ಸೆಂಚುರಿಯನ್: ವೇಗದ ಬೌಲಿಂಗ್‌ಗೆ ನೆರವಾಗುವಂಥ ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಈಗಿನ ಟೀಂ ಇಂಡಿಯಾಕ್ಕೆ ಇದೆ ಎಂದು ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ವಿದೇಶಗಳಲ್ಲಿ ಯಶಸ್ಸು ಸಾಧಿಸಿರುವುದು ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: IPL 2022: ಬೆಂಗಳೂರಿನಲ್ಲಿ ಮೆಗಾ ಹರಾಜು ಸಾಧ್ಯತೆ
ಪ್ರವಾಸಿ ತಂಡವಾಗಿ ವಿದೇಶಗಳಲ್ಲಿ ಭಾರತದ ಬ್ಯಾಟರ್‌ಗಳಿಗೆ ವೇಗದ ಬೌಲಿಂಗ್, ಬೌನ್ಸ್‌ಗಳು ಹಾಗೂ ವೇಗದ ಬೌಲರ್‌ಗಳನ್ನು ಎದುರಿಸುವುದು ದೊಡ್ಡ ಸವಾಲಾಗಿರುತ್ತದೆ. ಈ ತಂಡವು ಅವುಗಳನ್ನು ಕಲಿತುಕೊಂಡಿದೆ. ಈಗಿರುವ ಸಮತೋಲಿತ ಬ್ಯಾಟಿಂಗ್ ವಿಭಾಗವು ಪರಿಸ್ಥಿತಿಯನ್ನು ನಿಭಾಯಿಸಬಲ್ಲದು. ಈಗ ನಾವು ಮಾಡಿಕೊಂಡಿರುವ ಸಿದ್ಧತೆಯು ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿರುವ ವಿಡಿಯೊವನ್ನು ಬಿಸಿಸಿಐ ಟ್ವೀಟ್ ಮಾಡಿದೆ.
Team confidence ✅
Personal preparation ✅
South Africa challenge ✅@cheteshwar1 covers all bases in this interview with https://t.co/Z3MPyesSeZFull interview 🎥 🔽 #TeamIndia #SAvIND https://t.co/7ML9NJkYRu pic.twitter.com/7xhLiyJJcA
— BCCI (@BCCI) December 23, 2021
Discussion about this post