ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್ನ 2022ರ ಟೂರ್ನಿಗೆ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಮಂಗಳವಾರ ರಾತ್ರಿ ಪ್ರಕಟಗೊಂಡಿದ್ದು ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಕೈಬಿಟ್ಟಿದೆ.
ಈವರೆಗೆ ಆಡಿದ ಎಲ್ಲ ಸರಣಿಗಳಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹಾಗೂ ನಾಯಕನಾಗಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ರಾಹುಲ್ ಅವರು ಈಗಾಗಲೇ ಹೊಸ ಫ್ರಾಂಚೈಸಿಯೊಂದನ್ನು (ಮುಂದಿನ ಐಪಿಎಲ್ಗೆ ಎರಡು ಹೊಸ ಫ್ರಾಂಚೈಸಿಗಳು ಸೇರ್ಪೆಯಾಗಲಿವೆ) ಸಂಪರ್ಕಿಸಿದ್ದಾರೆ. ಹೀಗಾಗಿ ಅವರನ್ನು ಪಂಜಾಬ್ ತಂಡ ಕೈಬಿಡುವ ಸಾಧ್ಯತೆ ಇದೆ ಎಂಬ ಕುರಿತು ಈ ಹಿಂದೆಯೇ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಕನ್ನಡಿಗರಾದ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮುಂದಾಗಿದೆ ಎಂಬ ವದಂತಿಗಳೂ ಹರಡಿವೆ. ರಾಹುಲ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಮುಂಬರುವ ಹರಾಜಿನಲ್ಲಿ ಸ್ಪಷ್ಟವಾಗಲಿದೆ.
ಇದನ್ನೂ ಓದಿ: IPL 2022: ತಂಡಗಳು ಉಳಿಸಿಕೊಂಡ ಆಟಗಾರರು ಯಾರೆಲ್ಲ? ಇಲ್ಲಿದೆ ನೋಡಿ
ಮುಂಬೈ ತಂಡದಲ್ಲಿ ಪಾಂಡ್ಯಗಿಲ್ಲ ಸ್ಥಾನ: ಕಳಪೆ ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ಈ ಬಾರಿ ಮುಂಬೈ ತಂಡ ಉಳಿಸಿಕೊಂಡಿಲ್ಲ. ಇಶಾನ್ ಕಿಶನ್ ಅವರನನ್ನೂ ಬಿಡುಗಡೆ ಮಾಡಲಾಗಿದೆ.
ಅತ್ತ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವೇಗಿ ಹರ್ಷಲ್ ಪಟೇಲ್ ಅವರನ್ನು ಆರ್ಸಿಬಿ ಬಿಡುಗಡೆ ಮಾಡಿದೆ.
ಇನ್ನಷ್ಟು ಸುದ್ದಿಗಳು…
ಅಕ್ಷರ್ ಪಟೇಲ್ ಮಾಂತ್ರಿಕ ಬೌಲಿಂಗ್ ದಾಳಿಗೆ ಮಂಕಾದ ನ್ಯೂಜಿಲ್ಯಾಂಡ್
ವಿರಾಮದ ವೇಳೆ ವಿರಾಟ್ ಸೆಲ್ಫೀ: ಅನುಷ್ಕಾರನ್ನು ‘ಮೈ ರಾಕ್’ ಎಂದ ಕಿಂಗ್ ಕೊಹ್ಲಿ
ಟ್ವೆಂಟಿ-20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್: ವಿರಾಟ್ ಕೊಹ್ಲಿಯ ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ನಾಯಕ ರೋಹಿತ್, ರಾಹುಲ್ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಭಾರತ
Discussion about this post