ಅಬುಧಾಬಿ: ಅಂತಾರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್ನಲ್ಲಿ ಅತಿ ವೇಗ 400 ವಿಕೆಟ್ ಗಳಿಸಿದ ಬೌಲರ್ ಎಂಬ ದಾಖಲೆಗೆ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಪಾತ್ರರಾದರು.
ಐಸಿಸಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಭಾನುವಾರದ ಪಂದ್ಯದಲ್ಲಿ ನ್ಯೂಜಿಲೆಂಡ್ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಅವರನ್ನು ಔಟ್ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದರು.
ಈ ಸಾಧನೆಗಾಗಿ ರಶೀದ್ ಖಾನ್ 289 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.
ಟ್ವೆಂಟಿ–20 ಮಾದರಿಯ ಕ್ರಿಕೆಟ್ನಲ್ಲಿ ಈವರೆಗೆ ಕೇವಲ ಮೂವರು ಬೌಲರ್ಗಳು ಮಾತ್ರ 400 ವಿಕೆಟ್ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ನ ಡೇಯ್ನ್ ಬ್ರಾವೊ ಅವರು 364 ಪಂದ್ಯಗಳಲ್ಲಿ ಮೈಲಿಗಲ್ಲು ತಲುಪಿದ್ದರು. ಅವರು ಟ್ವೆಂಟಿ–20 ಮಾದರಿಯ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಮೊದಲ ಬೌಲರ್ ಕೂಡ ಹೌದು. 512 ಟ್ವೆಂಟಿ–20 ಪಂದ್ಯಗಳನ್ನು ಆಡಿ ಒಟ್ಟು 553 ವಿಕೆಟ್ ಪಡೆದಿರುವ ಬ್ರಾವೊ ಶನಿವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಉಳಿದಂತೆ ಇಮ್ರಾನ್ ತಾಹೀರ್ 320 ಪಂದ್ಯಗಳಲ್ಲಿ ಹಾಗೂ ಸುನಿಲ್ ನರೈನ್ 362 ಪಂದ್ಯಗಳಲ್ಲಿ 400 ವಿಕೆಟ್ ಮೈಲಿಗಲ್ಲು ತಲುಪಿದ್ದರು.
ಇನ್ನಷ್ಟು…
ICC T20 WC: ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ಗೆ ಭರ್ಜರಿ ಗೆಲುವು, ಭಾರತದ ಸೆಮಿಫೈನಲ್ ಕನಸು ಭಗ್ನ
ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ: ದೊಡ್ಡ ಗೌರವ ಎಂದ ‘ವಾಲ್’
Discussion about this post