Business Story: ಡಿ ಮಾರ್ಟ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಮಾರ್ಟ್. ದಿನಸಿ ಮತ್ತು ಮನೆಗೆ ಬೇಕಾದ ಇತರೇ ವಸ್ತುಗಳನ್ನು ಕೊಂಡುಕೊಳ್ಳಲು ಇದು ಸೂಪರ್ ಪ್ಲೇಸ್. ಇಂದು ಎಷ್ಟೋ ಜನರು, ಡಿ ಮಾರ್ಟ್ ಬಂದಾಗಿಂದಾ ಸ್ವಲ್ಪಾನಾದ್ರೂ ಉಳಿತಾಯ ಮಾಡ್ತಾ ಇದೀನಿ ಅಂತಾ ಹೇಳುವವರೂ ಇದ್ದಾರೆ. ಮಕ್ಕಳಿಗೆ ಬೇಕಾದ ವಸ್ತುಗಳಿಂದ ಹಿಡಿದು, ವೃದ್ದರಿಗೂ ಏನೇನು ಬೇಕೋ, ಅದೆಲ್ಲವನ್ನೂ ಸೇಲ್ ಮಾಡುವ ಮಾರ್ಟ್ ಡಿ ಮಾರ್ಟ್.
ದಿನಸಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಪಾತ್ರೆ ಸಾಮಾನು ಹೀಗೆ ಒಂದು ಮನೆ ನಡೆಸೋಕ್ಕೆ ಏನೇನು ಬೇಕೋ, ಅದೆಲ್ಲವೂ ಡಿ ಮಾರ್ಟ್‌ನಲ್ಲಿ ಲಭ್ಯವಿದೆ. ನೀವು ಯಾವ ದಿನಾ ಬೇಕಾದ್ರೂ, ಡಿ ಮಾರ್ಟ್ ಗೆ ಹೋಗಿ, ಅಲ್ಲಿ ಜನ ಜಂಗುಳಿಯಿಂದ ತುಂಬಿರತ್ತೆ. ಯಾಕಂದ್ರೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಿನ ಬೆಲೆಗಿಂತ, ಇಲ್ಲಿನ ಬೆಲೆ ಕೊಂಚವಾದ್ರೂ ಕಡಿಮೆ ಇರತ್ತೆ.
ಮಧ್ಯರಾತ್ರಿ ತಂತಾನೆ ಓಪನ್ ಆದ ಆಫೀಸು ಬಾಗಿಲು.. ಆಮೇಲಾಗಿದ್ದೇನು..?: Video Viral
ಹಾಗಾದ್ರೆ ಇದರ ಓನರ್ ಯಾರು..? ಎಲ್ಲ ವಸ್ತುಗಳನ್ನ ಕಡಿಮೆ ಬೆಲೆಗೆ ಸೇಲ್, ಮಾಡಿ, ಆ ಓನರ್ ಲಾಭ ಹೇಗೆ ಮಾಡ್ತಾರೆ..? ಅಲ್ಲದೇ ಇವರು ನಮ್ಮ ದೇಶದ ಎರಡನೇ ಶ್ರೀಮಂತರೂ ಆಗಿದ್ದಾರೆ. ಅವರ ಬಗ್ಗೆ ಕಂಪ್ಲೀಟ್ ಸ್ಟೋರಿ ಹೇಳ್ತೀವಿ.
