ಸೆಂಚುರಿಯನ್: ದಕ್ಷಿಣ ಆಫ್ರಿಕಾದ ಸೂಪರ್ಸ್ಪೋರ್ಟ್ಸ್ ಪಾರ್ಕ್ನಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ಹಂತದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಶತಕ ಹಾಗೂ ಮಯಂಕ್ ಅಗರ್ವಾಲ್ ಅರ್ಧಶತಕದ ನೆರವಿನಿಂದ ಭಾರತ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದ ವಿರಾಟ್ ಕೊಹ್ಲಿ ಬಳಗವು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡು ಬ್ಯಾಟಿಂಗ್ ಮಾಡಿದ ಆರಂಭಿಕ ಜೋಡಿ ಮಯಂಕ್ ಮತ್ತು ರಾಹುಲ್ ಮೊದಲ ವಿಕೆಟ್ಗೆ 117 ರನ್ ಪೇರಿಸಿದರು. ನಂತರ ಬಂದ ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತೇಶ್ವರ್ ಪೂಜಾರ ಶೂನ್ಯಕ್ಕೆ ಔಟಾದರು. ಲಯ ಕಂಡುಕೊಳ್ಳಲು ಉತ್ಸುಕರಾಗಿದ್ದ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ರಾಹುಲ್ಗೆ ಇದು ಟೆಸ್ಟ್ನಲ್ಲಿ ಏಳನೇ ಶತಕವಾಗಿದೆ. ಕಳೆದ ಆಗಸ್ಟ್ನಲ್ಲಿ ಅವರು ಇಂಗ್ಲೆಂಡ್ನಲ್ಲಿ ಶತಕ ಗಳಿಸಿದ್ದರು.
ಇದನ್ನೂ ಓದಿ: Indian Cricket: ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಮಾಡುವುದನ್ನು ಯಾವಾಗಲೂ ಆನಂದಿಸಿದ್ದೇನೆ: ಹರ್ಭಜನ್ ಸಿಂಗ್
ಮೊದಲ ದಿನದಾಟದ ಮುಕ್ತಾಯಕ್ಕೆ ಭಾರತ ತಂಡವು 90 ಓವರ್ಗಳಲ್ಲಿ 3 ವಿಕೆಟ್ಗಳಿಗೆ 272 ರನ್ ಗಳಿಸಿತು. ಸದ್ಯ ರಾಹುಲ್ ಹಾಗೂ ರಹಾನೆ ಕ್ರೀಸ್ನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಲುಂಗಿ ಗಿಡಿ 3 ವಿಕೆಟ್ ಕಬಳಿಸಿದ್ದಾರೆ.
ಸ್ಕೋರ್
ಕೆ.ಎಲ್.ರಾಹುಲ್ – 122*
ಮಯಂಕ್ ಅಗರ್ವಾಲ್ – 60
ಚೇತೇಶ್ವರ್ ಪೂಜಾರ – 0
ವಿರಾಟ್ ಕೊಹ್ಲಿ – 35
ಅಜಿಂಕ್ಯ ರಹಾನೆ – 40*
ಇದನ್ನೂ ಓದಿ: Cricket: 2018-20ರ ಅವಧಿಯಲ್ಲಿ ಕ್ರಿಕೆಟ್ನಿಂದ ನಿವೃತ್ತಿ ಹೊಂದುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ: ಅಶ್ವಿನ್
Discussion about this post