ದುಬೈ: ಬಾಲಿವುಡ್ ನಟಿಯರಾದ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ದುಬೈಯಲ್ಲಿ ರಜಾ ದಿನಗಳ ಗಮ್ಮತ್ತಿನಲ್ಲಿರುವ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೀಗ ಜಾಕ್ವೆಲಿನ್ ಫರ್ನಾಂಡೀಸ್ ಸರದಿ.
ದುಬೈ ಬೀಚ್‌ನಲ್ಲಿ ಈಜುಡುಗೆ ಧರಿಸಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಫರ್ನಾಂಡೀಸ್ ಅವರು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ‘ಪೂಲ್ ಬೇಬಿ’ ಎಂಬ ಕ್ಯಾಪ್ಷನ್‌ನೊಂದಿಗೆ ಜಾಕ್ವೆಲಿನ್ ಪೋಸ್ಟ್ ಮಾಡಿರುವ ಫೋಟೊಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
7 ಲಕ್ಷಕ್ಕೂ ಹೆಚ್ಚು ಮಂದಿಗೆ ಫೋಟೊವನ್ನು ಲೈಕ್ ಮಾಡಿದ್ದಾರೆ. 6000ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಹ್ಯಾಪಿ ಬರ್ತಡೇಗೆ ಉಗ್ರಾವತಾರ ತಳೆದಿದ್ದರು!
2006ರಲ್ಲಿ ಮಿಸ್ ಶ್ರೀಲಂಕಾ ಆಗಿ ಆಯ್ಕೆಯಾಗಿದ್ದ ಜಾಕ್ವೆಲಿನ್ 2009ರಲ್ಲಿ ಬಾಲಿವುಡ್ ಪ್ರವೇಶಿಸಿದ್ದರು. ಬಳಿಕ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
View this post on Instagram
























Discussion about this post