಲ. ಆದರೆ ದೇವ್ ಮಾತ್ರ ಅಹಂಕಾರದಿಂದ ವೆಂಕಪ್ಪನ ಮಾತು ಮೀರಿ, ಪರಮ್ನೆಂಟ್ ಆಗಿ ಹಾಸಿಗೆ ಹಿಡಿದಿದ್ದ.
Discussion about this post