ಚಿಕ್ಕಮಗಳೂರು: ದಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಚಿಕ್ಕಮಗಳೂರು ವತಿಯಿಂದ ನವೆಂಬರ್ ೧೩ ಮತ್ತು ೧೪ ರಂದು ರ್ಯಾಲಿ ಆಫ್ ಚಿಕ್ಕಮಗಳೂರು ಹೆಸರಿನಲ್ಲಿ ರಾಷ್ಟ್ರಮಟ್ಟದ ಟಿಎಸ್ಡಿ ರ್ಯಾಲಿ ಆಯೋಜಿಸಲಾಗಿದೆ ಎಂದು ದಿ ಮೋಟಾರ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಜಯಂತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ ೧೩ರಂದು ೩:೦೦ ಗಂಟೆಗೆ ಸಿರಿ ನೇಚರ್ ರೂಟ್ಸ್ ನಿಂದ ರ್ಯಾಲಿಗೆ ಚಾಲನೆ ದೊರೆಯಲಿದೆ. ಸಂಜೆ ೭.೩೦ ಕ್ಕೆ ಮೂಡಿಗೆರೆಯ ಡಿ.ಕಾಫಿ ಕೋರ್ಟ್ ತಲುಪಲಿದೆ. ಭೋಜನ ವಿರಾಮದ ನಂತರ ೮:೩೦ ಕ್ಕೆ ಪುನಃ ಪ್ರಾರಂಭವಾಗಿ ರಾತ್ರಿ ಹತ್ತು ಮೂವತ್ತಕ್ಕೆ ಚಿಕ್ಕಮಗಳೂರು ತಲುಪಲಿದೆ ಎಂದರು.
ಈ ರ್ಯಾಲಿಯು ಮುಖ್ಯವಾಗಿ ನ್ಯಾವಿಗೇಶನ್ ಮತ್ತು ಲೆಕ್ಕಚಾರಿಕವಾಗಿರುವುದು. ಟೈಪ್ ಸ್ಪೀಡ್ ಡಿಸ್ಟೆನ್ಸ್ ಫಾರ್ಮೆಟ್ನಲ್ಲಿ ನಡೆಯುವುದು. ರ್ಯಾಲಿಯನ್ನು ಲೆಗ್ ೧ ರಂದು ೧೮೦ ಕಿ. ಮೀ. ಮತ್ತು ಲೆಗ್ ೨ ರಂದು ೬೦ ಕಿಮೀ. ಸೇರಿದಂತೆ ಒಟ್ಟು ೨೪೦ ಕಿಲೋಮೀಟರ್ ರ್ಯಾಲಿ ಇದಾಗಿದೆ. ರ್ಯಾಲಿಯಲ್ಲಿ ಗೌಪ್ಯ ಚೆಕ್ ಪಾಯಿಂಟ್ಗಳನ್ನು ಅಳವಡಿಸಿರುವುದರಿಂದ ರ್ಯಾಲಿಯ ಮಾರ್ಗವನ್ನು ಬಹಿರಂಗಪಡಿಸಲಾಗಿಲ್ಲ. ಇದರಲ್ಲಿ ಪ್ರೊ ಎಕ್ಸ್ಪರ್ಟ್ ವಿಭಾಗ, ಪ್ರೋ ಸ್ಟಾಕ್ ವಿಭಾಗ, ಕಪಲ್ ವಿಭಾಗ, ಕಾರ್ಪೊರೇಟ್ ವಿಭಾಗ, ನಾವೀಸ್ ವಿಭಾಗ, ಮಹಿಳಾ ವಿಭಾಗ ಸೇರಿದಂತೆ ಬೇರೆ ಬೇರೆ ವಿಭಾಗಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ನವೆಂಬರ್ ೧೪ರಂದು ರ್ಯಾಲಿಯ ಲೆಗ್ ೨ ಬೆಳಗ್ಗೆ ೭.೦೦ ಗಂಟೆಗೆ ಸಿರಿ ನೇಚರ್ ರೂಸ್ಟ್ ನಿಂದ ಪ್ರಾರಂಭವಾಗಿ ಬೆಳಗ್ಗೆ ೧೦.೩೦ ಕ್ಕೆ ಪೂರ್ಣಗೊಳ್ಳಲಿದೆ. ವಿಜೇತರುಗಳಿಗೆ ಟ್ರೋಫಿ ಜೊತೆಗೆ ೨.೫೦ ಲಕ್ಷ ಮೊತ್ತದ ನಗದು ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ದಿ ರ್ಯಾಲಿ ಆಫ್ ಚಿಕ್ಕಮಗಳೂರಿನಲ್ಲಿ ೪೦ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಮುಖ್ಯವಾಗಿ ಇರೋಡ್ನ ಕಾರ್ತಿಕ್ ಮಾರುತಿ, ಸಂತೋಷ್, ನಾಗರಾಜನ್, ವಿನೋದ್, ಪ್ರಕಾಶ್, ರವಿ, ಮಹಿಳಾ ವಿಭಾಗದಲ್ಲಿ ದೆಹಲಿಯ ಜಸ್ಮಿತ್ ಕೌರ್, ಮುಂಬೈನ ಸ್ನೇಹ ಸಬರ್ ವಾಲ್, ಜ್ಯೋತಿ ಅಯ್ಯಂಗಾರ್, ಲಲಿತ ಗೌಡ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಚಿಕ್ಕಮಗಳೂರು ಭಾಗದಲ್ಲಿ ಮಂಜು ಜೈನ್, ಪ್ರಜ್ವಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ರ್ಯಾಲಿಯ ಪ್ರಾಯೋಜಕತ್ವವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಸಹ ಪ್ರಾಯೋಜಕತ್ವವನ್ನು ಆರೆಂಜ್ ಅಡ್ವೆಂಚರ್ ಕ್ಲಬ್, ಸಿರಿ ನೇಚರ್ ರೂಸ್ಟ್ , ಡಿ ಕಾಫಿ ಕೋರ್ಟ್ ಮೂಡಿಗೆರೆ, ಪೈ ಕಮೋಡಿಟೀಸ್ ವಹಿಸಿಕೊಂಡಿದ್ದಾರೆ, ರ್ಯಾಲಿಯನ್ನು ಸುಸೂತ್ರವಾಗಿ ನಡೆಸಲು ಚಿಕ್ಕಮಗಳೂರು ಬುಲೆಟ್ ಕ್ಲಬ್ ವತಿಯಿಂದ ಮಾರ್ಕ್ ಸೆಲ್ಲಿಂಗ್ ವ್ಯವಸ್ಥೆ ಒದಗಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಡಿ ಮೋಟರ್ ಸ್ಪೋರ್ಟ್ಸ ಕ್ಲಬ್ ನ ಉಪಾಧ್ಯಕ್ಷ ಫಾರುಕ್ ಅಹಮದ್, ಜಂಟಿ ಕಾರ್ಯದರ್ಶಿ ಅಭಿಜಿತ್ ಪೈ, ಕಾರ್ಯಕ್ರಮ ಆಯೋಜಕ ದಿಲೀಪ್, ಸದಸ್ಯ ದಿವಿನ್ ಇದ್ದರು.
Paris Olympics: ಪ್ಯಾರಿಸ್ ಒಲಂಪಿಕ್ಸ್ಗೆ ಕಳುಹಿಸಲು ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ 75 ಕ್ರೀಡಾಪಟುಗಳ ಆಯ್ಕೆ
Discussion about this post