Movie News: ಸ್ಯಾಂಡಲ್ವುಡ್ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಲೈಫ್ನಲ್ಲಿ ಬಿರುಗಾಳಿ ಬೀಸಿದ್ದು, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗಿದೆ.
ವೃತ್ತಿ ಜೀವನದಲ್ಲಿ ಮುಂದುವರಿಯಬೇಕು ಎಂಬ ನಿರ್ಧಾರದಿಂದ ಇಬ್ಬರೂ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯಲು ಇಚ್ಛಿಸಿದ್ದು, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಬಿಗ್ಬಾಸ್ ಕನ್ನಡದಲ್ಲಿ ಪರಿಚಯವಾಗಿದ್ದ ಚಂದನ್ ಮತ್ತು ನಿವೇದಿತಾ ಮೊದ ಮೊದಲು ನಾವು ಅಣ್ಣ ತಂಗಿ ಎಂಬಂತಿದ್ದರು. ಆದರೆ, ಮೈಸೂರು ದಸರಾ ಸಮಯದಲ್ಲಿ ಚಂದನ್ ವೇದಿಕೆ ಮೇಲೆಯೇ ನಿವೇದಿತಾರನ್ನು ಪ್ರಪೋಸ್ ಮಾಡಿ, ವಿವಾದಕ್ಕೀಡಾಗಿದ್ದರು. ಬಳಿಕ ಇವರಿಬ್ಬರು ತಮ್ಮ ತಮ್ಮ ಸಂಪ್ರದಾಯದಂತೆ ವಿವಾಹವಾಗಿದ್ದರು.
ಕೆಲ ತಿಂಗಳ ಹಿಂದೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಅಪ್ಪ ಅಮ್ಮನಾಗುತ್ತಿದ್ದಾರೆಂದು ಹೇಳಲಾಗಿತ್ತು. ಆದರೆ ಕೆಲ ದಿನಗಳ ಬಳಿಕ ಅದು ಗಾಸಿಪ್ ಎಂದು ಎಲ್ಲರೂ ಸುಮ್ಮನಾಗಿದ್ದರು.
ನಿವೇದಿತಾ ಕೆಲ ದಿನಗಳಿಂದ ತುಂಬಾ ಬೋಲ್ಡ್ ಆಗಿ, ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುತ್ತಿದ್ದರು. ಅವರ ರೀಲ್ಸ್ ನೋಡಿದವರು, ಚಂದನ್ ಶೆಟ್ಟಿ ಮತ್ತು ಅವರ ಅಪ್ಪ ಅಮ್ಮ ಇದನ್ನು ಏಕೆ ವಿರೋಧಿಸುತ್ತಿಲ್ಲ. ಅದೆಷ್ಟು ಕೆಟ್ಟದಾಗಿ ಕಾಮೆಂಟ್ಸ್ ಬರುತ್ತಿದ್ದರೂ, ಅವರೇಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದರು.
ಇದೀಗ ಡಿವೋರ್ಸ್ ಸುದ್ದಿ ಹೊರಬಿದ್ದಿದ್ದು, ಇಷ್ಟು ದಿನ ಪತಿಯೊಂದಿಗೆ ರೀಲ್ಸ್ ಮಾಡುತ್ತಿದ್ದ ನಿವೇದಿತಾ ಯಾಕೆ ಒಬ್ಬರೇ ರೀಲ್ಸ್ ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಆದರೆ ಇದು ಸುಮ್ಮನೆ ಹಬ್ಬಿಸಲಾಾಗಿರುವ ಗಾಸಿಪ್ಪಾ..? ಅಥವಾ ನಿಜವಾಗಿಯೂ ಇವರಿಬ್ಬರೂ ಡಿವೋರ್ಸ್ ಪಡೆಯುತ್ತಿದ್ದಾರಾ ಅಂತಾ ಅವರ ಹೇಳಿಕೆ ಬಂದಮೇಲೆಯೇ ಗೊತ್ತಾಗಲಿದೆ.
ಆನ್ಲೈನ್ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
ಅಸಭ್ಯ ವರ್ತನೆಯಲ್ಲಿ ಸ್ತ್ರೀಯರು ಪುರುಷರನ್ನು ಮೀರಿಸುತ್ತಾರೆ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ
Discussion about this post