ಭಾರತದ ಪ್ರಸಿದ್ಧ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರು ಕ್ರೀಡಾ ಕ್ಷೇತ್ರದಲ್ಲಿನ ಹೊಸ ಪ್ರತಿಭೆಗಳು, ಯುವತಿಯರಿಗೆ ನೀಡಿದ ಪ್ರೋತ್ಸಾಹ ಹಾಗೂ ಲಿಂಗ ಸಮಾನತೆ ಸಾಧಿಸಲು ಮಾಡಿದ ಹೋರಾಟಕ್ಕಾಗಿ ವಿಶ್ವ ಅಥ್ಲೆಟಿಕ್ಸ್ನ ‘ವರ್ಷದ ಮಹಿಳೆ’ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಈ ಪ್ರಶಸ್ತಿ ಘೋಷಣೆಯು ಅವರಿಗೆ ಹೆಮ್ಮೆ ತಂದಿದೆ ಎಂದು ಅಂಜು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
2003 ರ ವಿಶ್ವ ಚಾಂಪಿಯನ್ಶಿಪ್ನ ಲಾಂಗ್ ಜಂಪ್ನ ಕಂಚಿನ ಪದಕ ವಿಜೇತರಾದ ಅಂಜು ಬಾಬಿ ಜಾರ್ಜ್ ದೇಶದಲ್ಲಿ ನಿರಂತರವಾಗಿ ಬದಲಾವಣೆಯ ಧ್ವನಿಯಾಗಲು ಮತ್ತು ಯುವತಿಯರಿಗೆ ಅವರ ಕನಸುಗಳನ್ನು ಸಾಧಿಸಲು ಮಾರ್ಗದರ್ಶನ ನೀಡಿದ್ದಕ್ಕಾಗಿ ‘ವರ್ಷದ ಮಹಿಳೆ’ ಪ್ರಶಸ್ತಿಗೆ ಪ್ರಾಪ್ತವಾಗಿದ್ದಾರೆ.
“ವಿಶ್ವ ಅಥ್ಲೆಟಿಕ್ಸ್ ಪ್ರಶಸ್ತಿಗಳಲ್ಲಿ ಈ ವರ್ಷದ ಮಹಿಳೆ ಕಿರೀಟವನ್ನು ಅಲಂಕರಿಸಿದ ಅಂಜು ಬಾಬಿ ಜಾರ್ಜ್ ಅವರಿಗೆ ಅಭಿನಂದನೆಗಳು” ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.
“ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸುವಲ್ಲಿ ನಡೆಸಿದ ಪ್ರಯತ್ನಗಳು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸುವಲ್ಲಿ ಸಫಲರಾದ ಅಂಜು ಬಾಬಿ ಜಾರ್ಜ್ ಈ ವರ್ಷದ ಪ್ರಶಸ್ತಿ ಭಾಜನರಾಗಿದ್ದಾರೆ.” ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಬರೆದುಕೊಂಡಿದೆ.
Congratulations to @anjubobbygeorg1 on being crowned this year's Woman of the Year at the #WorldAthleticsAwards
Her efforts in advancing the sport in India as well as inspiring more women to follow in her footsteps make her more than a worthy recipient of this year's award. pic.twitter.com/5TSWxj4vqt
— World Athletics (@WorldAthletics) December 1, 2021
ಭಾರತದ ಮಾಜಿ ಅಂತರರಾಷ್ಟ್ರೀಯ ಲಾಂಗ್ ಜಂಪ್ ತಾರೆ ಇನ್ನೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016 ರಲ್ಲಿ, ಅಂಜು ಬಾಬಿ ಜಾರ್ಜ್ ಯುವತಿಯರಿಗಾಗಿ ತರಬೇತಿ ಅಕಾಡೆಮಿಯನ್ನು ತೆರೆದಿದ್ದು, ಇದು ಈಗಾಗಲೇ ವಿಶ್ವ U20 ಸ್ಪರ್ಧಾವಳಿಯ ಪದಕ ವಿಜೇತರಿಗೆ ತರಬೇತಿ ನೀಡಲು ಸಹಾಯ ಮಾಡಿತ್ತು. ಲಿಂಗ ಸಮಾನತೆಗಾಗಿ ನಿರಂತರ ಧ್ವನಿ ನೀಡಿದ ಅವರು ಕ್ರೀಡಾ ಕ್ಷೇತ್ರದಲ್ಲಿ ಶಾಲಾಮಕ್ಕಳಿಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಈ ಪ್ರಶಸ್ತಿಯನ್ನು ಅಂಜು ಬಾಬಿ ಜಾರ್ಜ್ ಅವರಿಗೆ ಘೋಷಿಸಿದೆ.
ಇದನ್ನೂ ಓದಿ:ಚಿನ್ನದ ಕುವರನಿಗೆ ಚಿನ್ನದ ಪಾಸ್ ಕೊಟ್ಟ ಕರುನಾಡಿನ ಕೆಎಸ್ ಆರ್ ಟಿಸಿ
(Anju Bobby George crowned this year Woman of the Year at the World Athletics Awards)
Discussion about this post