ರಾಧಾಕಿಶನ್ ದಮಾನಿ. ಇವರೇ ಡಿ ಮಾರ್ಟ್‌ನ ಓನರ್. 2009ರಲ್ಲಿ ಇಡೀ ದೇಶದಲ್ಲಿ ಬರೀ 25 ಡಿ ಮಾರ್ಟ್ ಸ್ಟೋರ್ಸ್ ಇತ್ತು. ಇದೀಗ ಇಡೀ ದೇಶದಲ್ಲಿ 200ಕ್ಕೂ ಹೆಚ್ಚು ಡಿ ಮಾರ್ಟ್ ಸ್ಟೋರ್ಸ್ ಓಪೆನ್ ಮಾಡಲಾಗಿದೆ. ಇನ್ನು ಕೋರೊನಾ ಸಮಯದಲ್ಲಿ ಹಲವು ದೊಡ್ಡ ದೊಡ್ಡ ಕಂಪೆನಿಗಳು, ಹೊಟೇಲ್‌ಗಳು, ಮಾಲ್‌ಗಳು ನಷ್ಟ ಕಂಡು ಬಾಗಿಲು ಮುಚ್ಚಿದ್ದವು. ಆದ್ರೆ ಒಂದೇ ಒಂದು ಡಿಮಾರ್ಟ್ ಸ್ಟೋರ್ ಕ್ಲೋಸ್ ಆಗಿಲ್ಲಾ.. ಇನ್ನೊಂದು ವಿಶೇಷ ವಿಚಾರ ಅಂದ್ರೆ ಕೊರೊನಾ ಸಮಯದಲ್ಲೇ ಡಿ ಮಾರ್ಟ್ ಹೆಚ್ಚು ಲಾಭ ಮಾಡಿದ್ದು. ತದನಂತರವೇ ಡಿ ಮಾರ್ಟ್ ಹೀಗೆ ಕುದುರೆ ಓಟ ಆರಂಭಿಸಿದ್ದು.
ಪತಿಗೆ ಟಾಟಾ ಬೈಬೈ ಹೇಳಿ ಸೊಸೆಯನ್ನೇ ವಿವಾಹವಾದ ಅತ್ತೆ: 3 ವರ್ಷದ ಲವ್ ಎಂದ ಜೋಡಿ
ಹಾಗಾದ್ರೆ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ಡಿ ಮಾರ್ಟ್ ಸಕ್ಸಸ್ ಆಗಿದ್ದಾದ್ರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ, ದಮಾನಿಯವರ ಬುದ್ಧಿವಂತಿಕೆ. ಹಾಗಾದ್ರೆ ರಾಧಾಕಿಶನ್ ದಮಾನಿ ಯಾರು..? ಅನ್ನೋ ಬಗ್ಗೆ ಫುಲ್ ಡಿಟೇಲ್ಸ್ ತಿಳಿಯೋಣ ಬನ್ನಿ.. ರಾಧಾಕಿಶನ್ ದಮಾನಿ, ಜನವರಿ 1, 1954ರಲ್ಲಿ ಮುಂಬೈಯ ಮಾರ್ವಾಡಿ ಪರಿವಾರದಲ್ಲಿ ಜನಿಸಿದ್ದರು. ಜನ್ಮತಃ ರಾಧಾಕಿಶನ್ ಶ್ರೀಮಂತನಲ್ಲದಿದ್ದರೂ, ಮಧ್ಯಮ ವರ್ಗದವರಾಗಿದ್ರು.
ರಾಧಾಕಿಶನ್ ಅಪ್ಪ ಸ್ಟಾಕ್ ಬ್ರೋಕರ್ ಆಗಿದ್ದ ಕಾರಣ, ಇವರಿಗೂ ಕಾಮರ್ಸ್ ತೆಗೆದುಕೊಳ್ಳಲು ಒತ್ತಾಯಿಸಲಾಯಿತು. ಮನೆಯವರ ಒತ್ತಾಯದ ಮೇರೆಗೆ ರಾಧಾಕಿಶನ್ ಕಾಮರ್ಸ್ ತೆಗೆದುಕೊಂಡು ಕಾಲೇಜು ಸೇರಿದರು. ಬಿಕಾಂ ಮೊದಲನೇ ವರ್ಷವೇ ದಮಾನಿ ಡ್ರಾಪೌಟ್ ಆದ್ರು. ಯಾಕಂದ್ರೆ ಅವರಿಗೆ ತಮ್ಮದೇ ಆದಂಥ ಬ್ಯುಸಿನೆಸ್ ಆರಂಭಿಸುವ ಮನಸ್ಸಿತ್ತು. ಬಾಲ್ ಬಿಯರಿಂಗ್ ಬ್ಯುಸಿನೆಸ್ ಮಾಡೋದ್ರಲ್ಲಿ, ದಮಾನಿ ಬ್ಯುಸಿ ಆದ್ರು. ಸಾಕಷ್ಟು ಶ್ರಮ ವಹಿಸಿದ್ರು. ಆದ್ರೆ ಇದರಲ್ಲಿ ಗೆಲುವು ಕಾಣುವ ಮುನ್ನವೇ ಸೋತರು. ಇದಕ್ಕೆ ಕಾರಣ ಅಪ್ಪನ ಮರಣ.
