ಮುಂಬೈ: ಟೆಸ್ಟ್ ಸರಣಿ ಆಡುವುದಕ್ಕಾಗಿ ಟೀಂ ಇಂಡಿಯಾ ಗುರುವಾರ ಬೆಳಿಗ್ಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತು. ಮುಂಬೈ ವಿಮಾನ ನಿಲ್ದಾಣದಿಂದ ಟೀಂ ಇಂಡಿಯಾ ಆಫ್ರಿಕಾ ಪ್ರವಾಸಕ್ಕೆ ತೆರಳಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದೆ.
ಟೆಸ್ಟ್ ಸರಣಿ ಡಿಸೆಂಬರ್ 26ರಿಂದ ಆಂರಭಗೊಳ್ಳಲಿದ್ದು, ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ. ಆ ಬಳಿಕ ಮೂರು ಏಕ ದಿನ ಪಂದ್ಯಳು ನಡೆಯಲಿವೆ.
ಓದಿ: ನನ್ನ ಮತ್ತು ರೋಹಿತ್ ಶರ್ಮಾ ನಡುವೆ ಯಾವುದೇ ಮನಸ್ತಾಪ ಇಲ್ಲ: ವಿರಾಟ್ ಕೊಹ್ಲಿ
ಚೇತೇಶ್ವರ್ ಪೂಜಾರ, ಜಸ್ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್ ಹಾಗೂ ಮಯಂಕ್ ಅಗರ್ವಾಲ್ ವಿಮಾನದಲ್ಲಿ ಕುಳಿತಿರುವ ಚಿತ್ರವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಟೆಸ್ಟ್ ತಂಡದ ಮಾಜಿ ಉಪ ನಾಐಕ ಅಜಿಂಕ್ಯ ರಹಾನೆ ಹಾಗೂ ಉಮೇಶ್ ಯಾದವ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆಫ್ರಿಕಾ ವಿರುದ್ಧ ಮೂರು ಪಂದ್ಯಗಳನ್ನು ಆಡಲಿದೆ. ರೋಹಿತ್ ಶರ್ಮಾ ಅವರು ಮಂಡಿರಜ್ಜು ನೋವಿನ ಕಾರಣ ಸರಣಿಯಲ್ಲಿ ಆಡುತ್ತಿಲ್ಲ. ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಅವರೂ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ.
ಓದಿ: ಏಕದಿನ ನಾಯಕತ್ವದಿಂದ ತೆರವುಗೊಳಿಸುವ ಒಂದೂವರೆ ಗಂಟೆ ಮುನ್ನವಷ್ಟೇ ಬಿಸಿಸಿಐಯಿಂದ ಮಾಹಿತಿ: ವಿರಾಟ್ ಕೊಹ್ಲಿ
Discussion about this post