ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನವೇ ಗಾಯಾಳುಗಳ ಸಮಸ್ಯೆಗೆ ಒಳಗಾಗಿದ್ದ ಟೀಂ ಇಂಡಿಯಾ ಈಗ ಮತ್ತೆ ಅದೇ ಸಮಸ್ಯೆ ಎದುರಿಸುವಂತಾಗಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಮಯಂಕ್ ಅಗರ್ವಾಲ್ ಹಾಗೂ ಶುಭಮನ್ ಗಿಲ್ ಗಾಯದ ಕಾರಣ ಮೂರನೇ ದಿನದಾಟದಲ್ಲಿ ಫೀಲ್ಡಿಂಗ್ಗೆ ಬರಲಿಲ್ಲ.
2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಅಗರ್ವಾಲ್ ಅವರ ಬಲಗೈಗೆ ಪೆಟ್ಟಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಫೀಲ್ಡಿಂಗ್ ಮಾಡುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಇವರು ಮೊದಲ ಇನ್ನಿಂಗ್ಸ್ನಲ್ಲಿ 150 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 62 ರನ್ ಗಳಿಸಿದ್ದರು.
ಇದನ್ನೂ ಓದಿ: IND vs NZ Test: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಪಾರಮ್ಯ, ಸೋಲಿನ ಸುಳಿಯಲ್ಲಿ ಪ್ರವಾಸಿ ತಂಡ
ಶುಭಮನ್ ಗಿಲ್ ಕೂಡ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದು, ಫೀಲ್ಡಿಂಗ್ ಮಾಡುತ್ತಿಲ್ಲ. ಗಾಯದ ಕಾರಣ ಅವರ ಬದಲು ಎರಡನೇ ಇನ್ನಿಂಗ್ಸ್ನಲ್ಲಿ ಚೇತೇಶ್ವರ್ ಪೂಜಾರ ಮಯಂಕ್ ಜತೆ ಆರಂಭಿಕನಾಗಿ ಕ್ರೀಸಿಗೆ ಬಂದಿದ್ದರು. ಆದರೂ ಎರಡನೇ ಇನ್ನಿಂಗ್ಸ್ನಲ್ಲಿ ಒನ್ಡೌನ್ ಬ್ಯಾಟಿಂಗ್ಗೆ ಬಂದಿದ್ದ ಗಿಲ್ 47 ರನ್ ಗಳಿಸಿದ್ದರು.
ಎರಡನೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಡಿರುವ ಟೀಂ ಇಂಡಿಯಾ ದಿನದಾಟದ ಕೊನೆಯಲ್ಲಿ ನ್ಯೂಜಿಲೆಂಡ್ನ 5 ವಿಕೆಟ್ ಕಬಳಿಸಿದೆ. ದಿನಾಟದ ಕೊನೆಗೆ ಪ್ರವಾಸಿ ತಂಡ ಗಳಿಸಿರುವ ಕೇವಲ ರನ್ 140.
ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಆಲ್ರೌಂಡರ್ ರವೀಂದ್ರ ಜಡೇಜ, ವೇಗಿ ಇಶಾಂತ್ ಶರ್ಮಾ ಗಾಯಾಳುಗಳಾಗಿರುವುದು ತಿಳಿದುಬಂದಿತ್ತು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದರು.
ಇದನ್ನೂ ಓದಿ: ND vs NZ Test: ಎಜಾಜ್ 10 ವಿಕೆಟ್ ಸಾಧನೆ ಬಳಿಕ ಮಂಕಾದ ನ್ಯೂಜಿಲೆಂಡ್, ಮೊದಲ ಇನ್ನಿಂಗ್ಸ್ನಲ್ಲಿ 62ಕ್ಕೆ ಆಲೌಟ್
Discussion about this post