ನಾಭಿ (ಹೊಕ್ಕಳಿಗೆ) ಎಣ್ಣೆ ಹಾಕಿದ್ರೆ ಏನಾಗತ್ತೆ ಗೊತ್ತಾ..? Belly Button Oiling ಬಗ್ಗೆ ಕೇಳಿದ್ದೀರಾ?
ಅಪ್ಪನ ಮರಣದ ನಂತರ ದಮಾನಿಯ ಸಹೋದರ, ಕಿಶನ್ ನೀನು ಕೂಡಾ ಸ್ಟಾಕ್ ಬ್ರೋಕರ್ ಆಗು ಎಂದು ಸಲಹೆ ನೀಡಿದ್ರು. ಸಹೋದರನ ಮಾತಿನಂತೆ, ರಾಧಾಕಿಶನ್ ಸ್ಟಾಕ್ ಬ್ರೋಕರ್ ಆದ್ರು. ಆದ್ರೆ ಕೆಲಸದಲ್ಲಿ ಜಾಣರಾಗಿದ್ದ ಕಿಶನ್‌ಗೆ, ದುಡ್ಡು ಮಾಡ್ಬೇಕಂದ್ರೆ, ಸ್ಟಾಕ್ ಬ್ರೋಕರಿಂಗ್ ಅಲ್ಲಾ, ಬದಲಾಗಿ ಸ್ಟಾಕ್ ಟ್ರೇಡಿಂಗ್ ಮಾಡ್ಬೇಕು ಅಂತಾ ಗೊತ್ತಾಯ್ತು. ಇದೇ ವೇಳೆ ಶಾರ್ಟ್ ಸೆಲ್ಲಿಂಗ್ ಉಪಾಯವನ್ನ ಬಳಸಿ, ದಮಾನಿ ಶ್ರೀಮಂತರಾದ್ರು. ಇದಾದ ಬಳಿಕ ಹಲವು ಕಂಪೆನಿಗಳಲ್ಲಿ ಇನ್ವೆಸ್ಟ್ ಮಾಡಿ, ಶೇರ್ ಹೋಲ್ಡರ್ ಆದ್ರು. ಇದಾದ ಬಳಿಕ ಅಪ್ನಿ ಸ್ಟೋರ್ಸ್ ಎನ್ನುವ ಮಾರ್ಟ್‌ನ ಫ್ರ್ಯಾಂಚೈಸಿ ಖರೀದಿಸಿ, ಅದನ್ನು ನಡೆಸಲು ಶುರು ಮಾಡಿದ್ರು. ಆದ್ರೆ ಅದರಿಂದೇನೂ ಪ್ರಯೋಜನವಾಗಲಿಲ್ಲ. ಆಗ ದಮಾನಿ ತಲೆಗೆ ಹೊಳೆದ ಐಡಿಯಾನೇ ಈ ಡಿ ಮಾರ್ಟ್. 2002ರಲ್ಲಿ ಮುಂಬೈನ ಪಾವೈನಲ್ಲಿ ಮೊದಲ ಡಿ ಮಾರ್ಟ್ ಆರಂಭಿಸಲಾಯ್ತು.
