Uttar Pradesh: ಉತ್ತರ ಪ್ರದೇಶದ ಅಯೋಧ್ಯೆಯ ರಾಮಲಲ್ಲಾನ ದೇವಸ್ಥಾನದ ಆವರಣದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ರಾಮಮಂದಿರದ ಆವರಣದಲ್ಲಿ ಮೊಬೈಲ್ ಬಳಸುವಂತಿಲ್ಲವೆಂದು ದೇವಸ್ಥಾನದ ಟ್ರಸ್ಟಿ ಹೇಳಿದ್ದಾರೆ.
ಬರೀ ಸಾಮಾನ್ಯ ಭಕ್ತರಲ್ಲದೇ, ವಿಐಪಿ, ವಿವಿಐಪಿ ಭಕ್ತರು ಕೂಡ ರಾಮಮಂದಿರದ ಆವರಣದಲ್ಲಿ ಮೊಬೈಲ್ ಕೊಂಡೊಗಲು ನಿಷೇಧ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮದುವೆಯಾಗಬೇಕಾದವಳು ಹೋಗಿದ್ದು ಸಾವಿನ ಮನೆಗೆ: ಡಯಟ್ ಮಾಡುವವರು ಹುಷಾರ್
ಹಾಗಾದ್ರೆ ಮೊಬೈಲ್ ಎಲ್ಲಿಡಬೇಕು..?: ಹಾಗಾದ್ರೆ ನಾವು ತೆಗೆದುಕೊಂಡು ಹೋಗುವ ಮೊಬೈಲ್ ಎಲ್ಲಿಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ದೇವಸ್ಥಾನದ ಆಡಳಿತ ಮಂಡಳಿ ಅದಕ್ಕೂ ವ್ಯವಸ್ಥೆ ಮಾಡಿದೆ. ಮೊಬೈಲ್ ಭದ್ರವಾಗಿಡಲು ವ್ಯವಸ್ಥೆ ಮಾಡಿದ್ದು, ದೇವರ ದರ್ಶನದ ಬಳಿಕ, ನಿಮ್ಮ ಮೊಬೈಲ್ ನಿಮ್ಮ ಕೈಗೆ ಸಿಗುತ್ತದೆ.
ಬರೀ ಮೊಬೈಲ್ ಅಷ್ಟೇ ಅಲ್ಲದೇ, ದರ್ಶನಕ್ಕೆ ಬರುವ ಭಕ್ತರ ಬಳಿ ಬೆಲೆ ಬಾಳುವ ಬೇರೆ ಯಾವುದಾದರೂ ವಸ್ತು ಇದ್ದರೂ, ಭಕ್ತರಿಗಾಗಿ ಮಾಡಿರುವ ಲಾಕರ್‌ನಲ್ಲಿರಿಸಿ, ದರ್ಶನ ಮಾಡಿ ಬಂದು, ಆ ವಸ್ತುಗಳನ್ನು ತೆಗೆದುಕೊಳ್ಳಬಹುದು.
RCB ಸೋಲನ್ನು ಸಂಭ್ರಮಿಸಿದ ನಟಿ: ಮುಟ್ಟಿನೊಡಿಕೊಳ್ಳುವಂತೆ ರಿಪ್ಲೈ ಕೊಟ್ಟ ಆರ್‌ಸಿಬಿ ಫ್ಯಾನ್ಸ್
ಯಾಕೆ ಈ ನಿರ್ಧಾರ..?: ಭಕ್ತರು ರರಾಮಲಲ್ಲಾನ ದರ್ಶನ ಮಾಡುವಾಗ, ಬರೀ ಗೈಯ್ಯಲ್ಲಿ ಹೋದರೆ, ಅಂಥವರಿಗೆ ಬೇಗ ಬೇಗ ದರ್ಶನಕ್ಕೆ ಬಿಡಬಹುದು. ಇದರಿಂದ ಆಡಳಿತ ಮಂಡಳಿ ಮತ್ತು ಭಕ್ತರು ಇಬ್ಬರಿಗೂ ಉತ್ತಮವಾಗಿರುತ್ತದೆ. ಆದರೆ ಭಕ್ತರು ಕೈಯಲ್ಲಿ ಹೆಚ್ಚು ಬ್ಯಾಗ್, ವಸ್ತುಗಳನ್ನು ಹಿಡಿದು ಹೋದರೆ, ಅಂಥವರಿಗೆ ಲೇಟ್ ದರ್ಶನ ಮತ್ತು ಚೆಕಿಂಗ್ ಕೂಡ ಲೇಟಾಗಿ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಭಕ್ತರಿಗೂ ಆಡಳಿತ ಮಂಡಳಿ ಇಬ್ಬರಿಗೂ ಅನುಕೂಲವಾಗಲಿ ಎಂಬ ಕಾರಣಕ್ಕೆ, ಈ ನಿರ್ಧಾರ ಕೈಗೊಳ್ಳಲಾಗಿದೆ.
ತಾಯಿ ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲವೆಂದು 10 ವರ್ಷದ ಬಾಲಕಿ ಏನು ಮಾಡಿದ್ದಾಳೆ ನೋಡಿ
Discussion about this post