ನವದೆಹಲಿ: ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬಾರತ ತಂಡದ ನಾಯಕತ್ವದಿಂದ ಬಿಡುವಾಗಿರುವ ಖ್ಯಾತ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಕೊಂಡಾಡಿದ್ದಾರೆ.
‘ಸ್ಟಾರ್ ಸ್ಪೋರ್ಟ್ಸ್’ ಟಿವಿ ಸಂವಾದದಲ್ಲಿ ಮಾತನಾಡಿದ ಅವರು, ನಾಯಕತ್ವದಿಂದ ಬಿಡುಗಡೆಗೊಂಡು ನಿರಾಳರಾಗಿರುವ ಕಿಂಗ್ ಕೊಹ್ಲಿ ಬ್ಯಾಟಿಂಗ್ ಇನ್ನು ಮುಂದೆ ನಿಗದಿತ ಓವರ್‌ಗಳ ಪಂದ್ಯಗಳಲ್ಲಿ ಮತ್ತಷ್ಟು ಅಪಾಯಕಾರಿಯಾಗಬಲ್ಲದು. ನಾಯಕತ್ವದ ಹೊರೆ ಹೆಗಲಿನಿಂದ ಇಳಿಸಿರುವುದು ಬ್ಯಾಟಿಂಗ್ ಮೇಲೆ ಇನ್ನಷ್ಟು ಗಮನ ಕೇಂದ್ರೀಕರಿಸಲು ಕೊಹ್ಲಿ ಅವರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
‘ಕೊಹ್ಲಿ ಕ್ಯಾಪ್ಟನ್ ಆಗಿರಲಿ ಅಥವಾ ಇಲ್ಲದಿರಲಿ, ಅವರಿಂದ ಅತ್ಯುತ್ತಮ ಬ್ಯಾಟಿಂಗ್ ನಿರೀಕ್ಷಿಸಬಹುದು’ ಎಂದೂ ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: ನಿನ್ನಿಂದಲೇ ನನ್ನ ಜೀವನ ಪರಿಪೂರ್ಣ: 4ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭ ಅನುಷ್ಕಾ ಬಗ್ಗೆ ವಿರಾಟ್ ಮೆಚ್ಚುಗೆ
ವಿರಾಟ್ ಕೊಹ್ಲಿ ಈ ಹಿಂದೆ ಶತಕ ಬಾರಿಸಿದ್ದು 2019ರಲ್ಲಿ. ಆ ಬಳಿಕ ಅವರಿಂದ ಅಷ್ಟೇನೂ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಸದ್ಯ ಫಾರ್ಮ್‌ನಲ್ಲಿಲ್ಲದೆ ಸಂಕಷ್ಟದಲ್ಲಿರುವ ಕೊಹ್ಲಿ, ಯುಎಇಯಲ್ಲಿ ನಡೆದ ಐಸಿಸಿ ಟ್ವೆಂಟಿ–20 ವಿಶ್ವಕಪ್ ಬಳಿಕ ತಂಡದ ನಾಯಕತ್ವ ತೊರೆದಿದ್ದರು. ಹೀಗಾಗಿ ಏಕದಿನ ಕ್ರಿಕೆಟ್ ನಾಯಕತ್ವದಿಂದಲೂ ಅವರನ್ನು ತೆರವುಗೊಳಿಸಿದ್ದ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿದೆ. ಸದ್ಯ ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಮಾತ್ರ ಕೊಹ್ಲಿ ತಂಡದ ನಾಯಕರಾಗಿದ್ದಾರೆ.
ನಾಯಕತ್ವದಿಂದ ತೆರವು ಮಾಡಿದರೆಂಬ ಕಾರಣಕ್ಕೆ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವಂಥ ಪ್ರಶ್ನೆಯೇ ಎದುರಾಗದು. ಅವರೊಬ್ಬ ಅತ್ಯುತ್ತಮ ಹಾಗೂ ತಂಡದ ಹೆಮ್ಮೆಯ ಆಟಗಾರ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ತಂಡ ಆಯ್ಕೆ ಮಾಡುವಾಗ ಕೊಹ್ಲಿ ಮಾತಿಗೆ ನೀಡಿರಲಿಲ್ಲ ಮನ್ನಣೆ: ರವಿ ಶಾಸ್ತ್ರಿ
Discussion about this post