ಇನ್ನು ಡಿ ಮಾರ್ಟ್‌ನಲ್ಲಿ ಡಿಸ್ಕೌಂಟ್‌ನಲ್ಲಿ ವಸ್ತುಗಳನ್ನು ಖರೀದಿಸಿದರೂ, ಅದ್ಹೇಗೆ ದಮಾನಿ ಇಷ್ಟು ಲಾಭ ಗಳಿಸುತ್ತಾರೆ ಅನ್ನೋ ಪ್ರಶ್ನೆಗೆ ಉತ್ತರ, ವ್ಯಾಪಾರ ತಂತ್ರ, ಬುದ್ಧಿವಂತಿಕೆ ಮತ್ತು ನಿಯತ್ತು. ಎಷ್ಟೋ ಉದ್ಯಮಿಗಳು ವ್ಯಾಪಾರಸ್ಥರ ಬಳಿ ಸಾಮಗ್ರಿಯನ್ನು ಖರೀದಿಸಿದ ಮೇಲೆ , ಅವರಿಗೆ ಸರಿಯಾಗಿ ದುಡ್ಡು ಕೊಡುವುದಿಲ್ಲ. ಆದ್ರೆ ದಮಾನಿ ಒಂದೇ ವಾರದಲ್ಲಿ ವ್ಯಾಪಾರಸ್ಥರ ದುಡ್ಡನ್ನು ಹಿಂದಿರುಗಿಸಿ ಬಿಡ್ತಿದ್ರು. ಹೀಗಾಗಿ ವ್ಯಾಪಾರಸ್ಥರು ದಮಾನಿಯವರಿಗೆ ಡಿಸ್ಕೌಂಟ್ ಕೊಡೋಕ್ಕೆ ಶುರು ಮಾಡಿದ್ರು.
ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..
ಇಲ್ಲಿ ದಮಾನಿ ವ್ಯಾಪಾರ ತಂತ್ರ ಬಳಸಿ, ತಮಗೆ ಬಂದ ಡಿಸ್ಕೌಂಟ್‌ನ್ನು ಗ್ರಾಹಕರಿಗೆ ಕೊಡೋಕ್ಕೆ ಶುರು ಮಾಡಿದ್ರು. ಹೀಗೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಾ ಹೋಯ್ತು. ಇನ್ನು ಹಲವರು ದೊಡ್ಡ ದೊಡ್ಡ ಜಾಗವನ್ನು ಖರಿದಿಸುವಾಗ ಲೀಸ್‌ಗೆ ತೆಗೆದುಕೊಳ್ತಾರೆ. ಆದ್ರೆ ದಮಾನಿ ಬುದ್ಧಿವಂತಿಕೆ ಉಪಯೋಗಿಸಿ, ಜಾಗವನ್ನು ಪರ್ಚೇಸ್ ಮಾಡ್ತಿದ್ರು, ವಿನಃ ಲೀಸ್‌ಗೆ ತೆಗೆದುಕೊಂಡು, ರೆಂಟ್ ಕಟ್ಟಿ ಲಾಸ್ ಮಾಡಿಕೊಳ್ಳುತ್ತಿರಲಿಲ್ಲ.
ಇನ್ನು ರಾಧಾಕಿಶನ್ ದಮಾನಿ ಹೀಗೆ ಗೆದ್ದಿದ್ದು, ಭಾರತದ ಎರಡನೇ ಶ್ರೀಮಂತ ವ್ಯಕ್ತಿ, ಭಾರತದ ವಾರನ್ ಬಫೆಟ್ ಅನ್ನಿಸಿಕೊಂಡಿದ್ದು ಅವರ ಸಿಂಪ್ಲಿಸಿಟಿಯಿಂದ. ಇವರು ಜನರ ಮನಸ್ಸನ್ನು ಅರಿತಿದ್ದರು, ಮಧ್ಯಮ ವರ್ಗದವರ ಕಷ್ಟವನ್ನು ತಿಳಿದಿದ್ದರು. ಹೀಗಾಗಿ ಡಿ ಮಾರ್ಟ್ ಎಂಬ ಸ್ಟೋರ್ ಮೂಲಕ, ಕಡಿಮೆ ದರಕ್ಕೆ ವಸ್ತುಗಳನ್ನು ಮಾರುತ್ತಿದ್ದಾರೆ. ಇವರ ಸರಳತೆ, ಬುದ್ಧಿವಂತಿಕೆ, ನಿಯತ್ತೇ ಇವರ ಗೆಲುವಿಗೆ ಕಾರಣ ಅಂದ್ರೆ ತಪ್ಪಾಗಲ್ಲ.
Discussion about this post