ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು ಸೋಲಿನ ಸುಳಿಯಲ್ಲಿ ಸಿಲುಕಿದೆ.
ಮೂರನೇ ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದ ಭಾರತ ತಂಡವು 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, 540 ರನ್‌ಗಳ ಬೃಹತ್ ಗುರಿ ನೀಡಿದೆ.
ಬೃಹತ್ ಮೊತ್ತ ಬೆನ್ನಟ್ಟುತ್ತಿರುವ ಪ್ರವಾಸಿ ತಂಡವು ದಿನದ ಆಟದ ಕೊನೆಯಲ್ಲಿ 5 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದೆ. ಇನ್ನೆರಡು ದಿನಗಳ ಆಟ ಬಾಕಿ ಇದ್ದು ನ್ಯೂಜಿಲೆಂಡ್ ಗೆಲ್ಲಬೇಕಿದ್ದರೆ ಉಳಿದ 5 ವಿಕೆಟ್‌ನಲ್ಲಿ 400 ರನ್ ಗಳಿಸಬೇಕಿದೆ. ಅಥವಾ ಎರಡೂ ದಿನ ಬ್ಯಾಟಿಂಗ್ ಮಾಡಿ ಡ್ರಾ ಮಾಡಿಕೊಳ್ಳಬೇಕಿದೆ. ಇತ್ತ ಟೀಂ ಇಂಡಿಯಾಗೆ ಪಂದ್ಯ ಗೆಲ್ಲಲು ಉಳಿದ 5 ವಿಕೆಟ್ ಕಿತ್ತರೆ ಸಾಕು.
ಇದನ್ನೂ ಓದಿ: ND vs NZ Test: ಎಜಾಜ್ 10 ವಿಕೆಟ್ ಸಾಧನೆ ಬಳಿಕ ಮಂಕಾದ ನ್ಯೂಜಿಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ 62ಕ್ಕೆ ಆಲೌಟ್
ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್: ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲೂ ಅದೇ ಲಯವನ್ನು ಕಾಪಾಡಿಕೊಂಡಿತ್ತು. ಆರಂಭಿಕ ಆಟಗಾರ ಮಯಂಕ್ ಅಗರ್ವಾಲ್ ಅರ್ಧಶತಕ (62), ಪೂಜಾರ (47), ಶುಭಮನ್ ಗಿಲ್ (47), ಅಕ್ಷರ್ ಪಟೇಲ್ ಔಟಾಗದೆ 41 ರನ್ ನೆರವಿನಿಂದ ನ್ಯೂಜಿಲೆಂಡ್‌ಗೆ ಬೃಹತ್ ಗುರಿ ನೀಡುವುದು ಭಾರತಕ್ಕೆ ಸಾಧ್ಯವಾಯಿತು.
ಮತ್ತೆ ಮುಗ್ಗರಿಸಿದ ನ್ಯೂಜಿಲೆಂಡ್: ಭಾರತವು ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿರುವ ನ್ಯೂಜಿಲೆಂಡ್ ಮತ್ತೆ ಮುಗ್ಗರಿಸಿದೆ. ಡ್ಯಾರಿಲ್ ಮಿಷೆಲ್ ಅರ್ಧಶತಕ (60) ಬಿಟ್ಟರೆ ಹೇಳಿಕೊಳ್ಳುವಂಥ ಬ್ಯಾಟಿಂಗ್ ಯಾವೊಬ್ಬ ಆಟಗಾರನಿಂದಲೂ ಮೂಡಿಬರಲಿಲ್ಲ. ವಿಲ್ ಯಂಗ್ 20 ಹಾಗೂ ಹೆನ್ರಿ ನಿಕೋಲಸ್ ಔಟಾಗದೆ 36 ರನ್ ಗಳಿಸಿರುವುದೇ ಉಳಿದ ಬ್ಯಾಟರ್‌ಗಳ ಪೈಕಿ ಹೆಚ್ಚು ರನ್ ಗಳಿಸಿದ ಸಾಧನೆಯಾಗಿದೆ.
ಮಿಂಚಿದ ಅಶ್ವಿನ್: ಸ್ಪಿನ್ ಮೋಡಿ ಮಾಡಿದ ಆರ್.ಅಶ್ವಿನ್ ಆರಂಭಿಕ ಆಟಗಾರರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸುವ ಮೂಲಕ ನ್ಯೂಜಿಲೆಂಡ್‌ಗೆ ಪಂದ್ಯದಲ್ಲಿ ಸುಧಾರಿಸುವ ಅವಕಾಶವನ್ನೇ ನೀಡಲಿಲ್ಲ. ಅಶ್ವಿನ್ 3 ವಿಕೆಟ್ ಕಿತ್ತರೆ ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು. ಟಾಮ್ ಬ್ಲಂಡೆಲ್‌ರನ್ನು ಭರತ್ ಮತ್ತು ಸಹಾ ರನೌಟ್ ಬಲೆಗೆ ಕಡವಿದರು.
ಸದ್ಯ ಹೆನ್ರಿ ನಿಕೋಲಸ್ (36*) ಮತ್ತು ರಚಿನ್ ರವೀಂದ್ರ (2*) ಕ್ರೀಸ್‌ನಲ್ಲಿದ್ದಾರೆ.
ಇನ್ನಷ್ಟು ಓದು…
10 wickets: 10 ವಿಕೆಟ್ ಪಡೆದ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್
ಒಮಿಕ್ರಾನ್ ಭೀತಿ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ ಟೀಂ ಇಂಡಿಯಾ: ಸಿಎಸ್‌ಎ
IND vs NZ Test: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ – ರಹಾನೆ, ಜಡೇಜಾ, ಇಶಾಂತ್ ಅಲಭ್ಯ
IPL 2022: ಆರ್‌ಸಿಬಿ ತಂಡದ ಹಿತಾಸಕ್ತಿಗಾಗಿ ವೇತನ ಕಡಿತ ಮಾಡಿಕೊಂಡ ವಿರಾಟ್ ಕೊಹ್ಲಿ!
IPL 2022: ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿತ್ತು ಎಂದ ರೋಹಿತ್ ಶರ್ಮಾ! ಯಾರು ಆ ಆಟಗಾರರು?
IPL 2022: ಕನ್ನಡಿಗ ರಾಹುಲ್ ಕೈಬಿಟ್ಟ ಪಂಜಾಬ್, ಪಾಂಡ್ಯಗಿಲ್ಲ ಮುಂಬೈ ಪರ ಆಡುವ ಅವಕಾಶ
IPL 2022: ಪಂಜಾಬ್ ಕಿಂಗ್ಸ್‌ನಿಂದ ರಾಹುಲ್ ಕೈಬಿಟ್ಟದ್ದಕ್ಕೆ ಅನಿಲ್ ಕುಂಬ್ಳೆ ಕೊಟ್ಟ ಕಾರಣವಿದು…
Discussion about this post