ಮುಂಬೈ: ಕ್ಯಾನ್ಸರ್ ಪೀಡಿತರಿಗೆ ನೆರವಾಗುವುದಕ್ಕಾಗಿ ಕೂದಲು ದಾನ ಮಾಡುವ ಮೂಲಕ ಬಾಲಿವುಡ್ ನಟಿ ಮಾಧುರಿ ದೀಕ್ಷಿರ್ ಅವರ ಸಣ್ಣ ಪುತ್ರ ರೇಯಾನ್ ಗಮನ ಸೆಳದಿದ್ದಾನೆ.
ಇಂದಿನ ದಿನವನ್ನು (ನವೆಂಬರ್ 7) ‘ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ’ವನ್ನಾಗಿ ಪರಿಗಣಿಸಲಾಗಿದೆ. ಇದೇ ಸಂದರ್ಭದಲ್ಲಿ ರೇಯಾನ್ ಕೂದಲು ದಾನ ಮಾಡಿದ್ದಾನೆ.
ಈ ಕುರಿತು ಮಾಧುರಿ ದೀಕ್ಷಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಮಗ ಉದ್ದವಾಗಿ ಕೂದಲು ಬಿಟ್ಟಿರುವುದು ಹಾಗೂ ಅದನ್ನು ಸಲೂನಿನಲ್ಲಿ ಕತ್ತರಿಸುತ್ತಿರುವ ವಿಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ.
ಓದಿ: ದಿನಕ್ಕೆ 30 ಸಾವಿರ ಜನ ಪುನೀತ್ ಸ್ಮಾರಕಕ್ಕೆ ಭೇಟಿ
ಮಗನನ್ನು ‘ಹೀರೋ’ ಎಂದು ಬಣ್ಣಿಸಿರುವ ಅವರು, ಕ್ಯಾನ್ಸರ್‌ಗಾಗಿ ಕಿಮೋ ಥೆರಪಿಗೆ ಒಳಗಾಗುತ್ತಿರುವ ಹಲವಾರು ಜನರನ್ನು ನೋಡಿ ರೇಯಾನ್ ಬೇಸರಪಟ್ಟುಕೊಂಡಿದ್ದ. ಕ್ಯಾನ್ಸರ್ ರೋಗಿಗಳು ಇತರ ಎಲ್ಲ ಸಂಕಷ್ಟಗಳ ಜತೆಗೆ ಕೂದಲನ್ನೂ ಕಳೆದುಕೊಳ್ಳುತ್ತಾರೆ. ಇದಕ್ಕಾಗಿ ರೇಯಾನ್ ಕ್ಯಾನ್ಸರ್ ಸೊಸೈಟಿಗೆ ಕೂದಲು ದಾನ ಮಾಡಿದ್ದಾನೆ. ಆತನ ಈ ನಿರ್ಧಾರದಿಂದ ಪೋಷಕರಾದ ನಮಗೆ ರೋಮಾಂಚನವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇಷ್ಟುದ್ದ ಕೂದಲು ಬೆಳೆಸುವುದಕ್ಕೆ ಅವನಿಗೆ 2 ವರ್ಷಗಳು ಬೇಕಾದವು ಎಂದೂ ಅವರು ಹೇಳಿದ್ದಾರೆ.
View this post on Instagram
























Discussion about this post