ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ತಂಡದ ಸಿದ್ಧತೆ ಕುರಿತು ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ.
ಮುಂದಿನ ಮೂರು ದಿನಗಳ ಕಾಲ ಗುಣಮಟ್ಟದ ತರಬೇತಿ ತಂಡಕ್ಕೆ ಅಗತ್ಯವಾಗಿದ್ದು, ಇದು ಅತಿ ಮುಖ್ಯವೆನಿಸಲಿದೆ. ಎಲ್ಲ ಆಟಗಾರರೂ ಕಠಿಣ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ: ಮಗಳು ವಮಿಕಾ ಫೋಟೊ ಪ್ರಕಟಿಸದ ಮಾಧ್ಯಮಗಳಿಗೆ ಅನುಷ್ಕಾ ಶರ್ಮಾ ಧನ್ಯವಾದ
ಇದೇ ವೇಳೆ, ನಾಯಕ ವಿರಾಟ್ ಕೊಹ್ಲಿ ಅವರಿಗೂ ದ್ರಾವಿಡ್ ಸಲಹೆ ನೀಡುತ್ತಿರುವ ದೃಶ್ಯ ಕಂಡುಬಂತು.
ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸವು ಮೂರು ಪಂದ್ಯಗಳ ಟೆಸ್ಟ್ ಸರಣಿ, ಏಕದಿನ ಸರಣಿಯನ್ನು ಒಳಗೊಂಡಿದೆ. ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ.
Getting Test-match ready 👌 👌
🎥 Snippets from #TeamIndia‘s first practice session ahead of the first #SAvIND Test. pic.twitter.com/QkrdgqP959
— BCCI (@BCCI) December 19, 2021
Discussion about this post