ಕಾನ್ಪುರ: ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದಲ್ಲಿ ಉತ್ತಮ ಆರಂಭ ಪಡೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾವು ಆರಂಭಿಕ ಆಟಗಾರ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜ ಅವರ ಅರ್ಧಶತಕಗಳ ನೆರವಿನೊಂದಿಗೆ 4 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದೆ.
ಮಯಂಕ್ ಅಗರ್ವಾಲ್ ಜತೆ ಆರಂಭಿಕರಾಗಿ ಕ್ರೀಸಿಗಿಳಿದ ಶುಭಮನ್ ಗಿಲ್ 93 ಎಸೆತಗಳಲ್ಲಿ 52 ರನ್ ಗಳಿಸಿದರು. ಇದರಲ್ಲಿ ಒಂದು ಆಕರ್ಷಕ ಸಿಕ್ಸರ್ ಕೂಡ ಸೇರಿತ್ತು.
ಇದನ್ನೂ ಓದಿ: IPL 2022: ಮೂರು ಸೀಸನ್ಗೆ ಧೋನಿಯನ್ನು ಉಳಿಸಿಕೊಳ್ಳಲಿದೆ ಸಿಎಸ್ಕೆ, ಡೆಲ್ಲಿಗೆ ಪಂತ್ ನಾಯಕ
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ತಂಡದ ಮೊತ್ತ ಕೇವಲ 21 ರನ್ ಇರುವಾಗ, ಚೆನ್ನಾಗಿ ಆಡುವ ಭರವಸೆ ವ್ಯಕ್ತಪಡಿಸಿದ್ದ ಮಯಂಕ್ ಅವರಿಗೆ ಜೆಮಿಸನ್ ಅವರು ಪೆವಿಲಿಯನ್ ಹಾದಿ ತೋರಿಸಿದರು. ಆದರೆ, ಮತ್ತೊಂದಡೆ ಗಿಲ್ ದಿಟ್ಟವಾಗಿ ಆಡುತ್ತಿದ್ದರು. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 26 ರನ್ ಗಳಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ನಾಯಕ ಅಜಿಂಕ್ಯ ರಹಾನೆ ಅವರಿಗೂ ದೊಡ್ಡ ಮೊತ್ತ ಗಳಿಸುವುದು ಸಾಧ್ಯವಾಗಲಿಲ್ಲ. ಅವರು 35 ರನ್ ಗಳಿಸಿ ಜೆಮಿಸನ್ಗೆ ವಿಕೆಟ್ ಒಪ್ಪಿಸಿದರು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಗಿಲ್ ಕೂಡ ಜೆಮಿಸನ್ಗೆ ವಿಕಟ್ ಒಪ್ಪಿಸಿದರು.
ಪಾದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಪಾರಮ್ಯ
ಒಂದು ಹಂತದಲ್ಲಿ ತಂಡದ ಮೊತ್ತ 145 ಆಗಿದ್ದಾಗ ಪ್ರಮುಖ 4 ವಿಕೆಟ್ ಪತನಗೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ನೆರವಾದವರು ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ಶ್ರೇಯಸ್ ಅಯ್ಯರ್ ಹಾಗೂ ಅನುಭವಿ ಆಲ್ರೌಂಡರ್ ಆಟಗಾರ ರವೀಂದ್ರ ಜಡೇಜಾ. ಇಬ್ಬರೂ ಮುರಿಯದ 5ನೇ ವಿಕೆಟ್ಗೆ 113 ರನ್ ಕಲೆಹಾಕಿದರು. ಸದ್ಯ ದಿನದ ಆಟದ ಅಂತ್ಯಕ್ಕೆ ಶ್ರೇಯಸ್ ಅಯ್ಯರ್ 75 ಹಾಗೂ ರವೀಂದ್ರ ಜಡೇಜಾ 50 ರನ್ ಗಳಿಸಿ ಆಡುತ್ತಿದ್ದಾರೆ.
ನ್ಯೂಜಿಲೆಂಡ್ ಪರ ಕೈಲ್ ಜೆಮಿಸನ್ 3 ವಿಕೆಟ್ ಹಾಗೂ ಟಿಮ್ ಸೌಥಿ ಒಂದು ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಸುದ್ದಿಗಳು…
ವಿರಾಮದ ವೇಳೆ ವಿರಾಟ್ ಸೆಲ್ಫೀ: ಅನುಷ್ಕಾರನ್ನು ‘ಮೈ ರಾಕ್’ ಎಂದ ಕಿಂಗ್ ಕೊಹ್ಲಿ
ಟ್ವೆಂಟಿ-20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್: ವಿರಾಟ್ ಕೊಹ್ಲಿಯ ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ನಾಯಕ ರೋಹಿತ್, ರಾಹುಲ್ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಭಾರತ
Discussion about this post